ಮುಂದಿನ ವಾರ 2-6 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆಯ 2ನೇ ಡೋಸ್ ಪ್ರಯೋಗ

ನವದೆಹಲಿ, ಜುಲೈ 23: ಭಾರತೀಯ ಕೊರೊನಾ ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮುಂದುವರೆಸಿದ್ದು, ಮುಂದಿನ ವಾರ 2-6 ವರ್ಷದ ಮಕ್ಕಳ ಮೇಲೆ ಎರಡನೇ ಡೋಸ್ ಲಸಿಕೆ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ ಈ ಮಕ್ಕಳು ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ದೆಹಲಿಯ ಏಮ್ಸ್‌ ನಲ್ಲಿ 6-12 ವರ್ಷದ ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ಪ್ರಯೋಗ ನಡೆಸಲಾಗಿದೆ. 18 ವರ್ಷದ ಒಳಗಿನವರಿಗೆ ಲಸಿಕೆ ಪ್ರಯೋಗ ನಡೆಯುತ್ತಿರುವ ಕೇಂದ್ರಗಳಲ್ಲಿ ದೆಹಲಿಯ ಏಮ್ಸ್‌ ಕೂಡ ಒಂದಾಗಿದೆ. ಎಲ್ಲಾ ವಯೋಮಾನದ ಮಕ್ಕಳ ಮೇಲೆ ಲಸಿಕೆಗಳ ಪ್ರಯೋಗ ಪೂರ್ಣಗೊಂಡ ತಿಂಗಳ ನಂತರ ಫಲಿತಾಂಶ ನೀಡಲಾಗುವುದು ಎಂದು ತಿಳಿಸಿದೆ.

ವಯೋಮಾನಕ್ಕನುಗುಣವಾಗಿ ಮೂರು ಹಂತಗಳಲ್ಲಿ ಲಸಿಕೆಗಳ ಪ್ರಯೋಗ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 12-18 ವಯೋಮಾನದ ಮಕ್ಕಳಿಗೆ, ಎರಡನೇ ಹಂತದಲ್ಲಿ 6-12 ವರ್ಷದ ಮಕ್ಕಳಿಗೆ ಹಾಗೂ ಕೊನೆ ಹಂತದಲ್ಲಿ 2-6 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ.

Second Dose Covaxin Vaccine Trial On 2-6 Years Begin By Next Week

ದೇಶದಲ್ಲಿ ಕೊರೊನಾ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯುವ ಚರ್ಚೆಗಳು ನಡೆಯುತ್ತಿದ್ದು, ಮಕ್ಕಳಿಗೆ ಕೊರೊನಾ ಲಸಿಕೆಗಳು ಯಾವಾಗ ಲಭ್ಯವಾಗಲಿವೆ, ಯಾವ ಯಾವ ಲಸಿಕೆಗಳು ಅಭಿವೃದ್ಧಿಗೊಳ್ಳಲಿವೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. ಸೆಪ್ಟೆಂಬರ್ ವೇಳೆಗೆ ಲಸಿಕೆ ಪ್ರಯೋಗದ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿರುವುದಾಗಿ ಕೇಂದ್ರ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಇನ್ನೆರಡು ಲಸಿಕೆಗಳು ಮಕ್ಕಳಿಗಾಗಿ ಅಭಿವೃದ್ಧಿ ಹಂತದಲ್ಲಿವೆ. ಝೈಡಸ್ ಲಸಿಕೆ: ಝೈಡಸ್ ಕಂಪನಿ ಮಕ್ಕಳಿಗೆಂದೇ ಲಸಿಕೆ ಅಭಿವೃದ್ಧಿಪಡಿಸಿದ್ದು, ಇದರ ಪ್ರಯೋಗ ಪೂರ್ಣಗೊಳ್ಳುವ ಹಂತದಲ್ಲಿದೆ. ಅನುಮೋದನೆ ದೊರೆತರೆ, ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ 12-18 ವಯೋಮಾನದ ಮಕ್ಕಳಿಗೆ ಈ ಲಸಿಕೆ ಲಭ್ಯವಾಗಲಿದೆ.

ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಮೂಗಿನ ಲಸಿಕೆ BBV154 ಮೊದಲ ಹಂತದ ಪ್ರಯೋಗ ಸಂಪೂರ್ಣವಾಗಿದೆ. ಮಕ್ಕಳಿಗೆ ಮೂಗಿನ ಮೂಲಕ ಲಸಿಕೆ ನೀಡುವುದು ಸುಲಭ ಎಂಬ ಆಲೋಚನೆ ಈ ಲಸಿಕೆ ಅಭಿವೃದ್ಧಿ ಹಿಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+