School Holidays in March: ಮಾರ್ಚ್‌ನಲ್ಲಿ ಶಾಲೆಗಳಿಗೆ ಭರ್ಜರಿ ರಜೆ ಘೋಷಣೆ: ದಿನಾಂಕಗಳು- ಪಟ್ಟಿ

School Holiday in March 2025: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರ್ಚ್ ಸಹ ನಿರಂತರ ವಿಶ್ರಾಂತಿ ನೀಡುವ ತಿಂಗಳಾಗಿದೆ. ಅಂದರೆ, ಜನವರಿಯಲ್ಲಿ ಮಕರ ಸಂಕ್ರಾಂತಿ ರಜೆ, ಫೆಬ್ರವರಿಯಲ್ಲಿ ವಿವಿಧ ಹಬ್ಬಗಳಿಗಾಗಿ ಗುಡ್ ನ್ಯೂಸ್ ಪಡೆದಿದ್ದ ವಿದ್ಯಾರ್ಥಿಗಳಿಗೆ ಮಾರ್ಚ್ ತಿಂಗಳು ಸಹ ಸಿಹಿ ಸುದ್ದಿ ನೀಡಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗುವುದು ತಿಂಗಳುಗಳು ಬಾಕಿ ಇರುವಾಗಲೇ ಮಾರ್ಚ್‌ ನಲ್ಲಿ ಸಹ ಸಾರ್ವಜನಿಕ ರಜೆಗಳು ಎದುರಾಗಿವೆ. ಯಾವೆಲ್ಲ ಹಬ್ಬಗಳು ಎದುರಾಗಿವೆ? ಮಾರ್ಚ್ ತಿಂಗಳ ರಜೆ ದಿನದ ಪಟ್ಟಿ ಇಲ್ಲಿದೆ ನೋಡಿ.

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಮಾರ್ಚ್‌ನಲ್ಲಿ ಶಾಲೆಗಳಿಗೆ ಕೆಲವು ರಜೆಗಳು ನಿಗದಿ ಆಗಿವೆ. ಈದ್-ಉಲ್-ಫಿತರ್, ಹೋಳಿ ಹಬ್ಬ (ಹೋಳಿಕಾ ದಹನ್), ಹಿಂದೂಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ, ಗುಡಿ ಪಾಡ್ವಾ ಮತ್ತು ಚೈತ್ರ ಸುಖಾದಿ ಹಬ್ಬಗಳು ಸೇರಿವೆ. ಈ ಹಬ್ಬಗಳು ಮಾರ್ಚ್‌ನಲ್ಲಿ ಬರಲಿದ್ದು, ಆಯಾ ದಿವಸ ಶಾಲೆಗಳಿಗೆ ರಜೆ ಇರುತ್ತವೆ. ಪಟ್ಟಿ ಇಲ್ಲಿದೆ.

School Holiday in March 2025 School Closed in this Date Due Festivals in India Check Full List Here

ಮಾರ್ಚ್ 13, 14 ರಂದು ಹೋಳಿ ಹಬ್ಬ-ರಜೆ

ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ದೀಪೋತ್ಸವ ಬೆಳಗಿಸಲಾಗುತ್ತದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಸಾಧಿಸುವಂ ಸಂಕೇತವಾಗಿದೆ. ಈ ಹಬ್ಬದ ಪ್ರಯುಕ್ತ ಎಲ್ಲ ರಾಜ್ಯಗಳು ಅಂದರೆ ಭಾರತಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದು ಬಣ್ಣದೋಕುಳಿಯಲ್ಲಿ ಮುಳುಗಲಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ.

ಕೆಲವೆಡೆ ಹೋಳಿ ಹಬ್ಬವನ್ನು ಮಾರ್ಚ್ 14ರಂದು ಆಚರಿಸುವ ಹಿನ್ನೆಲೆಯಲ್ಲಿ ಅಂದು ಕೆಲವು ರಾಜ್ಯಗಳ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಡಿ ಮನೆಯ ಕುಟುಂಬಸ್ಥರು ಅಂದು ಹಬ್ಬದಲ್ಲಿ ಪಾಲ್ಗೊಂಡಿರುತ್ತಾರೆ.

School Holiday in March 2025 School Closed in this Date Due Festivals in India Check Full List Here

ಮಾರ್ಚ್ 30 ರಂದು ಯುಗಾದಿ ಸೇರಿ ವಿವಿಧ ಹಬ್ಬಗಳು- ರಜೆ

ಮಾರ್ಚ್‌ 30 ರಂದು ಯುಗಾದಿ ಹಬ್ಬ, ಗುಡಿ ಪಾಡ್ವಾ ಮತ್ತು ಚೈತ್ರ ಸುಖಲಾಡಿ ಹಬ್ಬಗಳು ಎದುರಾಗುತ್ತವೆ. ಈ ಹಬ್ಬಗಳು ಹೊಸ ವರ್ಷದ ಹಬ್ಬಗಳಾಗಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಆಚರಿಸಲಾಗುತ್ತದೆ. ಹೊಸ ವರ್ಷದ ಶುಭಾರಂಭಕ್ಕೆ ಈ ಹಬ್ಬಗಳು ಸಾಕ್ಷಿಯಾಗಲಿವೆ ಅಂತಲೇ ಹಿಂದೂಗಳು ಭಾವಿಸಿದ್ದಾರೆ. ಈ ಸಂಬಂಧ ಈ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಮಾರ್ಚ್ 31 ರಂದು ಈದ್ ಉಲ್ ಫಿತರ್-ರಜೆ

ಮುಸಲ್ಮಾನರ ಪವಿತ್ರ ಹಬ್ಬವಾಗಿರುವ ಈದ್-ಉಲ್-ಫಿತರ್ ರಂಜಾನ್ ಅನ್ನು ಭಾರತದಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಅಂದು ಚಂದ್ರನ ದರ್ಶನದ ಆಧಾರದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬವನ್ನು ಎಲ್ಲ ರಾಜ್ಯಗಳಲ್ಲಿ ಆಚರಣೆ ಮಾಡುತ್ತಾರೆ. ಹೀಗಾಗಿ ರಾಷ್ಟ್ರವ್ಯಾಪಿ ಶಾಲೆಗಳಿಗೆ ರಜೆ ಘೋಷಣೆ ಆಗಿದೆ.

ಶಾಲೆ-ಬ್ಯಾಂಕ್ ರಜಾ ದಿನಗಳ ಪಟ್ಟಿ

ಹೋಳಿ ಹಬ್ಬ: ಮಾರ್ಚ್ 13

ಹೋಳಿ ಹಬ್ಬ: ಮಾರ್ಚ್ 14

ಗುಡಿ ಪಾಡ್ವಾ: ಮಾರ್ಚ್ 30

ರಂಜಾನ್ : ಮಾರ್ಚ್ 31

ಭಾನುವಾರ: ಮಾರ್ಚ್ 02

ಎರಡನೇ ಶನಿವಾರ: ಮಾರ್ಚ್ 08

ಭಾನುವಾರ : ಮಾರ್ಚ್ 09

ಭಾನುವಾರ : ಮಾರ್ಚ್ 16

ನಾಲ್ಕನೇ ಶನಿವಾರ : ಮಾರ್ಚ್ 22

ಭಾನುವಾರ : ಮಾರ್ಚ್ 23

ಭಾನುವಾರ : ಮಾರ್ಚ್ 30

05 ಶನಿವಾರ-05 ಭಾನುವಾರಗಳು, ಸರಣಿ ರಜೆಗಳು

ಈ ವರ್ಷ ಮಾರ್ಚ್ ಸಹ ವಿದ್ಯಾರ್ತಿಗಳಿಗೆ, ಬ್ಯಾಂಕ್ ನೌಕರರಿಗೆ ಹೆಚ್ಚಿನ ವಿರಾಮ ನೀಡುತ್ತವೆ. ಏಕೆಂದರೆ ಈ ತಿಂಗಳು ಐದು ಭಾನುವಾರ ಬಂದಿವೆ. ವಿಸ್ತೃತ ವಾರಾಂತ್ಯ ಅನುಭವಿಸಬಹುದಾಗಿದೆ. ದೇಶದ ಅನೇಕ ಶಾಲೆಗಳು ಶನಿವಾರ ಮತ್ತು ಭಾನುವಾರಗಳು ಮುಚ್ಚಿರುತ್ತವೆ. ಐದು ಭಾನುವಾರವು ರಜೆ ಇರುತ್ತವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇದ್ದರೂ ಶಾಲೆಗಳ ಕ್ಯಾಲೆಂಡ್ ಒಮ್ಮೆ ಪರಿಶೀಲಿಸಿಕೊಳ್ಳಬೇಕು.

ನೌಕರರು, ವಿದ್ಯಾರ್ಥಿಗಳಿಗೆ ಸರಣಿ ರಜೆ

ಇನ್ನೂ ಬ್ಯಾಂಕ್ ಗಳಿಗೆ ಐದು ಭಾನುವಾರದ ರಜೆ, ಹಬ್ಬಗಳ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳೂ ಸಿಗಲಿವೆ. ಮಾರ್ಚ್‌ 13 ಇಲ್ಲವೇ 14ರಂದು ಹೋಳಿ ಹಬ್ಬ ಆಚರಿಸಿದಲ್ಲಿ, ಮಾರ್ಚ್ 15 ಶನಿವಾರ ಹಾಗೂ ಮಾರ್ಚ್ 16 ಭಾನುವಾರ ಬಂದಿದೆ. ಹೀಗಾಗಿ ಸರಣಿ ರಜೆಗಳನ್ನು ಅನುಭವಿಸಬಹುದಾಗಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+