ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಂದಾ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ತರೂರ್ ಪತ್ರ

|
Google Oneindia Kannada News

ನವದೆಹಲಿ, ಜ. 7 : ಸುನಂದಾ ಪುಷ್ಕರ್ ಸಾವು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸುನಂದಾ ಪುಷ್ಕರ್ ಪತಿ ಶಶಿ ತರೂರ್ ಕಳೆದ ನವೆಂಬರ್ ನಲ್ಲಿ ಬರೆದ ಪತ್ರವೊಂದು ಇದೀಗ ಬಹಿರಂಗಗೊಂಡಿದ್ದು ಮತ್ತೊಂದು ಚರ್ಚೆ ಹುಟ್ಟುಹಾಕಿದೆ.

ಹೆಂಡತಿ(ಸುನಂದಾ ಪುಷ್ಕರ್ ) ಸಾವಿನ ಪ್ರಕರಣದಲ್ಲಿ ನನ್ನನ್ನು ಅಪರಾಧಿಯಂತೆ ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಶಶಿ ತರೂರ್ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಕಳೆದ ನವೆಂಬರ್ 13 ರಂದು ತರೂರ್ ದೆಹಲಿ ಪೊಲೀಸ್ ಕಮಿಷನರ್ ಬಿಎಸ್ ಬಸ್ಸಿ ಅವರಿಗೆ ಪತ್ರ ಬರೆದಿದ್ದರ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದರು.[ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ]

shashi

ಸುನಂದಾ ಹತ್ಯೆಗೆ ಸಂಬಂಧಿಸಿದಂತೆ ನವೆಂಬರ್ 7ರಂದು ದೆಹಲಿ ಪೊಲೀಸ್ ಅಧಿಕಾರಿಗಳು ತರೂರ್ ಅವರ ಕೆಲಸದಾಳು ನಾರಾಯಣ್ ಸಿಂಗ್ ಅವರನ್ನು 16 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ನಾರಾಯಣ್ ಸಿಂಗ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಅಲ್ಲದೇ ನಾನು ಮತ್ತು ಆತ ಸೇರಿ ಸುನಂದಾರನ್ನು ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಹಾಕಿದ್ದರು ಎಂದು ತರೂರ್ ಆರೋಪ ಮಾಡಿದ್ದರು.

ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ, ಘಟನೆಗೆ ಬೇಕಾದ ಎಲ್ಲ ವಿವರಗಳನ್ನು ನೀಡುತ್ತಿದ್ದೇನೆ. ಆದರೆ ಪೊಲೀಸರು ವಿನಾಕಾರಣ ಒತ್ತಡ ತರುತ್ತಿದ್ದಾರೆ ಎಂದು ತರೂರ್ ಹೇಳಿದ್ದರು.

English summary
In a new twist to the Sunanda Pushkar murder case, it has emerged that Congress MP Shashi Tharoor had accused the Delhi police of torturing his domestic help to force him into implicating him (Tharoor) in the death of his wife, according to a letter he wrote to the Delhi Police Commissioner last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X