School Holiday: ಫೆಬ್ರವರಿ 14ರಂದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ
School Holiday Announced: ಶಾಲಾ ವಿದ್ಯಾರ್ಥಿಗಳಿಗೆ ರಜೆ ಬಂತೆಂದರೆ ಸಾಕು ಕುಣಿದು ಕುಪ್ಪಳಿಸಿ ಬಿಡುತ್ತಾರೆ. ಸದ್ಯ ಬೇಸಿಗೆ ಇದ್ದು, ಬೇಸಿಗೆ ರಜೆ ಮುನ್ನವೇ ಈ ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಬ್ಬ, ಹರಿದಿನಗಳಲ್ಲಿ, ಪ್ರಮುಖ ಸಂದರ್ಭಗಳಲ್ಲಿ ರಜೆ ಘೋಷಿಸಲಾಗುತ್ತದೆ. ಅದೇ ರೀತಿ ಫೆಬ್ರವರಿ 14ರಂದು ಶುಕ್ರವಾರ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದಕ್ಕೆ ಕಾರಣವೇನು, ಎಲ್ಲೆಲ್ಲಿ ರಜೆ ಇದೆ?
ಬೇಸಿಗೆ ರಜೆ ಮುನ್ನವೇ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳು ರಜೆ ಪಡೆದಿದ್ದಾರೆ. ಶಬ್-ಎ-ಬರಾತ್ ಮತ್ತು ಪಂಚನನ್ ಬರ್ಮಾ ಜಯಂತಿ ಆಚದರಣೆ ಕಾರಣದಿಂದಾಗಿ ಪಶ್ಚಿಮ ಬಂಗಾಳ ಶಾಲೆಗಳಿಗೆ ಇಂದು ಫೆಬ್ರವರಿ 13 ಗುರುವಾರ ಹಾಗೂ 14ರ ಶುಕ್ರವಾರದಂದು ಶಾಲಾ ರಜೆ ನೀಡಿ ಆದೇಶಿಸಲಾಗಿದೆ.

ಈ ಹಿಂದೆ ಫೆಬ್ರವರಿ 14 ಅನ್ನು ಮಾತ್ರ ಶಬ್-ಎ-ಬರಾತ್‌ಗೆ ರಜಾ ದಿನವೆಂದು ಗುರುತಿಸಿದ್ದ ಸರ್ಕಾರ, ಹಬ್ಬದ ದಿನಾಂಕ ಫೆಬ್ರವರಿ 13 ಎಂದು ದೃಢಪಡಿಸಿದೆ. ಹೀಗಾಗಿ ಆ ದಿನವು ಸಹ ರಜೆ ನೀಡಲು ತಿಳಿಸಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಹೈದರಾಬಾದ್, ತೆಲಂಗಾಣದಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿ 14 ಠಾಕೂರ್ ಪಂಚನನ್ ಬರ್ಮಾ ಅವರ ಜನ್ಮ ದಿನಾಚರಣೆ ಇದು. ಈ ದಿನದಂದು ಎಲ್ಲ ಸರ್ಕಾರಿ ಶಾಲೆಗಳು, ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಿವೆ. ಒಟ್ಟಾರೆ ಈ ಎರಡು ದಿನ ರಜೆಗಳ ಸೇರಿದಂತೆ ಫೆಬ್ರವರಿ 15 ಹಾಗೂ 16ರ ವಾರಾಂತ್ಯದ ರಜೆಗಳು ಸರ್ಕಾರಿ ನೌಕರರಿಗೆ ಸಿಗುತ್ತವೆ.

ಸರ್ಕಾರದ ನಿರ್ಧಾರ ಬೆನ್ನಲ್ಲೆ ಇಂದಿನಿಂದ ಶಾಲೆಗಳು, ಸರ್ಕಾರಿ ಕಚೇರಿಗಳು, ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ರಾಜ್ಯ ಸರ್ಕಾರದ ಒಡೆತನದ ಉದ್ಯಮಗಳು ಕೆಲಸ ಸ್ಥಗಿತಗೊಳಿಸಲಿವೆ. ಸರ್ಕಾರಿ ನೌಕರರಿಗೆ 04 ದಿನಗಳ ವಿಸ್ತೃತ ರಜೆ ನೀಡಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳ ಹೊರತುಪಡಿಸಿದರೆ, ಹೈದರಾಬಾದ್‌ನಲ್ಲೂ ಶಬ್-ಎ-ಬರಾತ್ ಆಚರಣೆ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡಿದೆ. ಆಚರಣೆಗಳಲ್ಲಿ ಮಕ್ಕಳು, ಮಹಿಳೆಯರು, ನಾಗರಿಕರು ತೊಡಗಲಿದ್ದಾರೆ.
ಶಬ್-ಎ-ಬರಾತ್ ಆಚರಣೆ ಕುರಿತು..
ಈ ಶಬ್-ಎ-ಬರಾತ್ ಇಸ್ಲಾಮಿಕ್ ತಿಂಗಳ ಶಾಬಾನ್‌ನ 15 ನೇ ರಾತ್ರಿ ಆಚರಿಸುವ ಇಸ್ಲಾಮರ ಪ್ರಮುಖ ಹಬ್ಬವಾಗಿದೆ. ] ಕ್ಷಮೆ ಮತ್ತು ಕರುಣೆ ಬಗ್ಗೆ ಅಪಾರ ನಂಬಿಕೆ ಇರುತ್ತದೆ. ಈ ರಾತ್ರಿಯನ್ನು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪೂರ್ವಜರನ್ನು ಸ್ಮರಿಸುತ್ತಾರೆ. ಮುಸ್ಲಿಂ ಮಂದಿ ಮಸೀದಿಗಳಿಗೆ ತೆರಳಿ ಪ್ರಾರ್ಥಿಸುತ್ತಾರೆ. ಕೆಲ ಕಾಲ ಅಲ್ಲಿಯೇ ಸಮಯ ಕಳೆಯುತ್ತಾರೆ.












Click it and Unblock the Notifications