'ಜಾತ್ಯಾತೀತತೆ' ದೊಡ್ಡ ಸುಳ್ಳು ; ಯೋಗಿ ಆದಿತ್ಯನಾಥ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 14 : 'ಯಾವುದೇ ವ್ಯವಸ್ಥೆ ಜಾತ್ಯಾತೀತವಾಗಿರಲು ಸಾಧ್ಯವೇ ಇಲ್ಲ' ಈ ಮಾತು ಹೇಳಿರುವುದು ಆರ್.ಎಸ್.ಎಸ್ ಮುಖಂಡರಲ್ಲ ಜಾತ್ಯಾತೀತವಾಗಿ ಆಡಳಿತ ನಡೆಸುತ್ತೇನೆಂದು ಪ್ರಮಾಣ ವಚನ ಸ್ವೀಕರಿಸುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.

ಕಮ್ಯೂನಿಸ್ಟರು ರಾಜಕೀಯ ಕೊಲೆಗಳನ್ನು ನಿಲ್ಲಿಸಬೇಕು : ಆದಿತ್ಯನಾಥ್

'ದೈನಿಕ್ ಜಾಗರಣ್' ಸಮೂಹ ಸೋಮವಾರ ನವೆಂಬರ್ 13 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾತ್ಯಾತೀತತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

Secular word is a biggest lie

'ಜಾತ್ಯಾತೀತತೆ' ಎಂಬುದು ಸ್ವತಂತ್ರ್ಯ ಭಾರತದ ದೊಡ್ಡ ಸುಳ್ಳು, ಯಾರು ಈ ಶಬ್ದವನ್ನು ಹುಟ್ಟುಹಾಕಿದರೊ ಹಾಗೂ ಇದನ್ನು ಬೇಕೆಂದೇ ಚಲಾವಣೆಗೆ ತಂದರೊ ಅವರು ಭಾರತದ ಜನರ ಬಳಿ ಕ್ಷಮಾಪಣೆ ಕೇಳಬೇಕು ಎಂದು ಅವರು ಹೇಳಿದ್ದಾರೆ.

ರಾಜಕೀಯವನ್ನು ಜಾತ್ಯಾತೀತವಾಗಿ ಮಾಡಬಹುದೇನೊ ಆದರೆ ಆಡಳಿತದಲ್ಲಿ ಜಾತ್ಯಾತೀತತೆ ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಕಠರ್ ಹಿಂದೂ ವಾದಿ ಎಂದೇ ಬಿಂಬಿತವಾಗಿರುವ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆ ಸಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಡಳಿತ ವ್ಯವಸ್ಥೆಯಲ್ಲಿನ ಮೀಸಲಾತಿಯನ್ನು ಗಮನದಲ್ಲಿರಿಸಿಕೊಂಡು ಆದಿತ್ಯನಾಥ್ ಅವರು ಈ ಮಾತು ಹೇಳಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಇದೇ ವೇಳೆ ಅವರು ರಾಹುಲ್ ಗಾಂಧಿ ಅವರನ್ನು 'ರಾಜಕೀಯವಾಗಿ ಸೋತ ಆಟಗಾರ' ಎಂದು ಟೀಕಿಸಿರುವ ಅವರು ಗುಜರಾತ್ ಚುನಾವಣೆಯಲ್ಲಿ ಬಿ.ಜೆ.ಪಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh CM Yogi Adityanath said word "Secular' is biggest lie since independence, no system can be secular. who coined word secular must apologise to the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ