ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಕೊರೊನಾ ಲಸಿಕೆ 2 ಡೋಸ್‌ಗೆ ಗರಿಷ್ಠ 1000 ರೂ ಬೆಲೆ

|
Google Oneindia Kannada News

ನವದೆಹಲಿ, ನವೆಂಬರ್ 20: ದೇಶದ ಸೆರಮ್ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆಯು 2021ರ ಫೆಬ್ರವರಿ ವೇಳೆಗೆ ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರಿಗೆ ದೊರಕಿಲಿದ್ದು, ಏಪ್ರಿಲ್ ಬಳಿಕ ಎಲ್ಲ ಜನರಿಗೂ ಸಿಗಲಿದೆ ಎಂದು ಔಷಧ ತಯಾರಕ ಸಂಸ್ಥೆ ಸೆರಮ್ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್ ಪೂನಾವಲ್ಲ ತಿಳಿಸಿದ್ದಾರೆ.

ಅಂತಿಮ ಪ್ರಯೋಗದ ಫಲಿತಾಂಶ ಮತ್ತು ಔಷಧ ನಿಯಂತ್ರಕಗಳ ಅನುಮತಿಯ ಮೇಲೆ ಲಸಿಕೆ ಲಭ್ಯತೆ ಅವಲಂಬಿಸಿದೆ. ಜನರು ಈ ಲಸಿಕೆಯ ಎರಡು ಡೋಸ್‌ಗಳನ್ನು ಹಾಕಿಕೊಳ್ಳುವುದು ಅಗತ್ಯವಾಗಲಿದ್ದು, ಗರಿಷ್ಠ 1,000 ರೂ ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ರೋಗಿಗಳಿಗೆ 'ಈ' ಲಸಿಕೆ ನೀಡಬೇಡಿ ಎಂದ ಡಬ್ಲ್ಯೂಎಚ್‌ಒಕೋವಿಡ್ ರೋಗಿಗಳಿಗೆ 'ಈ' ಲಸಿಕೆ ನೀಡಬೇಡಿ ಎಂದ ಡಬ್ಲ್ಯೂಎಚ್‌ಒ

2024ರ ವೇಳೆಗೆ ಭಾರತದಲ್ಲಿರುವ ಪ್ರತಿಯೊಬ್ಬರೂ ಲಸಿಕೆಗೆ ಒಳಪಡುವ ಸಾಧ್ಯತೆ ಇದೆ. ಪ್ರತಿ ಭಾರತೀಯರಿಗೂ ಲಸಿಕೆ ನೀಡಲು ಎರಡು ಅಥವಾ ಮೂರು ವರ್ಷ ಬೇಕಾಗಬಹುದು. ಪೂರೈಕೆ ಸವಾಲಿನ ಕಾರಣಕ್ಕಾಗಿ ಅಲ್ಲ, ಅದಕ್ಕೆ ಬಜೆಟ್, ಲಸಿಕೆ, ಸಂಗ್ರಹಾಗಾರ, ಮೂಲಸೌಕರ್ಯ ಮತ್ತು ಜನರು ಲಸಿಕೆ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಈ ಎಲ್ಲ ಅಂಶಗಳೂ ಶೇ 80-90ರಷ್ಟು ಜನಸಂಖ್ಯೆಗೆ ಲಸಿಕೆ ಒದಗಿಸಲು ನೆರವಾಗಲಿವೆ. 2024ರ ವೇಳೆಗೆ ಎರಡು ಡೋಸ್ ಲಸಿಕೆ ಪಡೆದುಕೊಳ್ಳಲು ಸಿದ್ಧರಿದ್ದರೆ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ.

Serum Institute CEO Adar Poonawalla Says Oxford Covid-19 Vaccine To Cost Maximum Rs 1000

ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು? ಭಾರತದಲ್ಲಿ ಕೊರೊನಾಗೆ ಮೊದಲು ಸಿಗುವ ಲಸಿಕೆ ಯಾವುದು?

ಪ್ರತಿ ಡೋಸ್‌ಗೆ 5-6 ಅಮೆರಿಕನ್ ಡಾಲರ್ ವೆಚ್ಚವಾಗಬಹುದು. ಹೀಗಾಗಿ ಎರಡು ಅಗತ್ಯ ಡೋಸ್‌ಗಳಿಗೆ ಸುಮಾರು 1000 ರೂ ಹಣ ಬೇಕಾಗಬಹುದು. ಭಾರತ ಸರ್ಕಾರವು ಇದನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವುದರಿಂದ 3-4 ಡಾಲರ್‌ನ ಕಡಿಮೆ ಬೆಲೆಗೇ ಪಡೆದುಕೊಳ್ಳುತ್ತದೆ. ಇಂದು ಮಾರುಕಟ್ಟೆಯಲ್ಲಿರುವ ಇತರೆ ಲಸಿಕೆಗಳಿಗಿಂತಲೂ ಅಗ್ಗದಲ್ಲಿ ಮತ್ತು ಜನರು ವೆಚ್ಚ ಭರಿಸುವ ದರದಲ್ಲಿ ನಾವು ಒದಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Recommended Video

ಭಾರತಕ್ಕೇ ಗಡಿಪಾರು ಮಾಡ್ತಾರಾ!! | Oneindia Kannada

English summary
Seram Institute of India CEO Adar Poonawalla said, Oxford Covid-19 vaccine will cost maximum Rs 10,000 for 2 doses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X