ಶ್ರದ್ಧಾ ಕೇಸ್: ಮಾಂಸ ಸಂರಕ್ಷಿಸುವ ಬಗ್ಗೆ ತರಬೇತಿ ಪಡೆದ ಆರೋಪಿ
ಶ್ರದ್ಧಾ ವಾಕರ್ ಹತ್ಯೆ ಮಾಡಿ ಮಾಂಸ ಸಂರಕ್ಷಿಸಲು ಆರೋಪಿ ಆಫ್ತಾಬ್ ಪೂನವಾಲಾ ತರಬೇತಿ ಪಡೆದಿದ್ದನೆಂದು ತಿಳಿದು ಬಂದಿದೆ.
ನವದೆಹಲಿ ಮಾರ್ಚ್ 8: ದೇಶವನ್ನು ದಿಗ್ಭ್ರಮೆಗೊಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ವಿಚಾರವೊಂದು ಬೆಳಕಿಗೆ ಬಂದಿದೆ. ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಬಂಧಿಯಾಗಿರುವ ಆಫ್ತಾಬ್ ಪೂನವಾಲಾ ಹಲವಾರು ವಿಚಾರಗಳನ್ನು ಪೊಲೀಸರ ಮುಂದೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಆರೋಪಿ ಆಫ್ತಾಬ್ ಮಾಂಸವನ್ನು ಹೇಗೆ ಸಂರಕ್ಷಿಸಬೇಕು ಎಂದು ತಿಳಿಯಲು ಬಾಣಸಿಗರಿಂದ ತರಬೇತಿ ಪಡೆದಿದ್ದರು ಎಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪೂನವಾಲಾ ತನ್ನ ಗೆಳತಿ ಶ್ರದ್ಧಾ ವಾಕರ್ ಅವರನ್ನು ಕತ್ತು ಹಿಸುಕಿ 35 ತುಂಡುಗಳಾಗಿ ಕತ್ತರಿಸಿ ಅಮಾನವೀಯವಾಗಿ ಹತ್ಯೆ ಮಾಡಿದ್ದರು. ಬಳಿಕ ಆಕೆಯ ಮೃತ ದೇಹವನ್ನು ಆರೋಪಿ ಆಫ್ತಾಬ್ 300-ಲೀಟರ್ ಫ್ರಿಜ್ನಲ್ಲಿ ಸುಮಾರು ಮೂರು ವಾರಗಳ ಕಾಲ ಸಂರಕ್ಷಿಸಿದ್ದನು. ಈ ವೇಳೆ ಆಫ್ತಾಬ್ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ನಿವಾಸದಲ್ಲಿ ವಾಸವಾಗಿದ್ದನು.
ಆರೋಪಿ ತಾಜ್ ಹೋಟೆಲ್‌ನಲ್ಲಿ ತರಬೇತಿಗೆ ಒಳಗಾಗಿದ್ದಾನೆಂದು ತಿಳಿದು ಬಂದಿದೆ. ಮಾಂಸವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ತನ್ನ ಗೆಳತಿಯನ್ನು ಕೊಲೆ ಮಾಡಿದ ನಂತರ ನೆಲವನ್ನು ಸ್ವಚ್ಚಗೊಳಿಸಲು ಆಫ್ಟಾಬ್ ಪೂನವಾಲಾ ಡ್ರೈ ಐಸ್, ಊದಿನ ಕಡ್ಡಿ ಮತ್ತು ಫಿನಾಯಿಲ್‌ನಂತಹ ರಾಸಾಯನಿಕಗಳನ್ನು ಆರ್ಡರ್ ಮಾಡಿದ್ದಾನೆಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ನ್ಯಾಯಾಲಯದಲ್ಲಿ ಅಪರಾಧದ ಸಂಪೂರ್ಣ ವಿವರನ್ನು ದೆಹಲಿ ಪೊಲೀಸರಿಂದ ಪಡೆದಿದ್ದಾರೆ.

ಶ್ರದ್ಧಾ ವಾಕರ್‌ನನ್ನು ಕೊಂದ ಒಂದು ವಾರದೊಳಗೆ ಪೂನವಾಲಾ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನೆಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಅವರ ಹೊಸ ಗೆಳತಿಗೆ ಅವರು ಈ ಹಿಂದೆ ಶ್ರದ್ಧಾಗೆ ನೀಡಿದ್ದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾನೆ. ಆಫ್ತಾಬ್ ಪೂನವಾಲಾ ಶ್ರದ್ಧಾ ದೇಹವನ್ನು ವಿಲೇವಾರಿ ಮಾಡುವ ಮೊದಲು ಹಲವಾರು ದಿನ ಏಕಾಂತ ಸ್ಥಳಗಳಲ್ಲಿ ಇದ್ದರು ಎಂದು ಹೇಳಿಲಾಗಿದೆ.
ಆಗಾಗ ಹಲ್ಲೆ ಮಾಡುತ್ತಿದ್ದ ಅಫ್ತಾಬ್
ಅಫ್ತಾಬ್‌ನನ್ನು ನವೆಂಬರ್ 14 ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ವಿಚಾರ ಅಂದರೆ ಅಫ್ತಾಬ್ ಪೋಷಕರೂ ಈ ವಿಚಾರ ತಿಳಿದಿತ್ತು ಎನ್ನಲಾಗುತ್ತಿದೆ. ಹಲ್ಲೆ ಘಟನೆ ನಡೆದಾಗ ಅಫ್ತಾಬ್‌ನ ಪೋಷಕರೂ ಮಧ್ಯಪ್ರವೇಶಿಸಿ ಇಬ್ಬರು ವಾಸವಿದ್ದ ಫ್ಲಾಟ್‌ನಿಂದ ಇಬ್ಬರನ್ನು ಹೊರಹಾಕುವಂತೆ ಮಾಲೀಕರಿಗೆ ಹೇಳಿದ್ದರಂತೆ. ಹೀಗಾಗಿ ಶ್ರದ್ಧಾ ಮಾಜಿ ಬಾಸ್ ಬಳಿ ಬಂದು ಸಹಾಯ ಮಾಡಲು ಕೇಳಿಕೊಂಡಿದ್ದರಂತೆ. ಮಾಜಿ ಬಾಸ್ ಶ್ರದ್ಧಾ ಅವರಿಗೆ ವಸತಿ ಹುಡುಕಲು ಸಹಾಯ ಮಾಡಲು ಪ್ರಯತ್ನಿಸಿದ್ದರು. ಶ್ರದ್ಧಾ ಕರಣ್ ಭಕ್ಕಿ ಅವರ ಮನೆಯಲ್ಲಿ ಕೆಲಕಾಲ ಇರಲು ಕೂಡ ಮುಂದಾಗಿದ್ದರು ಎಂದು ಹೇಳಿದ್ದಾರೆ.
ಶ್ರದ್ಧಾ ಅವರ ಅನೇಕ ಸ್ನೇಹಿತರು ಅಫ್ತಾಬ್‌ನ ಹಲ್ಲೆಯ ಬಗ್ಗೆ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಿಯಕರ ಅಫ್ತಾಬ್ ಪೂನಾವಾಲಾ ನಡೆಸಿದ ಹಲ್ಲೆಯ ಬಗ್ಗೆ ಶ್ರದ್ಧಾ ವಾಕರ್ ಪ್ರಸ್ತಾಪ ಮಾಡಿದ್ದರು.

"ನವೆಂಬರ್ 2020 ರಲ್ಲಿ ನನಗೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಮೊದಲ ಬಾರಿಗೆ ತಿಳಿದುಬಂತು. ಅದಕ್ಕೂ ಮೊದಲು ಅವಳು ಆಗಾಗ್ಗೆ ಅನಾರೋಗ್ಯಕ್ಕೆ ರಜೆಗಾಗಿ ಕರೆ ಮಾಡುತ್ತಿದ್ದಳು" ಎಂದು ಮುಂಬೈನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವಾಗ ಆಕೆಯ ತಂಡದ ಮ್ಯಾನೇಜರ್ ಕರಣ್ ಹೇಳಿದ್ದಾರೆ.












Click it and Unblock the Notifications