ಲೈಂಗಿಕ ದೌರ್ಜನ್ಯ: 'ಕ್ಷಮಿಸು ಅಕ್ಕ' ಎಂದು ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ
ಅಮರಾವತಿ, ಮಾರ್ಚ್ 31: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 17 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯೊಬ್ಬರು ತಾನು ಓದುತ್ತಿದ್ದ ಕಾಲೇಜಿನಲ್ಲಿಯೇ ಕಾಲೇಜು ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ. ತನಗೆ ಸಹ ವಿದ್ಯಾರ್ಥಿಗಳಿಂದ ಲೈಂಗಿಕ ಕಿರುಕುಳ ಉಂಟಾಗುತ್ತಿದೆ ಎಂದು ತನ್ನ ಮನೆಯವರಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಬಾಲಕಿ ತನ್ನ ಅಕ್ಕನಿಗೆ ತನ್ನನ್ನು ಕ್ಷಮಿಸುವಂತೆ ಮೆಸೇಜ್ ಮಾಡಿ, ತನಗೆ ಸಹಪಾಠಿಗಳಿಗಳು ಹೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತನಗೆ ಕಿರುಕುಳ ನೀಡಿದವರು ತನ್ನ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾ೦ಕಿದ್ದಾರೆ. ಘಟನೆ ಬಗ್ಗೆ ದೂರು ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಘಟನೆ ಏನು?
ಆಂಧ್ರಪ್ರದೇಶದ ನೆರೆಯ ಅನಕಪಲ್ಲಿ ಜಿಲ್ಲೆಯ ಬಾಲಕಿಯ ಕುಟುಂಬಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಲೇಜು ಅಧಿಕಾರಿಗಳು ಪೋನ್ ಮಾಡಿದ್ದು, ಆಕೆ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯವರು ಕೂಡ ಆಕೆಗೆ ಕರೆ ಮಾಡಿದ್ದಾರೆ. ಆದರೆ, ಅವರಿಗೂ ಆಕೆ ಸ್ಪಂದಿಸಿಲ್ಲ. ಬಳಿಕ ಶುಕ್ರವಾರ ಮಧ್ಯರಾತ್ರಿ 12:50 ರ ಸುಮಾರಿಗೆ, ತಮ್ಮ ಮನೆಯವರ ಮೆಸೇಜ್‌ಗಳಿಗೆ ರಿಫ್ಲೈ ಮಾಡಿದ್ದು, ಚಿಂತಿಸಬೇಡಿ ಎಂದು ಹೇಳಿದ್ದಾರೆ.
ಜೊತೆಗೆ, ತೆಲುಗಿನಲ್ಲಿ ಬರೆದ ಮೆಸೇಜ್‌ನಲ್ಲಿ ತನ್ನ ತಂದೆ, ತಾಯಿ ಮತ್ತು ಅಕ್ಕನಿಗೆ ಕ್ಷಮೆ ಕೇಳಿದ್ದಾಳೆ. ತನ್ನ ತಂಗಿಗೆ ಭವಿಷ್ಯದತ್ತ ಗಮನ ಹರಿಸುವಂತೆ ಹೇಳಿದ್ದಾಳೆ. ಬಳಿಕ, "ನಾನು ಅಧ್ಯಾಪಕರಿಗೆ ಏಕೆ ದೂರು ನೀಡುತ್ತಿಲ್ಲ ಎಂದು ನೀವು ಕೇಳಬಹುದು, ಆದರೆ ಅದರಿಂದ ಯಾವುದೇ ಸಹಾಯ ಆಗುವುದಿಲ್ಲ. ನನಗೆ ಕಿರುಕುಳ ನೀಡುವವರು ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಇತರ ಹುಡುಗಿಯರಿಗೂ ಕಿರುಕುಳ ನೀಡಿದ್ದಾರೆ. ನಾವು ಯಾರಿಗೂ ಇದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಕಾಲೇಜು ಬಿಡಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ಸಿಕ್ಕಿಬಿದ್ದಿದ್ದೇವೆ. ನಾನು ಪೊಲೀಸರಿಗೆ ದೂರು ನೀಡಿದರೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅವರು ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಡುತ್ತಾರೆ. ಕ್ಷಮಿಸಿ ಅಕ್ಕ.. ನಾನು ಹೋಗಬೇಕು" ಎಂದು ಮೆಸೇಜ್ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಲೈಂಗಿಕ ಕಿರುಕುಳ ನಡೆದಿಲ್ಲ!
ವರದಿಯ ಪ್ರಕಾರ ಪುರುಷರು ಮಹಿಳಾ ಹಾಸ್ಟೆಲ್‌ಗೆ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಇಲ್ಲಿ ಯಾವುದೇ ಲೈಂಗಿಕ ಕಿರುಕುಳದ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.
(ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಬೆಂಬಲ ಅಥವಾ ಸಹಾಯ ಬೇಕಾದರೆ, ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು)












Click it and Unblock the Notifications