ಭಾರತದಲ್ಲಿ ಕೋವೊವ್ಯಾಕ್ಸ್ ಲಸಿಕೆ ತುರ್ತು ಬಳಕೆ ಅನುಮೋದನೆಗೆ ಶಿಫಾರಸು: ವರದಿ

ನವದೆಹಲಿ, ಡಿಸೆಂಬರ್ 28: ಪುಣೆ ಮೂಲದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಔಷಧೀಯ ಪ್ರಾಧಿಕಾರದ ತಜ್ಞರ ಸಮಿತಿಯು ಸೋಮವಾರ ಶಿಫಾರಸ್ಸು ಮಾಡಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ ಎಂದು ವರದಿಯಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಸರ್ಕಾರ ಮತ್ತು ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಸಂಸ್ಥೆಯ ಕೋವೊವ್ಯಾಕ್ಸ್ ಲಸಿಕೆಗೆ ಅನುಮೋದನೆ ನೀಡುವಂತೆ ಕಳೆದ ಅಕ್ಟೋಬರ್‌ನಲ್ಲಿ ಭಾರತದ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ (DCGI) ಅರ್ಜಿ ಸಲ್ಲಿಸಿದ್ದರು.

"ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ COVID-19 ನಲ್ಲಿ ವಿಷಯ ತಜ್ಞರ ಸಮಿತಿ (SEC) ಸೋಮವಾರ ಎರಡನೇ ಬಾರಿಗೆ ತುರ್ತು ಬಳಕೆಯ ಅಧಿಕಾರ (EUA) ಅರ್ಜಿಯನ್ನು ಪರಿಶೀಲಿಸಿದೆ. ವಿವರವಾದ ಚರ್ಚೆಯ ನಂತರ ಕೋವೊವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಶಿಫಾರಸ್ಸು ಮಾಡಿದೆ," ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

 Serum Institutes Covovax Vaccine Recommended For Approval: Report

ಲಸಿಕೆಯನ್ನು ನೋವಾವ್ಯಾಕ್ಸ್ ಲಸಿಕೆಯ ತಂತ್ರಜ್ಞಾನ ವರ್ಗಾವಣೆ ಎಂದು ಗಮನಿಸಿದ್ದು, DCGI ಇತ್ತೀಚೆಗೆ ಅರ್ಜಿಯ ಅನುಮೋದನೆ ಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದೆ. ಉನ್ನತ ಔಷಧ ನಿಯಂತ್ರಕವು ಲಸಿಕೆಯಲ್ಲಿ ಬಳಸಲಾದ ಮ್ಯಾಟ್ರಿಕ್ಸ್ ಅಂಶದ ಬಗ್ಗೆ ವಿವರಗಳನ್ನು ನೀಡುವಂತೆ ಸೀರಂ ಸಂಸ್ಥೆಯನ್ನು ಕೇಳಲಾಗಿದೆ.

ಕಳೆದ ನವೆಂಬರ್ 27ರಂದು, COVID-19 ಗೆ ಸಂಬಂಧಿಸಿದ ವಿಷಯ ತಜ್ಞರ ಸಮಿತಿಯು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಅರ್ಜಿಯನ್ನು ಮೌಲ್ಯಮಾಪನ ಮಾಡಿದ್ದು, ಚರ್ಚಿಸಿದೆ. ತದನಂತರದಲ್ಲಿ ಫಾರ್ಮಾ ಕಂಪನಿಯಿಂದ ಹೆಚ್ಚುವರಿ ಅಂಕಿ-ಅಂಶಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ಪುಣೆ ಮೂಲದ ಸಂಸ್ಥೆಯು ದೇಶದಲ್ಲಿ ನಡೆಸಿದ 2/3 ಹಂತದ ಬ್ರಿಡ್ಜಿಂಗ್ ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾವನ್ನು ಸಲ್ಲಿಸಿದೆ. ಯುಕೆ ಮತ್ತು ಯುಎಸ್‌ನಲ್ಲಿ ನಡೆಸಿದ 3ನೇ ಹಂತದ ವೈದ್ಯಕೀಯ ಪ್ರಯೋಗಗಳಿಂದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಧ್ಯಂತರ ವೈದ್ಯಕೀಯ ಕ್ಲಿನಿಕಲ್ ಪ್ರಯೋಗ ದತ್ತಾಂಶವನ್ನು ಸಹ ಅರ್ಜಿಯ ಜೊತೆ ಸಲ್ಲಿಸಲಾಗಿದೆ.

ಇಂಡೋನೆಷ್ಯಾಗೆ ಕೋವೊವ್ಯಾಕ್ಸ್ ರಫ್ತು:

ಭಾರತದಲ್ಲಿ ತುರ್ತು ಬಳಕೆಗಾಗಿ ಲಸಿಕೆಗೆ ಇನ್ನೂ ಅನುಮೋದನೆ ನೀಡದಿರುವುದಕ್ಕೆ ಕಾರಣವಿದೆ. ಭಾರತದಲ್ಲಿ ಉತ್ಪಾದಿಸಲಾದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್ -19 ಲಸಿಕೆ ಕೋವೊವಾಕ್ಸ್‌ನ ಎರಡು ಕೋಟಿ ಡೋಸ್‌ಗಳನ್ನು ಇಂಡೋನೇಷ್ಯಾಕ್ಕೆ ರಫ್ತು ಮಾಡಲು ಸರ್ಕಾರವು ಇತ್ತೀಚೆಗೆ ಅನುಮತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ಮೇ 17ರಂದು

DCGI ಕೋವೊವ್ಯಾಕ್ಸ್ ಲಸಿಕೆಯ ಉತ್ಪಾದನೆ ಮತ್ತು ಸಂಗ್ರಹಕ್ಕೆ ಅನುಮತಿ ನೀಡಿತ್ತು. ಈ ಅನುಮೋದನೆಯ ಆಧಾರದ ಮೇಲೆ, ಸಂಸ್ಥೆಯು ಲಸಿಕೆ ಡೋಸ್‌ಗಳನ್ನು ತಯಾರಿಸಿದೆ ಮತ್ತು ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

ಯುಎಸ್‌ ಸಂಸ್ಥೆಯ ಕೋವಿಡ್‌ ಲಸಿಕೆ ನೋವೊವಾಕ್ಸ್‌ನ ಮೂಲಕ ನೀಡಲಾದ ಪರವಾನಗಿ ಅಡಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡುವ ಕೋವೊವಾಕ್ಸ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಡಿಸೆಂಬರ್ 17ರಂದು ಅನುಮೋದನೆ ನೀಡಿದೆ.

ಇಂದು, ವಿಶ್ವ ಆರೋಗ್ಯ ಸಂಸ್ಥೆಯು NVX-CoV2373 ಗಾಗಿ ತುರ್ತು ಬಳಕೆಯ ಪಟ್ಟಿಯನ್ನು (EUL) ಬಿಡುಗಡೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದಿತ ಕೋವಿಡ್‌ ಲಸಿಕೆಗಳ ಪಟ್ಟಿಯನ್ನು ವಿಸ್ತರಣೆ ಮಾಡಿದೆ. ಸೀರಮ್ ಇನ್‌ಸ್ಟಿಟ್ಯೂಟ್‌ ಉತ್ಪಾದನೆ ಮಾಡಿದ CovovaxTM ಎಂಬ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+