ಆರ್ಟಿಕಲ್ 370 ರದ್ದು: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ 'ಏಕಾಂಗಿ'

ನವದೆಹಲಿ, ಆ 6: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿ, 370ನೇ ವಿಧಿಯನ್ನು ಕಿತ್ತುಹಾಕಿದ ಕೇಂದ್ರ ಸರಕಾರದ ನಿರ್ಧಾರಕ್ಕೆ, ಜಾಗತಿಕ ನಾಯಕರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪಾಕಿಸ್ತಾನ ಈ ವಿಷಯವನ್ನು ಇಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ದೊಡ್ಡ ವಿಷಯವನ್ನಾಗಿ ಮಾಡಲು ಹೊರಟಿದೆ. ಆದರೆ, ಪಾಕಿಸ್ತಾನಕ್ಕೆ ಇದುವರೆಗೆ ಯಾವುದೇ ಬೆಂಬಲ ಸಿಗದೇ ಏಕಾಂಗಿಯಾಗಿದೆ.

ಮೋದಿ ಸರಕಾರದ ಈ ಚಾರಿತ್ರಿಕ ನಿರ್ಧಾರವನ್ನು ಪಾಕಿಸ್ತಾನ ಹೊರತು ಪಡಿಸಿ, ವಿಶ್ವದ ಯಾವುದೇ ದೇಶಗಳು ಇದನ್ನು ಖಂಡಿಸಲೂ ಇಲ್ಲ, ಯಾವುದೇ ಪ್ರತಿಕ್ರಿಯೆಯನ್ನೂ ನೀಡದೇ ಇರುವುದರಿಂದ, ಪಾಕ್ ಮುಖಭಂಗ ಎದುರಿಸಿದೆ.

Scrapping 370 Article In Jammu And Kashmir: China And Muslim Countries Silent, Pakistan Alone

ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿರುವ ಚೀನಾ ಅಥವಾ ವಿಶ್ವದ ಯಾವುದೇ ಮುಸ್ಲಿಂ ರಾಷ್ಟ್ರಗಳು, ಭಾರತದ ಈ ನಿರ್ಧಾರದ ಬಗ್ಗೆ ಚಕಾರವನ್ನು ಎತ್ತಲಿಲ್ಲ.

ಭಾರತ ಯಾವುದೇ ರೀತಿಯ ಅಕ್ರಮ ಹೆಜ್ಜೆಯನ್ನಿಟ್ಟರೆ ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧರಾಗಿದ್ದೇವೆ. ಕಾಶ್ಮೀರದೊಂದಿಗೆ ಪಾಕಿಸ್ತಾನಕ್ಕೆ ಇರುವ ಸಂಬಂಧ ಹೀಗೆಯೇ ಮುಂದುವರಿಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಭಾರತದ ನಿರ್ಧಾರವು ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹಾಳುಮಾಡಲಿದೆ. ಈ ನಿರ್ಧಾರ ವಿಶ್ವಸಂಸ್ಥೆಯ ನಿರ್ಣಯಕ್ಕೆ ವಿರುದ್ಧ ಹಾಗೂ ಕಾನೂನು ಬಾಹಿರ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. (ಚಿತ್ರ: ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+