ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆ, ಸೈನಿಕ ಶಿಬಿರ ಮೇಲೆ ಉಗ್ರರ ದಾಳಿ ಸಂಭವ

By ವಿಕ್ಕಿ ನಂಜಪ್ಪ
|
Google Oneindia Kannada News

ನವದೆಹಲಿ, ಜ. 15: ಈ ಬಾರಿಯ ಗಣರಾಜ್ಯೋತ್ಸವ ಭಾರತಕ್ಕೆ ಹಲವು ಕಾರಣಗಳಿಂದ ಅತ್ಯಂತ ಮಹತ್ವದ್ದೆನಿಸಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಪ್ರಮುಖ ಕಾರಣ. ಇದೇ ಕಾರಣಕ್ಕಾಗಿ ಉಗ್ರರು ಭಾರತದಲ್ಲಿ ರಕ್ತಪಾತ ನಡೆಸಲು ಸಂಚು ರೂಪಿಸಿದ್ದಾರೆ.

ಕರ್ನಾಟಕದ ಭಟ್ಕಳದಲ್ಲಿ ಈಚೆಗಷ್ಟೇ ಬಂಧಿಸಲ್ಪಟ್ಟಿರುವ ಕೆಲವು ಶಂಕಿತರು ಕೂಡ ಒಬಾಮಾ ಬರುವ ಮೊದಲು ಕರ್ನಾಟಕದಲ್ಲಿ ರಕ್ತಪಾತ ನಡೆಸಲು ಉದ್ದೇಶಿಸಿದ್ದರು ಎಂಬುದು ಬಯಲಾಗಿದೆ.

ಮಹಾರಾಷ್ಟ್ರದಲ್ಲಿ ಇಬ್ಬರ ಬಂಧನ : ಬಾಂದ್ರಾದಲ್ಲಿರುವ ಅಮೆರಿಕ ಶಾಲೆ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ಐಎಸ್ಐಎಸ್ ಬೆಂಬಲಿಗರಾದ ಅನೀಸ್ ಅನ್ಸಾರಿ ಹಾಗೂ ಒಮರ್ ಎಲ್ಹಾಜಿ ಎಂಬಿಬ್ಬರನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ. [ಐಎಸ್ಐಎಸ್ ನೇಮಕಾತಿಯ ಕೊಂಡಿ ಸುಲ್ತಾನ್]

isis

ಈ ಪ್ರಕರಣಗಳು ಹಾಗೂ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಗಣರಾಜ್ಯೋತ್ಸವದಂದು ದೇಶಾದ್ಯಂತ ಶಾಲೆ ಹಾಗೂ ಸೈನಿಕ ಶಿಬಿರದ ಮೇಲೆ ಉಗ್ರರು ದಾಳಿ ನಡೆಸುವ ಶಂಕೆಯಿದೆ ಎಂದು ಲೆ. ಜನರಲ್ ಕೆ.ಎಚ್. ಸಿಂಗ್ ಎಚ್ಚರಿಕೆ ನೀಡಿದ್ದಾರೆ. [ಮೆಹದಿ ಬಂಧನ : ಟಾಪ್ 10 ಬೆಳವಣಿಗೆ]

ಮಹಾರಾಷ್ಟ್ರದಲ್ಲಿ ಬಂಧಿತ ಉಗ್ರರು ಪೇಶಾವರದ ಸೈನಿಕ ಶಾಲೆ ಮೇಲೆ ನಡೆದ ದಾಳಿಯಂತೆಯೇ ಭಾರತದಲ್ಲೂ ದಾಳಿ ನಡೆಸಲು ಯೋಜಿಸಿದ್ದರು ಎನ್ನಲಾಗಿದೆ. ಆದ್ದರಿಂದ ಶಾಲೆ ಹಾಗೂ ಸೇನಾ ಶಿಬಿರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲು ನಿರ್ಧರಿಸಲಾಗಿದೆ. ಶಾಲೆಗಳು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಲಾಗಿದೆ. [ಜಾಣ ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ]

ಟಾರ್ಗೆಟ್ ಅಮೆರಿಕ : ಮಹಾರಾಷ್ಟ್ರ ಎಟಿಎಸ್ ಬಂಧಿಸಿರುವ ಅನ್ಸಾರಿ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕರಲ್ಲೊಬ್ಬರಾದ ರಿಯಾಜ್ ಭಟ್ಕಳ್‌ಗೆ ಹತ್ತಿರದ ವ್ಯಕ್ತಿಯಾಗಿದ್ದ. ಐಎಸ್ಐಎಸ್‌ ಸಂಘಟನೆಗೆ ಜನರನ್ನು ಸೇರಿಸುತ್ತಿದ್ದ ಒಮರ್ ಎಲ್ಹಾಜಿ ಭಾರತೀಯ ಯುವಕರನ್ನು ವೆಬ್ ಸೈಟ್ ಮೂಲಕ ಸಂಪರ್ಕಿಸಿ ಸೆಳೆಯುತ್ತಿದ್ದ. ಅವರ ಮೂಲಕ ಭಾರತದಲ್ಲಿ ಅಮೆರಿಕ ನಡೆಸುತ್ತಿರುವ ಚಟುವಟಿಕೆ ಮೇಲೆ ದಾಳಿ ನಡೆಸುವುದು ಎಲ್ಹಾಜಿ ಉದ್ದೇಶವಾಗಿತ್ತು.

English summary
Lt General K H Singh has issued a statement that terrorists may try and attack schools and army camps on Republic Day. This statement comes in the wake of the Maharashtra ATS busting a ploy by ISIS sympathizers who had planned an attack on the American School in Bandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X