ಆರು ಲಕ್ಷ ಎಸ್ ಬಿ ಐ ಡೆಬಿಟ್ ಕಾರ್ಡ್ ಸ್ಥಗಿತ

Posted By: Prithviraj
Subscribe to Oneindia Kannada

ಪುಣೆ, ಅಕ್ಟೋಬರ್, 20: ಮಾಲ್ ವೇರ್ ಸಂಬಂಧಿತ ಸಮಸ್ಯೆಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ನ 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಲಾಗಿದ್ದು, ಗ್ರಾಹಕರಿಗೆ ಹೊಸ ಕಾರ್ಡ್ ನೀಡುವುದಾಗಿ ಬ್ಯಾಂಕ್ ತಿಳಿಸಿದೆ.

ದೇಶದ ಬ್ಯಾಂಕಿಂಗ್ ಕ್ಷೇತ್ರ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

Security breach: SBI blocks over 6L debit cards

ಎಸ್ ಬಿ ಐ ಎಂಟಿಎಂ ಕೇಂದ್ರಗಳಲ್ಲಿ ಯಾವುದೇ ಲೋಪ ಸಂಭವಿಸಿಲ್ಲ. ಎಸ್ ಬಿ ಐ ಗ್ರಾಹಕರು ಇತರ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ವಹಿವಾಟು ನಡೆಸಿದ್ದಾರೆ ಅವರ ಡೆಬಿಟ್ ಕಾರ್ಡ್ ಸೋರಿಕೆ ಆಗಿರುವ ಸಾಧ್ಯತೆ ಇದೆ ಎಂದು ಬ್ಯಾಂಕ್ ತಿಳಿಸಿದೆ.

ಕೇವಲ ಎಸ್ ಬಿ ಐ ಎಟಿಎಂ ಕೇಂದ್ರಗಳಲ್ಲಿ ಮಾತ್ರ ವಹಿವಾಟು ನಡೆಸಿರುವ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲ, ಅವರ ಕಾರ್ಡುಗಳನ್ನು ಬ್ಲಾಕ್ ಮಾಡಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಎಸ್ ಬಿ ಐ ಗ್ರಾಹಕರ ಕಾರ್ಡ್ ಸ್ಥಗಿತಗೊಂಡಿದ್ದರೆ ಕೂಡಲೇ ಸಮೀಪದ ಶಾಖೆಯನ್ನು ಸಂಪರ್ಕಿಸಬಹುದು ಅಥವಾ ಅಂತರ್ಜಾಲದ ಮೂಲಕ ಹೊಸ ಕಾರ್ಡ್ ಗೆ ಮನವಿ ಸಲ್ಲಿಸಬಹುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಆಯಾ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಎಸ್ ಬಿಐನ ತಾಂತ್ರಿಕ ವಿಭಾಗದ ಮುಖ್ಯಸ್ಥ ಶಿವಕುಮಾರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State Bank of India has said that it will re-issue around six lakh debit cards to customers, which have been blocked following a malware-related security breach in a non-SBI ATM network
Please Wait while comments are loading...