ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 2ನೇ ಅಲೆ; ಭಾರತದಲ್ಲಿ 2 ನಿಮಿಷಕ್ಕೊಂದು ಸಾವು

|
Google Oneindia Kannada News

ನವದೆಹಲಿ, ಏಪ್ರಿಲ್ 30; ಕೋವಿಡ್ 2ನೇ ಅಲೆ ಭಾರತದಲ್ಲಿ ಆತಂಕವನ್ನು ಮೂಡಿಸಿದೆ. ಹೊಸ ಪ್ರಕರಣಗಳು, ಸಾವಿನ ಸಂಖ್ಯೆ ಜನರಲ್ಲಿ ಭಯವನ್ನು ಉಂಟು ಮಾಡಿದೆ. ಪ್ರತಿ ನಿಮಿಷಕ್ಕೆ ಭಾರತದಲ್ಲಿ 2 ಸಾವು ಮತ್ತು ಸುಮಾರು 270 ಹೊಸ ಪ್ರಕರಣ ದಾಖಲಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಪ್ರತಿ ಸೆಕೆಂಡ್‌ಗೆ 4 ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಶುಕ್ರವಾರ ಭಾರತದಲ್ಲಿ 3,86,452 ಹೊಸ ಪ್ರಕರಣ ಪತ್ತೆಯಾಗಿದೆ. ಇದು ಇಷ್ಟು ದಿನದಲ್ಲಿಯೇ ಅತಿ ಹೆಚ್ಚು ಪ್ರಕರಣವಾಗಿದೆ.

ಕೋವಿಡ್ ಸಾವು; ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ ಕೋವಿಡ್ ಸಾವು; ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ

ಭಾರತದಲ್ಲಿ ಹೊಸ ಪ್ರಕರಣಗಳು ಮಾತ್ರವಲ್ಲ. ಕೋವಿಡ್‌ ಸೋಂಕಿನಿಂದ ಮೃತಪಡುವ ಪ್ರಕರಣಗಳು ಸಹ ಹೊಸ ದಾಖಲೆ ಬರೆಯುತ್ತಿವೆ. ಕಳೆದ 24 ಗಂಟೆಯಲ್ಲಿ 3,498 ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 2.80 ಲಕ್ಷಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಾವು, ಶೇ.20ರಷ್ಟು ಏಪ್ರಿಲ್‌ನಲ್ಲಿ ಸಂಭವಿಸಿದೆ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಾವು, ಶೇ.20ರಷ್ಟು ಏಪ್ರಿಲ್‌ನಲ್ಲಿ ಸಂಭವಿಸಿದೆ

Second Wave Of COVID India Reporting Two Deaths Per Minute

ಏಪ್ರಿಲ್ 1ರಿಂದ ಭಾರತದಲ್ಲಿ 45,403 ಸಾವಿನ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ 27,800 ಪ್ರಕರಣಗಳು ಏಪ್ರಿಲ್ 21ರ ಬಳಿಕ ದಾಖಲಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 31.70 ಲಕ್ಷಕ್ಕೇ ಏರಿಕೆಯಾಗಿದೆ.

ಏಪ್ರಿಲ್ 21ರ ಬಳಿಕ ದೇಶದಲ್ಲಿ ಒಂದು ನಿಮಿಷಕ್ಕೆ ಸರಾಸರಿ 2 ಸಾವಿನ ಪ್ರಕರಣ ದಾಖಲಾಗುತ್ತಿದೆ. ಇದರಲ್ಲಿ ಶೇ 77.44 ಕೇವಲ 10 ರಾಜ್ಯಗಳಲ್ಲಿ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ 771 ಸಾವುಗಳು ವರದಿಯಾದರೆ, ದೆಹಲಿಯಲ್ಲಿ ದೆಹಲಿಯಲ್ಲಿ ಪ್ರತಿದಿನ ಸುಮಾರು 395 ಸಾವಿನ ಸಂಖ್ಯೆ ವರದಿಯಾಗುತ್ತಿದೆ.

ರಸ್ತೆಯಲ್ಲೇ ಸಾವು, ಪಾದಾಚಾರಿ ಮಾರ್ಗವೇ ಹಾಸಿಗೆ: ಇದು ಕೊರೊನಾ ತಂದಿತ್ತ ಪರಿಸ್ಥಿತಿ ರಸ್ತೆಯಲ್ಲೇ ಸಾವು, ಪಾದಾಚಾರಿ ಮಾರ್ಗವೇ ಹಾಸಿಗೆ: ಇದು ಕೊರೊನಾ ತಂದಿತ್ತ ಪರಿಸ್ಥಿತಿ

ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳ ಇರುವ ಮಹಾರಾಷ್ಟ್ರದಲ್ಲಿ ಗಂಟೆಗೆ 32 ಸಾವುಗಳು ದಾಖಲಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಂಟೆಗೆ 16 ಸಾವು ಸಂಭವಿಸುತ್ತಿದೆ.

ಏಪ್ರಿಲ್ 1ರ ಬಳಿಕ ದೇಶದಲ್ಲಿ 65.41 ಲಕ್ಷ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 31.46 ಲಕ್ಷ ಪ್ರಕರಣಗಳು ಕಳೆದ 10 ದಿನದಲ್ಲಿ ದಾಖಲಾಗಿದೆ. ಹೊಸ ಪ್ರಕರಣಗಳ ಪೈಕಿ 10 ರಾಜ್ಯಗಳ ಸಂಖ್ಯೆಯೇ ಶೇ 73.05 ರಷ್ಟಿದೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ್‌, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 66,159 ಹೊಸ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ 38,607 ಮತ್ತು ಉತ್ತರ ಪ್ರದೇಶದಲ್ಲಿ 35,104 ಪ್ರಕರಣಗಳು ವರದಿಯಾಗಿವೆ.

English summary
In a second wave of COVID 19 India is reporting over two deaths and close to 270 fresh cases per minute on an average. On Friday India reported 3,86,452 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X