Video: ಬಹಿರಂಗ ಸಭೆಯಲ್ಲೇ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ!

ನವದೆಹಲಿ, ನವೆಂಬರ್ 29: ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. ತನ್ನ ಮಗನು ಆ ವ್ಯಕ್ತಿಯ ಮಗಳೊಂದಿಗೆ ಓಡಿ ಹೋಗಿದ್ದಾನೆ ಎಂಬುದಾಗಿ ಮಹಿಳೆಯು ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಭೀಕರವಾದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಬಗ್ಗೆ 'ಬೀಟಿ ಬಚಾವೊ ಮಹಾಪಂಚಾಯತ್'ನಲ್ಲಿ ಈ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊವೊಂದರಲ್ಲಿ, ಆ ವ್ಯಕ್ತಿ ವೇದಿಕೆಯಲ್ಲಿ ತನ್ನ ಪಕ್ಕದಲ್ಲಿಯೇ ನಿಂತು ಮತ್ತು ತನ್ನ ಮಗನ ವಿರುದ್ಧ ಮಾತನಾಡುತ್ತಿದ್ದನು. ಈ ವೇಳೆ ಮಧ್ಯ ಪ್ರವೇಶಿಸಿದ ಮಹಿಳೆಯು ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

"ನಾನು ಕಳೆದ ಐದು ದಿನಗಳಿಂದ ಪೊಲೀಸ್ ಠಾಣೆಯಲ್ಲಿ ಅಲೆದಾಡುತ್ತಿದ್ದೇನೆ, ಆದರೆ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ," ಎಂದು ಮೈಕ್ರೊಫೋನ್‌ನಲ್ಲಿ ತನ್ನ ಚಪ್ಪಲಿಗಳನ್ನು ತೆಗೆದು ಮನುಷ್ಯನನ್ನು ಹೊಡೆಯುವ ಮೊದಲು ಹೇಳಿದರು.

Shraddha Walkar Murder case: Why woman hits man with slippers

ಶ್ರದ್ಧಾ ವಾಕರ್ ಹತ್ಯೆ ಬೆನ್ನಲ್ಲೇ ಜಾಗೃತಿ ಸಭೆ:

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಆಘಾತಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಲಾಯಿತು ಮತ್ತು ಆಕೆಯ ಶವವನ್ನು ಅವರ ಲೈವ್-ಇನ್ ಪಾಲುದಾರ ಆಫ್ತಾಬ್ ಪೂನವಾಲಾ ತುಂಡುಗಳಾಗಿ ಕತ್ತರಿಸಿದರು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದರ ಮಧ್ಯೆ ನಡೆದ ಚಪ್ಪಲಿ ಹೊಡೆತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು.

ಸೋಮವಾರ ಆರೋಪಿ ಅಫ್ತಾಬ್ ಬಳಸಿದ್ದ ಆಯುಧ ವಶ:

ಶ್ರದ್ಧಾ ವಾಕರ್ ಅನ್ನು ಕೊಂದ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಬಳಸಿದ ಕೊಲೆಯ ಆಯುಧವನ್ನು ದೆಹಲಿ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದರು. ಈ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ದೆಹಲಿಯ ತಿಹಾರ್ ಜೈಲಿನ ಬ್ಯಾರಕ್ ಸಂಖ್ಯೆ 4ರಲ್ಲಿ ಇರಿಸಲಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಆರೋಪಿ ಅಫ್ತಾಬ್ ತನ್ನ ಫ್ಲಾಟ್‌ಗೆ ಆಹ್ವಾನಿಸಿದ ಇನ್ನೊಬ್ಬ ಹುಡುಗಿಗೆ ಉಡುಗೊರೆಯಾಗಿ ನೀಡಿದ್ದ ಶ್ರದ್ಧಾಳ ಉಂಗುರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹುಡುಗಿಯನ್ನು ತನ್ನ ಮನೆಗೆ ಕರೆಸಿದಾಗ ಶ್ರದ್ಧಾಳ ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು.

ಅಫ್ತಾಬ್ ತನ್ನ ಲಿವ್-ಇನ್ ಪಾಲುದಾರೆ ಶ್ರದ್ಧಾಳನ್ನು ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ತನ್ನ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದನು.

24 ಗಂಟೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಆರೋಪಿ:

ತಿಹಾರ್‌ನಲ್ಲಿ, ಅಫ್ತಾಬ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದ್ದು, 24 ಗಂಟೆಗಳ ಸಿಸಿಟಿವಿ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ. ಇನ್ನೊಂದು ದಿಕ್ಕಿನಲ್ಲಿ ಆರೋಪಿ ಅಫ್ತಾಬ್ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿರುವ ಶ್ರದ್ಧಾ ವಾಕರ್ ಅವರ ತಲೆಬುರುಡೆ ಮತ್ತು ದೇಹದ ಇತರ ಕೆಲವು ಭಾಗಗಳನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಎಂದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+