'ಸೆಕ್ಸ್ ಮೂಲಭೂತ ಹಕ್ಕು', ಹಾರ್ದಿಕ್ ಬೆಂಬಲಕ್ಕೆ ಜಿಗ್ನೇಶ್ ಮೇವಾನಿ

Subscribe to Oneindia Kannada

ಅಹಮದಾಬಾದ್, ನವೆಂಬರ್ 14: ಗುಜರಾತ್ ವಿಧಾನಸಭೆ ಚುನಾವಣಾ ಅಖಾಡದಲ್ಲಿ ಸೆಕ್ಸ್ ಸಿಡಿ ಭಾರೀ ಸದ್ದು ಮಾಡುತ್ತಿದೆ. ಸೋಮವಾರ ಬಿಡುಗಡೆಯಾಗಿರುವ ಹಾರ್ದಿಕ್ ಪಟೇಲ್ ರಿದ್ದು ಎನ್ನಲಾದ ಸೆಕ್ಸ್ ಸಿಡಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ವೈರಲಾಯ್ತು, ಹಾರ್ದಿಕ್ ಆತಂಕ ನಿಜವಾಯ್ತು

ಇದೀಗ ಹಾರ್ದಿಕ್ ಪಟೇಲ್ ಬೆಂಬಲಕ್ಕೆ ಯುವ ರಾಜಕಾರಣಿ ಜಿಗ್ನೇಶ್ ಮೇವಾನಿ ಧಾವಿಸಿದ್ದು, ಸಿಡಿಯಿಂದ ಹಾರ್ದಿಕ್ ಪಟೇಲ್ ನಾಚಿಕೆಪಟ್ಟುಕೊಳ್ಳುವಂಥಹದ್ದು ಏನೂ ಇಲ್ಲ ಎಂದಿದ್ದಾರೆ.

'Sex Is A Fundamental Right': Jignesh Mevani Backs Hardik Patel

ಈ ಕುರಿತು ಟ್ವೀಟ್ ಮಾಡಿರುವ ಅವರು "ಸೆಕ್ಸ್ ನ ಹಕ್ಕು ಮೂಲಭೂತ ಹಕ್ಕಾಗಿದೆ. ನಿಮ್ಮ ಖಾಸಗಿತನವನ್ನು ಉಲ್ಲಂಘಿಸಲು ಯಾರಿಗೂ ಹಕ್ಕಿಲ್ಲ," ಎಂದಿದ್ದಾರೆ.

'ಸೆಕ್ಸ್ ಸಿಡಿ' ಬಿಜೆಪಿಯ ಕೊಳಕು ರಾಜಕೀಯ : ಕಿಡಿಕಾರಿದ ಹಾರ್ದಿಕ್

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ, "ಸೆಕ್ಸ್ ಸಿಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾವು ಇಂಥಹ ಕೊಳಕು ಆಟಗಳನ್ನೆಲ್ಲಾ ಆಡುವುದಿಲ್ಲ. ಇದನ್ನು ಹಾರ್ದಿಕ್ ಪಟೇಲ್ ನಕಲಿ ವಿಡಿಯೋ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಪೊಲೀಸ್ ದೂರು ಯಾಕೆ ದಾಖಲಿಸಿಲ್ಲ?," ಎಂದು ಅವರು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Right to sex is a fundamental right. No one has right to breach your privacy," tweeted Gujarat politician Jignesh Mevani after allegedly Hardik Patel's sex CD released.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ