ಭಾರತಕ್ಕೆ ಅಮೆರಿಕದ ತಾತ್ಕಾಲಿಕ ರಾಯಭಾರಿಯಾಗಿ ಅತುಲ್ ಕೇಶಪ್ ನೇಮಕ

ನವದೆಹಲಿ, ಜೂನ್ 30: ಭಾರತಕ್ಕೆ ಅಮೆರಿಕದ ತಾತ್ಕಾಲಿಕ ರಾಯಭಾರಿಯಾಗಿ ಭಾರತೀಯ ಮೂಲದ ಅತುಲ್ ಕೇಶಪ್ ನೇಮಕಗೊಂಡಿದ್ದಾರೆ.

ಡೇನಿಯಲ್ ಸ್ಮಿತ್ ನಿವೃತ್ತಿಹೊಂದುತ್ತಿರುವ ಕಾರಣ ತಾತ್ಕಾಲಿಕ ರಾಯಭಾರಿಯಾಗಿ ಅತುಲ್ ಕೇಶಪ್ ಅವರನ್ನು ನೇಮಕ ಮಾಡಲಾಗಿದೆ.

ಕೇಶಪ್ ಅವರು ಈ ಮೊದಲು ಶ್ರೀಲಂಕಾ, ಮಾಲ್ಡೀವ್ಸ್ ರಾಯಭಾರಿಯಾಗಿದ್ದರು, 1994ರಲ್ಲಿ ಅಮೆರಿಕ ವಿದೇಶಾಂಗ ಸೇವೆಗೆ ಸೇರಿದ ಅತುಲ್, ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ವಿಭಾಗದಲ್ಲಿ ಉಪಸಹಾಯಕ ಕಾರ್ಯದರ್ಶಿಯಾಗಿದ್ದರು.

Seasoned South Asia Diplomat Atul Keshap Appointed Next U.S. Chargé D’Affaires In India

ಅತುಲ್ 2005ರಿಂದ 2008ರ ಅವಧಿಯಲ್ಲಿ ಅಮೆರಿಕದ ರಾಯಭಾರ ಕಚೇರಿಯಲ್ಲಿ ಉಪರಾಜಕೀಯ ಸಲಹೆಗಾರರಾಗಿದ್ದರು. ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳಲ್ಲಿ ಅಮೆರಿಕದ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿಯವರ ಅಡಿಯಲ್ಲಿ ವಿಶೇಷ ಸಲಹೆಗಾರರಾಗಿಯೂ ಸಹ ಸೇವೆ ಸಲ್ಲಿಸಿದ್ದರು.

ಪಂಜಾಬ್ ಮೂಲದ ಅತುಲ್ ತಂದೆ ಕೇಶಪ್ ಚಂದರ್ ಸೆನ್, ನೈಜೀರಿಯಾದಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಅರ್ಥಶಾಸ್ತ್ರಜ್ಞರಾಗಿದ್ದರು. ತಾಯಿ ಜೋ ಕ್ಯಾಲ್ವರ್ಟ್ ಅಮೆರಿಕ ವಿದೇಶಾಂಗ ಸೇವೆಯಲ್ಲಿದ್ದು, ಸೆನ್‌ರನ್ನು ಲಂಡನ್‌ನಲ್ಲಿ ವಿವಾಹವಾಗಿದ್ದರು.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯಲ್ಲೂ ಸೇವೆ ಸಲ್ಲಿಸಿದ್ದರು, ಅತುಲ್ 1971ರ ಜೂನ್‌ನಲ್ಲಿ ನೈಜರಿಯಾದಲ್ಲಿ ಜನಿಸಿದ್ದರು.

2003ರಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ಪ್ರದೇಶಗಳ ನಿರ್ದೇಶಕರಾಗಿ ಅವರು ಶ್ವೇತಭವನ ಪ್ರವೇಶಿಸಿದ್ದರು. 2008ರಿಂದ 2010ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಸಾಂಸ್ಥಿಕ ವ್ಯವಹಾರಗಳ ವಿಭಾಗದ ವಿಶ್ವಸಂಸ್ಥೆ ಮಾನವ ಹಕ್ಕುಗಳ ನಿರ್ದೇಶಕರೂ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+