ಅಮೀರ್ ನಟನೆಯ ಲಾಲ್ ಸಿಂಗ್ ಚಡ್ಡಾ ನೋಡಿ ಹೃತಿಕ್ ರೋಷನ್ ಹೇಳಿದ್ದು ಹೀಗೆ!
ನವದೆಹಲಿ, ಆಗಸ್ಟ್ 14: ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರದ ಕುರಿತು ಪರ- ವಿರೋಧ ಚರ್ಚೆಗಳ ಬೆನ್ನಲ್ಲೇ ಚಿತ್ರವನ್ನು ವೀಕ್ಷಿಸಿರುವ ನಟ ಹೃತಿಕ್ ರೋಷನ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಕಿರು ಟಿಪ್ಪಣಿ ಬರೆದಿರುವ ನಟ, ಪ್ಲಸಸ್ ಮತ್ತು ಮೈನಸ್ ಅನ್ನು ಬದಿಗಿಟ್ಟು ಈ ಸುಂದರ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.
"ಲಾಲ್ ಸಿಂಗ್ ಚಡ್ಡಾವನ್ನು ಈಗಷ್ಟೇ ವೀಕ್ಷಿಸಿದ್ದೇನೆ. ಪ್ಲಸಸ್ ಮತ್ತು ಮೈನಸ್‌ಗಳನ್ನು ಬದಿಗಿಟ್ಟು, ಈ ಚಲನಚಿತ್ರವು ಅದ್ಭುತವಾಗಿದೆ. ಈ ರತ್ನವನ್ನು ಕಳೆದುಕೊಳ್ಳಬೇಡಿ! ಹೋಗಿ! ಈಗಲೇ ಹೋಗಿ. ಇದನ್ನು ವೀಕ್ಷಿಸಿ. ಇದು ಸುಂದರವಾಗಿದೆ. ತುಂಬ ಸುಂದರವಾಗಿದೆ" ಎಂದು ಬರೆದಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಮೀರ್ ಖಾನ್, ಕರೀನಾ ಕಪೂರ್, ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಕರೀನಾ ಕಪೂರ್ ಚಿತ್ರದ ಕುರಿತು ಹೃತಿಕ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಅದ್ವೈತ್ ಚಂದನ್ ನಿರ್ದೇಶಿಸಿದ ಲಾಲ್ ಸಿಂಗ್ ಚಡ್ಡಾ ಚಲನಚಿತ್ರವು 1994 ರ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ, ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್ ನ ರೂಪಾಂತರವಾಗಿದೆ. ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಸಿನಿಮಾ ಬಹಿಷ್ಕರಿಸಲು ಕರೆ ನೀಡಲಾಗಿತ್ತು.
2015ರಲ್ಲಿ ಅಮೀರ್ ಖಾನ್ ಸಂದರ್ಶನವೊಂದರ ವೇಳೆ ದೇಶ ತೊರೆಯುವ ಮಾತನಾಡಿದ್ದರು. ಅದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸಂದರ್ಶನದ ವೇಳೆ ಮಾತನಾಡಿದ್ದ ಅಮೀರ್ ಖಾನ್, "ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿ ನನ್ನ ಪತ್ನಿ ಕಿರಣ್ ರಾವ್ ದೇಶ ತೊರೆಯಲು ನನಗೆ ಹೇಳುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಸದ್ಯ ಅದೇ ವಿಡಿಯೋ ತುಣುಕಗಳನ್ನು ಪೋಸ್ಟ್ ಮಾಡುವ ಮೂಲಕ ಅಮೀರ್ ಖಾನ್ ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಲಾಗುತ್ತಿದೆ. ಚಿತ್ರವನ್ನು ಬಹಿಷ್ಕಾರಿಸದಂತೆ ನಟ ಅಮೀರ್ ಖಾನ್ ಮನವಿ ಮಾಡಿದ್ದರು.

ಇನ್ನು, ಹೃತಿಕ್ ರೋಷನ್ ಅವರ ಪೋಸ್ಟ್ ಅನ್ನು ನಟಿ ಕರೀನಾ ಕಪೂರ್ ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ. ಹೃತಿಕ್ ಕೈಯಲ್ಲಿ ಸಾಳು ಸಾಲು ಚಿತ್ರಗಳಿವೆ. ಅವರು ಸೈಫ್ ಅಲಿ ಖಾನ್ ಜೊತೆ ವಿಕ್ರಮ್ ವೇದಾ ಚಿತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಅವರೊಂದಿಗೆ ಫೈಟರ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications