ಕನ್ಹಯ್ಯಾ ಕುಮಾರ್‌ನನ್ನು ಶೂಟ್ ಮಾಡಿದರೆ 11 ಲಕ್ಷ ನಗದು!
ನವದೆಹಲಿ, ಮಾರ್ಚ್, 05: "ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ನನ್ನು ಶೂಟ್ ಮಾಡಿ ಕೊಲ್ಲುವವರಿಗೆ 11 ಲಕ್ಷ ರು.!"
ಹೌದು...ಇಂಥದ್ದೊಂದು ಭಿತ್ತಿ ಪತ್ರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಣಿಸಿಕೊಂಡಿವೆ. ನವದೆಹಲಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿರುವ ಚಿಕ್ಕ ಗಾತ್ರದ ಈ ಪೋಸ್ಟರ್‌ಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಜನರಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಪೂರ್ವಾಂಚಲ ಸೇನೆ ಮತ್ತು ಅದರ ಅಧ್ಯಕ್ಷ ಆದರ್ಶ ಶರ್ಮಾ ಅವರ ಹೆಸರು ಕಂಡು ಬಂದಿದೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

"ದೇಶದ್ರೋಹಿ ಕನ್ಹಯ್ಯಾ ಕುಮಾರ್‌ನನ್ನು ಶೂಟ್ ಮಾಡಿ ಕೊಲ್ಲುವ ಯಾರಿಗೇ ಆದರೂ ಪೂರ್ವಾಂಚಲ ಸೇನೆ 11 ಲಕ್ಷ ರೂ. ಇನಾಮು ನೀಡಲಿದೆ' ಎಂದು ಹಿಂದಿಯಲ್ಲಿ ಬರೆಯಲಾಗಿದೆ.[ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!]
ನಾಲಿಗೆ ಕತ್ತರಿಸುವವರಿಗೆ 5 ಲಕ್ಷ
ಕನ್ಹಯ್ಯಾ ಕಮಾರ್‌ನ ನಾಲಗೆಯನ್ನು ಕತ್ತರಿಸಿ ತರುವವರಿಗೆ ಐದು ಲಕ್ಷ ರೂ. ನಗದು ಇನಾಮು ಕೊಡುವುದಾಗಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಕುಲದೀಪ್ ವರ್ಶ್ನೆ ಇನ್ನೊಂದೆಡೆ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿ ಮಾಡಿದೆ.
Pretty shocking poster near Press Club offering reward for killing of #KanhaiyaKumar pic.twitter.com/UTysrGTZ43
— Rezaul Hasan Laskar (@Rezhasan) March 5, 2016
ಇನ್ನೊಬ್ಬ ಜಿನ್ನಾ ಹುಟ್ಟಲು ಬಿಡುವುದಿಲ್ಲ
ಕನ್ಹಯ್ಯಾ ಮೇಲೆ ವಾಗ್ದಾಳಿ ಮಾಡಿರುವ ಬಿಜೆಪಿ ಸಂಸದ ಯೋದಿ ಆದಿತ್ಯನಾಥ್, ಜೆಎನ್‌ಯುನಲ್ಲಿ ಮುಹಮ್ಮದ್ ಅಲಿ ಜಿನ್ನಾರಂತ ಇನ್ನೊಬ್ಬರನ್ನು ಹುಟ್ಟಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ದೇಶದ್ರೋಹದ ಚಟುವಟಿಕೆ ನಡೆಸುವ ಯಾರನ್ನೇ ಆದರೂ ನಾಶ ಮಾಡದೇ ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.
-
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್












Click it and Unblock the Notifications