ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂದರ್ಶನವನ್ನು ಹೀನಾಮಾನ ಟೀಕಿಸಿದ ಶತ್ರುಘ್ನ ಸಿನ್ಹಾ

|
Google Oneindia Kannada News

ನವದೆಹಲಿ, ಜನವರಿ 3: ಬಿಜೆಪಿಯೊಳಗಿದ್ದು ಪಕ್ಷದ ನಾಯಕರ ವಿರುದ್ಧವೇ ನಿರಂತರವಾಗಿ ಹೇಳಿಕೆ ನೀಡುವ, ನಿರ್ಭಿಡೆಯಿಂದ ಟೀಕಿಸುವ ಸಂಸದ ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವನ್ನು ಲೇವಡಿ ಮಾಡಿದ್ದಾರೆ.

ಮೋದಿ ಅವರ ಸಂದರ್ಶನ ಅಷ್ಟೇನೋ ಸೊಗಸಾಗಿರಲಿಲ್ಲ. ಅದು ಪೂರ್ವ ನಿರ್ಧರಿತ, ಸಂಯೋಜಿತ, ಉತ್ತಮ ಸಂಶೋಧಿತ ಮತ್ತು ಚೆನ್ನಾಗಿ ತಾಲೀಮು ಮಾಡಿದ ಸಂದರ್ಶನ ಎಂದಿರುವ ಶತ್ರುಘ್ನ ಸಿನ್ಹಾ, ತಮ್ಮ ಹಿಂದಿನ ಪ್ರಧಾನಿಗಳು ಮಾಡಿದಂತೆಯೇ ಪತ್ರಿಕಾಗೋಷ್ಠಿಯನ್ನು ನಡೆಸಿ ಅಲ್ಲಿಯೇ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಮೋದಿ ಸಂದರ್ಶನ ಮಾಡಿದ ಸಂಪಾದಕಿಗೆ ರಾಹುಲ್ ಗಾಂಧಿ ಟಾಂಗ್ಮೋದಿ ಸಂದರ್ಶನ ಮಾಡಿದ ಸಂಪಾದಕಿಗೆ ರಾಹುಲ್ ಗಾಂಧಿ ಟಾಂಗ್

ಸ್ವಪಕ್ಷದ ವಿರುದ್ಧವೇ ಹರಿಹಾಯುವ ಮೂಲಕ ಶಾಟ್ ಗನ್ ಎಂಬ ಹೆಸರು ಪಡೆದುಕೊಂಡಿರುವ ಶತ್ರುಘ್ನ ಸಿನ್ಹಾ, ಮೋದಿ ಅವರ ಸಂದರ್ಶನವನ್ನು ವಿಮರ್ಶೆಗೆ ಒಡ್ಡಿದ್ದಾರೆ.

Array

ಸಮರ್ಥ ನಾಯಕರಾಗಲು ಕಾಲವಲ್ಲವೇ?

'ಸರ್, ನಾವು ನಿಮ್ಮ ಪೂರ್ವ ನಿರ್ಧರಿತ ಪ್ರಶ್ನೆಗಳ, ಸಂಯೋಜಿತ, ಚೆನ್ನಾಗಿ ಸಂಶೋಧನೆ ಮಾಡಿದ ಮತ್ತು ತಾಲೀಮು ನಡೆಸಿದ ಟಿವಿ ಸಂದರ್ಶನವನ್ನು ಸೋಮವಾರ ಸಂಜೆ ನಾವೆಲ್ಲ ನೋಡಿದ್ದೇವೆ. ಅದರ ನಿರೂಪಕಿ, ವಿಶಿಷ್ಟ ಮಹಿಳೆ ಸ್ಮಿತಾ ಪ್ರಕಾಶ್ ಅವರಿಗೆ ಗೌರವ ನೀಡುತ್ತಿದ್ದೇನೆ. ಆದರೆ ಹಠಾತ್ತನೆ ಎದುರಾಗುವ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಮೂಲಕ ಇದು ಯೋಗ್ಯ ಮತ್ತು ಸಮರ್ಥ ನಾಯಕರಾಗಿ ನಿಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಅತ್ಯುನ್ನತ ಮತ್ತು ಸೂಕ್ತ ಸಮಯವಲ್ಲವೇ ಎಂದು ಸರಣಿ ಟ್ವೀಟ್‌ಗಳಲ್ಲಿ ಶತ್ರುಘ್ನ ಸಿನ್ಹಾ, ಮೋದಿ ಅವರನ್ನು ಕೆಣಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂದರ್ಶನದ ಉತ್ತರಗಳಿಗೆ ಪ್ರಶ್ನೆಗಳ ಸುರಿಮಳೆಪ್ರಧಾನಿ ನರೇಂದ್ರ ಮೋದಿ ಸಂದರ್ಶನದ ಉತ್ತರಗಳಿಗೆ ಪ್ರಶ್ನೆಗಳ ಸುರಿಮಳೆ

Array

ಧೈರ್ಯ ಇರಬಹುದೇ?

'ನೀವು ಅವರನ್ನು ಎದುರಿಸಲು ಬಯಸುವುದಿಲ್ಲ ಎಂಬುದು ನಮಗೆ ಗೊತ್ತು. ಆದರೆ ಕಡೇಪಕ್ಷ ಯಶವಂತ್ ಸಿನ್ಹಾ ಅವರಂತಹ ನಾಯಕರು ಮತ್ತು ತಿಳಿವಳಿಕಸ್ಥ ಪತ್ರಕರ್ತ ಅರುಣ್ ಶೌರಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಇರಬಹುದು ಎಂದು ಭಾವಿಸಿದ್ದೇವೆ' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

'ಮೋದಿ ಅವರ ಸಂದರ್ಶನ ಸುಗಮ ಮತ್ತು ಸಂಯೋಜಿತವಾಗಿತ್ತು. ಆದರೆ, ಇದು ಅವರ ಹಿಂದಿನ ಪ್ರದರ್ಶನಗಳಷ್ಟು ಪರಿಣಾಮಕಾರಿಯಾಗಿರಲಿಲ್ಲ' ಎಂದಿದ್ದಾರೆ.

ನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ

ರಾಗ್ ದರ್ಬಾರಿಗಳು ಸಾಕು

'ಈ ಹಿಂದೆ ಎಲ್ಲ ಪ್ರಧಾನಿಗಳೂ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದರು. ಆದರೆ ಸರ್, ನಿಮ್ಮ 4.5 ವರ್ಷದ ಅವಧಿಯಲ್ಲಿ ಒಂದೂ ಸುದ್ದಿಗೋಷ್ಠಿ ನಡೆಸಿಲ್ಲ. ಏಕೆ ಸರ್? ಯಾವಾಗಲೂ ನಿಮ್ಮೊಂದಿಗಿರುವ 'ರಾಗ್ ದರ್ಬಾರಿ' ಗುಂಪಿನ ಪತ್ರಕರ್ತರಿಗೆ ಮಾತ್ರವಲ್ಲದೆ, ಸರ್ಕಾರಿ ಮನಸ್ಥಿತಿ ಇಲ್ಲದ ಪ್ರಬುದ್ಧ ಪತ್ರಕರ್ತರನ್ನೂ ಎದುರಿಸಿ ಎಂದು ಸವಾಲೊಡ್ಡಿದ್ದಾರೆ.

ನಾಟಕೀಯತೆ ಬೇಡ

ಮಿತ್ರಪಕ್ಷಗಳು ಎನ್‌ಡಿಎಯನ್ನು ತೊರೆಯುತ್ತಿರುವುದರ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿರುವ ಸಿನ್ಹಾ, 'ಸಬ್ ಕಾ ಸಾತ್, ಸಬ್ ಕಾ ವಿಕಾಸ್', 'ರಾಮ ಜನ್ಮಭೂಮಿ' ಘೋಷಣೆಯ ನಡುವೆಯೂ ವಿಭಿನ್ನ ಜನರು ನಮ್ಮನ್ನು ತೊರೆಯುತ್ತಿರುವುದು ಏಕೆ? ಹೊಸ ವರ್ಷದಲ್ಲಿ ಶುದ್ಧವಾಗಿ ಬರೋಣ. ನಾಟಕೀಯತೆ ಇಲ್ಲದೆ ಧೈರ್ಯವಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿರೋಣ ಎಂದಿದ್ದಾರೆ.

ಟೀಕೆಯನ್ನು ಸ್ವೀಕರಿಸಿ

'ಒಬ್ಬ ಸ್ನೇಹಿತನಾಗಿ, ಸಹೋದ್ಯೋಗಿಯಾಗಿ ಮತ್ತು ಸಹೋದರನಾಗಿ ತಮ್ಮ ಟೀಕೆಯನ್ನು ಸ್ವೀಕರಿಸಬೇಕು. ಇದು ನಿಮಗೆ ಮತ್ತು ದೇಶಕ್ಕೆ ಒಳ್ಳೆಯದು. ಆದರೆ, ನೀವು ಇದನ್ನು ತಿರಸ್ಕರಿಸಿದರೆ ದೇವರೇ ನಮ್ಮನ್ನು ಕಾಪಾಡಬೇಕು. ಚುನಾವಣೆ ನಮ್ಮ ಅಂಚಿನಲ್ಲಿಯೇ ಇದೆ ಸರ್. ಪ್ರಜಾಪ್ರಭುತ್ವ ದೀರ್ಘ ಕಾಲ ಬಾಳಲಿ' ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

English summary
BJP MP Shatrughan sinha criticised Narendra Modi's Interview by ANI in his series of tweets as 'well-scripted, choreographed, well researched and rehearsed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X