Shiva Temple: 32 ವರ್ಷಗಳ ನಂತರ ಬಾಗಿಲು ತೆರೆದ ಶಿವನ ದೇವಾಲಯ; ಮುಸ್ಲಿಮರು ಮಾಡಿದ್ದೇನು?

ಅಯೋಧ್ಯೆ ರಾಮಮಂದಿರ ವಿವಾದದ ಸಂದರ್ಭದಲ್ಲಿ ಮುಚ್ಚಿದ್ದ ಶಿವನ ದೇವಾಲಯದ ಬಾಗಿಲನ್ನು 32 ವರ್ಷಗಳ ಬಳಿಕ ತೆರೆಯಲಾಗಿದೆ. ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದಲ್ಲಿರುವ ದೇವಾಲಯದ ಬಾಗಿಲನ್ನು ಅದ್ದೂರಿ ಕಾರ್ಯಕ್ರಮದ ಮೂಲಕ ತೆರೆಯಲಾಗಿದೆ. ಸ್ಥಳೀಯ ಮುಸ್ಲಿಮರು ಕೂಡ ಈ ಕಾರ್ಯಕ್ರಮದಲ್ಲಿ ಸಂಭ್ರಮದಿಂದಲೇ ಭಾಗವಹಿಸಿದ್ದು ಹಿಂದೂ ಧರ್ಮಿಯರ ಮೆರವಣಿಗೆ ಮೇಲೆ ಹೂವು ಎರಚುವ ಮೂಲಕ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿರುವ ಕೋಟ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯ ಲುಧಾವಾಲಾದಲ್ಲಿ ಈ ಘಟನೆ ನಡೆದಿದೆ. ಪಿಟಿಐ ವರದಿಯ ಮಾಡಿರುವ ಪ್ರಕಾರ 1971ರಲ್ಲಿ ಇಲ್ಲಿ ಶಿವನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿತ್ತು, 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಬಳಿಕ ಎರಡು ಕೋಮುಗಳ ನಡುವೆ ಘರ್ಷನೆಯಾಗಿದ್ದರಿಂದ ದೇವಸ್ಥಾನವನ್ನು ಮುಚ್ಚಲಾಗಿತ್ತು.

shiva temple reopens in muzaffarnagar after 32 years muslims showered flowers

ಮುಸ್ಲಿಮರು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಇಲ್ಲಿದ್ದ ಹಿಂದೂಗಳು ಭಯದಿಂದ ಈ ಪ್ರದೇಶವನ್ನು ತೊರೆದಿದ್ದರು. ಹಿಂದೂಗಳು ಹೋಗುವಾಗ ದೇವಸ್ಥಾನದಲ್ಲಿ ಶಿವಲಿಂಗ ಮತ್ತು ದೇವರ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು.

ಶಾಂತಿಯುತವಾಗಿ ನಡೆದ ಸಮಾರಂಭ

ಸಿಟಿ ಮ್ಯಾಜಿಸ್ಟ್ರೇಟ್ ವಿಕಾಸ್ ಕಶ್ಯಪ್ ಶಾಂತಿಯುತವಾಗಿ ಸಮಾರಂಭ ನಡೆದಿದೆ ಎಂದು ಹೇಳಿದ್ದಾರೆ. ಯಾವುದೇ ಗೊಂದಲವಿಲ್ಲದೆ ಎಲ್ಲಾ ಕಾರ್ಯಕ್ರಮಗಳು ಯಾವುದೇ ಗೊಂದಲವಿಲ್ಲದೆ ನಡೆದಿವೆ. ಸ್ವಾಮಿ ಯಶ್ವೀರ್ ಮಹಾರಾಜ್ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಶಾಂತಿಯುತವಾಗಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗಿದ್ದಾರೆ ಎಂದು ಪಿಟಿಐಗೆ ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿದ ಹಿಂದೂಗಳ ಮೇಲೆ ಮುಸ್ಲಿಮರು ಹೂವಿನ ಮಳೆ ಸುರಿಸುವ ಮೂಲಕ ಸ್ವಾಗತಿಸಿದ್ದಾರೆ. ದೇವಸ್ಥಾನದ ಶುದ್ಧೀಕರಣ, ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಯಶ್ವೀರ್ ಮಹಾರಾಜ್ ಮಾತನಾಡಿ, ಇದು ನಮಗೆ ಮಹತ್ವದ ಕ್ಷಣ, ಇಷ್ಟು ವರ್ಷ ಮುಚ್ಚಿದ್ದ ದೇವಾಲಯವನ್ನು ಶುದ್ಧೀಕರಣ ಮಾಡಿ ಮತ್ತೆ ತೆರೆಯಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಡಿಸೆಂಬರ್ 23ರಂದು ದೇವಸ್ಥಾನದ ಬಾಗಿಲು ತೆಗೆಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಕಹಿಘಟನೆ ನಡೆಯದಂತೆ ಶಾಂತಿ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಜಿಲ್ಲಾಡಳಿಯ ಕೂಡ ಭದ್ರತಾ ವ್ಯವಸ್ಥೆ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+