ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಸಲು ಡಿಸಿಜಿಐ ಅನುಮತಿ ಕೇಳಿದ ಸೀರಂ

|
Google Oneindia Kannada News

ನವದೆಹಲಿ, ಜೂನ್ 03: ರಷ್ಯಾದ ಸ್ಪುಟ್ನಿಕ್ V ಲಸಿಕೆ ತಯಾರಿಸಲು ಸೀರಂ ಇನ್‌ಸ್ಟಿಟ್ಯೂಟ್ ಡಿಸಿಜಿಐ ಅನುಮತಿ ಕೇಳಿದೆ. ಪುಣೆ ಮೂಲದ ಸಂಸ್ಥೆಯು ಲಸಿಕೆ ವಿಶ್ಲೇಷಣೆ ಹಾಗೂ ಪರೀಕ್ಷೆಗೆ ಅನುಮೋದನೆ ಕೋರಿದೆ. ರಷ್ಯಾದ ಸ್ಪುಟ್ನಿಕ್ V ಲಸಿಕೆಯನ್ನು ಪ್ರಸ್ತುತ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಉತ್ಪಾದನೆ ಮಾಡುತ್ತಿದೆ.

ಇದೀಗ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಡಿಜಿಸಿಐಗೆ ಲಸಿಕೆ ತಯಾರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೂನ್‌ನಲ್ಲಿ 10 ಕೋಟಿ ಕೋವಿಶೀಲ್ಡ್ ಲಸಿಕೆ ತಯಾರಿಸಲು ಮತ್ತು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಈಗಾಗಲೇ ಸೀರಂ ತಿಳಿಸಿದೆ. ಸೀರಂ ನೋವಾವ್ಯಾಕ್ಸ್ ಲಸಿಕೆಯನ್ನು ಕೂಡ ತಯಾರಿಸುತ್ತಿದೆ.

ಕೇಂದ್ರದಿಂದ ಕಾನೂನು ಭದ್ರತೆ, ನಷ್ಟ ಪರಿಹಾರಕ್ಕೆ ಸೀರಂ ಇನ್ಸ್‌ಟಿಟ್ಯೂಟ್ ಒತ್ತಾಯಕೇಂದ್ರದಿಂದ ಕಾನೂನು ಭದ್ರತೆ, ನಷ್ಟ ಪರಿಹಾರಕ್ಕೆ ಸೀರಂ ಇನ್ಸ್‌ಟಿಟ್ಯೂಟ್ ಒತ್ತಾಯ

ಕೇವಲ ವಿದೇಶಿ ಸಂಸ್ಥೆಗಳಿಗೆ ಮಾತ್ರವಲ್ಲ.. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲ ಲಸಿಕೆ ತಯಾರಿಕಾ ಸಂಸ್ಥೆಗಳಿಗೆ 'ಹೊಣೆಗಾರಿಕೆಗಳ ವಿರುದ್ಧ ನಷ್ಟ ಪರಿಹಾರ ಅಥವಾ ರಕ್ಷಣೆ ನೀಡಬೇಕು ಎಂದು ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಅದಾರ್ ಪೂನಾವಾಲ ನೇತೃತ್ವದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಗ್ರಹಿಸಿದೆ.

Serum Institute Applies To DCGI To Manufacture Russias Sputnik V Corona Vaccine

ವಿದೇಶಿ ಲಸಿಕೆ ತಯಾರಕಾ ಸಂಸ್ಥೆಗಳಾದ ಫೈಜರ್ ಮತ್ತು ಮೊಡೆರ್ನಾ ಸಂಸ್ಥೆಗಳು ಭಾರತಕ್ಕೆ ಲಸಿಕೆ ಪೂರೈಕೆ ಮಾಡಲು ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ ಕೇಳಿದ್ದವು. ಇದನ್ನು ನೀಡಿದರೆ ಮಾತ್ರ ಭಾರತಕ್ಕೆ ಲಸಿಕೆ ಪೂರೈಕೆ ಮಾಡುವ ಷರತ್ತು ವಿಧಿಸಿದ್ದು, ಈ ಷರತ್ತುಗಳಿಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ, ಸರ್ಕಾರ ಷರತ್ತುಗಳಿಗೆ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.

ಇದೇ ಕಾರಣಕ್ಕೆ ಇದೀಗ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಕೂಡ ತಮಗೂ ಇಂಡೆಮಿನಿಟಿ ಪ್ರೊಟೆಕ್ಷನ್ ಅಥವಾ ಕೋರ್ಟ್ ವಿಚಾರಣೆಯಿಂದ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿವೆ. ವಿದೇಶಿ ಸಂಸ್ಥೆಗಳಾಗಲಿ ಅಥವಾ ಸ್ವದೇಶಿ ಸಂಸ್ಥೆಗಳಾಗಲಿ ಲಸಿಕೆ ತಯಾರಿಕೆಯಲ್ಲಿ ಎಲ್ಲರ ಹೊಣೆಗಾರಿಕೆ ಒಂದೇ ಆಗಿರುತ್ತದೆ.

English summary
The Serum Institute of India (SII) has applied to the Drug Controller General of India (DCGI) seeking permission to manufacture COVID-19 vaccine Sputnik V in the country, sources said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X