ಪ್ರದ್ಯುಮಾನ್ ಠಾಕೂರ್ ಸತ್ತಿದ್ದು ಆಘಾತ ಮತ್ತು ಬ್ರೈನ್ ಹೆಮ್ರೇಜ್ ನಿಂದ!
ನವದೆಹಲಿ, ಸೆಪ್ಟೆಂಬರ್ 16: ಗುರ್ ಗಾಂವ್ ರಾಯನ್ ಶಾಲೆಯಲ್ಲಿ ದುರಂತ ಅಂತ್ಯ ಕಂಡ 7 ವರ್ಷದ ಮುದ್ದು ಕಂದ ಪ್ರದ್ಯುಮಾನ್ ಠಾಕೂರ್ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಬಾಲಕ ಆಘಾತ ಮತ್ತು ಹೆಮರೇಜ್ ನಿಂದ ಸಾವಿಗೀಡಾಗಿದ್ದಾನೆಂದು ವರದಿ ತಿಳಿಸಿದೆ.
ಅನಿರೀಕ್ಷಿತವಾಗಿ ಯಾರೋ ತನ್ನ ಕತ್ತು ಸೀಳಿದ್ದರಿಂದ ಪುಟ್ಟ ಹುಡುಗನಿಗೆ ಏನಾಗುತ್ತಿದೆ ಎಂಬುದೇ ತಿಳಿಯದೆ, ಭಯದಿಂದ ಆಘಾತವಾಗಿ, ಬ್ರೈನ್ ಹೆಮರೇಜ್ ಸಂಭವಿಸಿದ್ದರಿಂದ ಆತ ತಕ್ಷಣವೇ ಮೃತನಾಗಿದ್ದಾನೆಂದು ವರದಿ ಹೇಳಿದೆ.

ಸೆಪ್ಟೆಂಬರ್ 8 ರಂದು ಗುರ್ ಗಾಂವ್ ರಾಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪ್ರದ್ಯುಮಾನ್ ಠಾಕೂರ್ ನನ್ನು ಆತನ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿ ಸಾಯಿಸಲಾಗಿತ್ತು. ಮೇಲ್ನೋಟಕ್ಕೆ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯ ನಂತರ ಬಾಲಕನ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸಾಬೀತಾಗಿತ್ತು.
ಘಟನೆಯ ನಂತರ ಕಾಣೆಯಾಗಿರುವ ಶಾಲಾ ವಾಹನದ ಕಂಡಕ್ಟರ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಘಟನೆಯ ನಂತರ ಶಾಲೆಗೆ ಬೀಗ ಹಾಕಲಾಗಿತ್ತು. ಆದರೆ ಬೇರೆ ಮಕ್ಕಳಿಗೆ ಇದರಿಂದ ಸಮಸ್ಯೆಯಾಗುತ್ತದಾದ್ದರಿಂದ ಸೆ.18 ರಿಂದ ಶಾಲೆಯನ್ನು ಮತ್ತೆ ತೆರೆಯಲು ಅನುಮತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications