School Holiday: ನಾಳೆ ಎಲ್ಲಾ ಸರ್ಕಾರಿ ಶಾಲೆ, ಕಚೇರಿಗಳಿಗೆ ರಜೆ ಘೋಷಣೆ
Holiday: ಈಗಾಗಲೇ ದೇಶದ ಹಲವೆಡೆ ಇಲ್ಲಿವರೆಗೂ ಶಾಲಾ-ಕಾಲೇಜುಗಳಿಗೆ ಕಾರಣಾಂತರಗಳಿಂದ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ನಾಳೆ ಆಗಸ್ಟ್ 25ರ ಸೋಮವಾರ ಎಲ್ಲಾ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳು ಮುಚ್ಚಲ್ಪಡಲಿವೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದಲ್ಲಿ ಈಗಾಗಲೇ ಕಾರಣಾಂತಗಳಿಂದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಮಳೆಯಂತಹ ಸಂದರ್ಭದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ. ಹಾಗೆಯೇ ಇದೀಗ ಈ ಭಾಗದಲ್ಲಿ ಆಗಸ್ಟ್ 25ರಂದು ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಕಚೇರಿಗಳು ಮುಚ್ಚಲ್ಪಡಲಿವೆ ಎಂದು ಘೋಷಣೆ ಮಾಡಲಾಗಿದೆ. ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಹಲವೆಡೆ ಇಲ್ಲಿವರೆಗೂ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ವಿಶೇಷ ಕಾರ್ಯಗಳು, ಭಾರೀ ಮಳೆಯಾಗಿ ಪ್ರವಾಹ ಪರಿಸ್ಥಿತಿಯ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೂ ರಜೆಗಳನ್ನು ಸರಿದೂಗಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ.
ಇದೀಗ ಬಾಬಾ ರಾಮದೇವ್ ಮಸೂರಿಯಾ ಮೇಳ ಹಿನ್ನೆಲೆ ಆಗಸ್ಟ್ 25ರ ಸೋಮವಾರದಂದು ರಾಜಸ್ಥಾನದ ಜೋಧಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು ಹಾಗೂ ಕಚೇರಿಗಳಿಗೆ ಜಿಲ್ಲಾಧಿಕಾರಿ ಗೌರವ್ ಅಗರವಾಲ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೀಗೆ ಸ್ಥಳೀಯ ರಜೆಗಳನ್ನು ಆಯಾ ಜಿಲ್ಲಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ.
ಬಾಬಾ ರಾಮದೇವ್ ಮಸೂರಿಯಾ ಮೇಳ ಇರುವ ಹಿನ್ನೆಲೆ ಸೋಮವಾರ ಜೋಧ್‌ಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಾಳೆಯಿಂದ ಮಸೂರಿಯಾ ಬಾಬಾ ರಾಮದೇವ್ ಮೇಳ ಆರಂಭ ಆಗಲಿದೆ. ಈ ಹಿನ್ನೆಲೆ ಜನಪದ ದೇವತೆ ಬಾಬಾ ರಾಮದೇವ್ ಅವರ ಅಭಿವ್ಯಕ್ತಿ ಉತ್ಸವವನ್ನು ಆಚರಿಸಲು ರಾಮದೇವ್ರಾಗೆ ತೆರಳುವ ಮೊದಲು ಭಕ್ತರು ಮಸೂರಿಯಾದಲ್ಲಿ ಇರುವ ಬಾಬಾ ಬಲಿನಾಥ್ ದೇವಾಲಯಕ್ಕೆ ಆಗಮಿಸುತ್ತಾರೆ.ಮಸೂರಿಯಾದಲ್ಲಿ ಇರುವ
ಬಾಬಾ ರಾಮದೇವ್ ಅವರ ಗುರು ಬಲಿನಾಥ್ ದೇವಾಲಯದಲ್ಲಿ ಜಾತ್ರೆಯು ಅಮಾವಾಸ್ಯೆಯಂದು ಪ್ರಾರಂಭ ಆಯಿತು. ಆದರೆ, ಜನಪದ ದೇವತೆ ಬಾಬಾ ರಾಮದೇವ್ ಅವರ ಅಭಿವ್ಯಕ್ತಿ ಉತ್ಸವವನ್ನು ಆಗಸ್ಟ್ 25ರಂದು ಆಚರಿಸಲಾಗುವುದು.
ದೇವಾಲಯವನ್ನು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಶ್ರೀ ಪಿಪಾ ಕ್ಷತ್ರಿಯ ಸಮಸ್ತ ನ್ಯಾತಿ ಸಭಾ ಟ್ರಸ್ಟ್‌ನ ಅಧ್ಯಕ್ಷ ನರೇಂದ್ರ ಚೌಹಾಣ್ ಈ ಕುರಿತು ಮಾತನಾಡಿದ್ದಾರೆ. ಜಾತ್ರೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ದೇವಾಲಯದ ಆವರಣದಲ್ಲಿ 56 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ದೇವರ ದರ್ಶನಕ್ಕೆ ಅನುಕೂಲ ಆಗುವಂತೆ ಟ್ರಸ್ಟ್ 300 ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ. ಪರ್ಚಂಡಿ ನೀರನ್ನು ನಿಯಮಿತವಾಗಿ ಬ್ಲೀಚಿಂಗ್ ಪೌಡರ್ ಸೇರಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಬಾಬಾ ಅವರ ಅಭಿವ್ಯಕ್ತಿ ಉತ್ಸವವನ್ನು ಆಚರಣೆ ಹಿನ್ನೆಲೆ ಇಡೀ ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗಿದೆ.
ಇನ್ನು ಮಧ್ಯಪ್ರದೇಶದ ಇಂದೋರ್‌ನ ಅಜನೋರ್ ಗ್ರಾಮದಿಂದ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆಯ ಮೂಲಕ ಜೋಧ್‌ಪುರದ ಮಸುರಿಯಾ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಇವರು ಕಳೆದ 13 ವರ್ಷಗಳಿಂದ ಪ್ರತಿ ವರ್ಷ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ. ಬಳಿಕ ಮಸುರಿಯಾ ದೇವಸ್ಥಾನ ಹಾಗೂ ರುನಿಚಾ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿಕೊಂಡು ಬರುವ ಸಂಪ್ರಾದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಪಾದಗಳಿಗೆ ಗಂಟೆಗಳನ್ನು ಕಟ್ಟಿಕೊಂಡು, ಬಾಬಾ ಅವರ ಪ್ರತಿಮೆಯನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯ ಮಾಡಲಾಗುತ್ತದೆ. ಇನ್ನು ಇಲ್ಲಿಗೆ ಭಿಲ್ವಾರಾ ಜಿಲ್ಲೆಯ ಶಹಪುರದ ಫಗಂಚಂದ್ ಅವರು ಕುಟುಂಬ ಸಮೇತ ಆಗಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಾಬಾ ಖಂಡಿತವಾಗಿಯೂ ತನ್ನ ಆಸೆಗಳನ್ನು ಪೂರೈಸುತ್ತಾರೆ ಎಂದು ಹೇಳಿದರು. ಇನ್ನೂ ಈ ದಿನ ಇಲ್ಲಿನ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ರಚೇರಿಗಳಿಗೆ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications