School Holiday: ಆಗಸ್ಟ್ 27ರಂದು ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ಯಾ?: ಇಲ್ಲಿದೆ ಮಾಹಿತಿ
School Holiday: ದೇಶದ ಹಲವು ರಾಜ್ಯಗಳಲ್ಲಿ ಕಾರಣಾಂತರಗಳಿಂದ ಶಾಲಾ-ಕಾಲೇಜು, ಬ್ಯಾಂಕ್‌ಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಅದರಲ್ಲೂ ಸ್ಥಳೀಯ ಹಬ್ಬಗಳ ವೇಳೆ ರಜೆ ಕೊಡುವ ಬಗ್ಗೆ ಜಿಲ್ಲಾಧಿಗಳು ಅಥವಾ ಕ್ಷೇತ್ರ ಶಿಕ್ಷಣಾಧಿಕಾರು ನಿರ್ಧರಿಸುತ್ತಾರೆ. ಹಾಗಾದ್ರೆ ನಾಳೆ ಅಂದ್ರೆ ಆಗಸ್ಟ್ 27ರಂದು ಗಣೇಶೋತ್ಸವ ಇದ್ದು, ಈ ವೇಳೆ ಯಾವೆಲ್ಲಾ ರಾಜ್ಯಗಳಲ್ಲಿ ರಜೆ ನೀಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಕ್ಯಾಲೆಂಡರ್ ಪ್ರಕಾರ, ಸರ್ಕಾರಿ ರಜೆ ದಿನಗಳಂದು ಎಲ್ಲಾ ರಾಜ್ಯಗಳಲ್ಲೂ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಹಾಗೆಯೇ ಇದೀಗ ನಾಳೆ (ಆಗಸ್ಟ್ 27) ಗಣೇಶ ಚತುರ್ಥಿ ಆರಂಭ ಆಗಲಿದ್ದು, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈಗಾಗಲೇ ಗಣೇಶ ಹಬ್ಬ ಹಿನ್ನೆಲೆ ಕೆಲ ರಾಜ್ಯಗಳಲ್ಲಿ ಕಳೆದ ಎರಡು ದಿನಗಳ ಹಿಂದೆಯೇ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಆದರೆ, ದೇಶದಲ್ಲಿ ಗಣೇಶ ಹಬ್ಬ ಆರಂಭ ಆಗುವುದು ಕ್ಯಾಲೆಂಡರ್ ಪ್ರಕಾರ, ನಾಳೆ ಆಗಸ್ಟ್ 27ರಂದು. ಈ ದಿನ ಎಲ್ಲಾ ಭಾಗಗಳಲ್ಲೂ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ. ಹಾಗಾದ್ರೆ, ಕರ್ನಾಟಕದಲ್ಲಿ ರಜೆ ಇರಲಿದೆಯಾ ಈ ದಿನ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ತಲೆಯಲ್ಲಿ ಇದೇ ಪ್ರಶ್ನೆ ಕಾಡುತ್ತಿರುತ್ತದೆ. ಇದೆಕ್ಕೆಲ್ಲ ಉತ್ತರ ಇಲ್ಲಿದೆ ಕಣ್ಣಾಡಿಸಿ.
ಯಾವ್ಯಾವ ರಜ್ಯಗಳಲ್ಲಿ ರಜೆ ಘೋಷಣೆ?: ಗಣೇಶ ಹಬ್ಬ ಹಿನ್ನೆಲೆ ನಾಳೆ ಅನೇಕ ರಾಜ್ಯಗಳಲ್ಲಿ ಶಿಕ್ಷಣ ಇಲಾಖೆಗಳು ಶಾಲೆಗಳಿಗೆ ರಜೆ ಘೋಷಣೆ ಮಾಡಿವೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಗೋವಾ ಮತ್ತು ಮಧ್ಯಪ್ರದೇಶ ರಾಜ್ಯಗಳು ಈಗಾಗಲೇ ರಜೆಯನ್ನು ದೃಢಪಡಿಸಿವೆ. ಸಾಮಾನ್ಯವಾಗಿ ಈ ದಿನ ಎಲ್ಲಾ ರಾಜ್ಯಗಳಲ್ಲೂ ರಜೆ ಇರಲಿದೆ. ಒಂದೊಂದು ರಾಜ್ಯಗಳಲ್ಲಿ ಈಗಾಗಲೇ ಒಂದು ದಿನದ ಮುಂಚೆಯೇ ಆಚರಣೆ ಮಾಡಲಾಗುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಸೆಪ್ಟೆಂಬರ್ 27ರ ನಂತರ ಆಚರಣೆ ಮಾಡಲಾಗುತ್ತದೆ.
ಮತ್ತೊಂದೆಡೆ ನೋಡೋದಾದ್ರೆ, ದೇಶದ ಹಲವು ರಾಜ್ಯಗಳಲ್ಲಿ ತಿಂಗಳುಗಟ್ಟಲೇ ಗಣೇಶ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನೂ ಕೆಲವೆಡೆ ಒಂದು ಅಥವಾ ಮೂರು ದಿನ ಇಟ್ಟು ವಿಸರ್ಜನೆ ಮಾಡಲಾಗುತ್ತದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈನಲ್ಲಿ ಗಣೇಶ ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ.
ಶಿಕ್ಷಣ ಅಧಿಕಾರಿಗಳು ರಾಜ್ಯಗಳಲ್ಲಿ ರಜೆ ನಿಯಮಗಳು ಬದಲಾಗಬಹುದು ತಿಳಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು ಅಥವಾ ವಿವಿಧ ಮಂಡಳಿಗಳ ಅಡಿಯಲ್ಲಿ ಬರುವ ಸಂಸ್ಥೆಗಳು ರಜೆಯನ್ನು ಆಚರಿಸದಿರಬಹುದು ಅಥವಾ ತರಗತಿಗಳನ್ನು ಮುಂದಿನ ದಿನಗಳಲ್ಲಿ ಮುಂದುವರೆಸಲು ನಿರ್ಧರಿಸುತ್ತವೆ. ಆದರೆ, ಶೈಕ್ಷಣಿಕ ಯೋಜನೆಯಲ್ಲಿನ ಗೊಂದಲಗಳನ್ನು ತಪ್ಪಿಸಲು ಪೋಷಕರು ಮತ್ತು ವಿದ್ಯಾರ್ಥಿಗಳು ಅಧಿಕೃತ ಸುತ್ತೋಲೆಗಳನ್ನು ಪರಿಶೀಲಿಸಬಹುದು ಅಥವಾ ನೇರವಾಗಿ ಶಾಲೆಗಳನ್ನು ಸಂಪರ್ಕಿಸುವುದು ಉತ್ತಮ.
ಗಣೇಶ ದೇವರನ್ಮು ವಿಜ್ಞ ನಿವಾರಕ ಅಂತಲೇ ಕರೆಯಲಾಗುತ್ತದೆ. ಯಾಕಂದ್ರೆ ವಿದ್ಯೆ, ಯಾವುದೇ ಅಡೆತಡೆಗಳಿದ್ದರೂ ಅದನ್ನು ನಿವಾರಣೆ ಮಾಡುವ ಶಕ್ತಿ ಗಣೇಶನಲ್ಲಿದೆ ಎನ್ನುಬ ನಂಬಿಕೆ. ಹಿಂದೂ ಹಬ್ಬಗಳಲ್ಲಿ ಗಣೇಶ ಚತುರ್ಥಿ ಕೂಡ ದೊಡ್ಡ ಹಬ್ಬವಾಗಿ, ಇದನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಆದರೆ ಎಲ್ಲಾ ಕರೆ ಒಂದೇ ದಿನ ಆಚರಣೆ ಮಾಡುವುದಿಲ್ಲ. ಕೆಲವೆಡೆ ಒಂದು ದಿನ ಮುಂಚಿತವಾಗಿ ಆಚರಣೆ ಆರಂಭಿಸುತ್ತಾರೆ. ಇನ್ನೂ ಕೆಲವೆಡೆ ನಿಗದಿತ ದಿನಾಂಕದಂದೇ ಆಚರಿಸಲಾಗುತ್ತದೆ.












Click it and Unblock the Notifications