ಗುಜರಾತ್ ನಲ್ಲಿ ಉರುಳಿತು ಕಾಂಗ್ರೆಸ್ ದೊಡ್ಡ ವಿಕೆಟ್ !
ಗುಜರಾತ್ ಕಾಂಗ್ರೆಸ್ ಬಿಟ್ಟ ಹಿರಿಯ ಕಾಂಗ್ರೆಸ್ಸಿಗ ಶಂಕರ್ ಸಿಂಗ್ ವಾಘೇಲಾ. ಶುಕ್ರವಾರ ತಮ್ಮ 77ನೇ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಘೋಷಣೆ.
ಗಾಂಧೀನಗರ, ಜುಲೈ 21: ಗುಜರಾತ್ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಾಘೇಲಾ ಅವರು, ತಾವು ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದಾರೆ.
ಶುಕ್ರವಾರ ತಮ್ಮ ಅಭಿಮಾನಿಗಳೊಂದಿಗೆ ತಮ್ಮ 77ನೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.

''ನಾನು ಶೀಘ್ರದಲ್ಲೇ ಕಾಂಗ್ರೆಸ್ ತೊರೆಯುತ್ತಿದ್ದೇನೆ. ಪಕ್ಷದ ಮುಖಂಡರು ನನ್ನನ್ನು ಪಕ್ಷದಿಂದ ಉಚ್ಛಾಟಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನವೇ ನಾನು ಕಾಂಗ್ರೆಸ್ ತೊರೆಯಲಿದ್ದೇನೆ'' ಎಂದರು.
ಇದೇ ವೇಳೆ, ಅವರು ಬಿಜೆಪಿ ಸೇರಲಿರುವ ವದಂತಿಗಳನ್ನು ತಳ್ಳಿಹಾಕಿದರು. '' ನಾನು ಬಿಜೆಪಿ ಸೇರುವುದಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಯಾವುದೇ ಹೊಸ ಪಕ್ಷವನ್ನೂ ಸೇರುವುದಿಲ್ಲ'' ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು, 1996ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರಲ್ಲದೆ, ಆನಂತರ ಅಲ್ಲಿಂದಲೂ ಹೊರಬಂದು ರಾಷ್ಟ್ರೀಯ ಜನತಾ ದಳ ಎಂಬ ಪಕ್ಷ ಹುಟ್ಟುಹಾಕಿದ್ದರು. ಕೆಲವು ದಿನಗಳ ನಂತರ, ತಮ್ಮ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನಗೊಳಿಸಿದ್ದರು.












Click it and Unblock the Notifications