School Holiday: ಜುಲೈ 14ರಿಂದ ಆಗಸ್ಟ್ 11ರ ವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
School Holiday: ವರ್ಷದ ಆರಂಭದಿಂದಲೂ ಹಲವೆಡೆ ಶಾಲೆಗಳಿಗೆ ವಿವಿಧ ಕಾರಣಗಳಿಂದ ಸಾಲು ರಜಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಜುಲೈ 14ರಿಂದ ಆಗಸ್ಟ್ 11ರ ವರೆಗೆ ಈ ಭಾಗಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ವಿಶೇಷ ಕಾರ್ಯಕ್ರಮಗಳು ಹಾಗೂ ಮಳೆಯಂತಹ ಸಂದಂರ್ಭಗಳಲ್ಲಿ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ದೇಶದ ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಬೇಸಿಗೆ ರಜೆಗಳು ಮುಗಿದು ಶಾಲೆಗಳು ಕೂಡ ಆರಂಭವಾಗಿವೆ. ಈ ನಡುವೆಯೇ ಭಾರೀ ಮಳೆ ಹಿನ್ನೆಲೆ ಹಲವು ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮವಾಗಿ ಸಾಲು ರಜೆಗಳನ್ನೇ ಘೋಷಣೆ ಮಾಡಿವೆ. ಈ ನಡುವೆಯೇ ಇದೀಗ ಈ ಭಾಗದಲ್ಲಿ ಜುಲೈ 14ರಿಂದ ಆಗಸ್ಟ್ 11ರ ವರೆಗೆ ಪ್ರತಿ ಸೋಮವಾರ ರಜೆ ನೀಡಲಾಗಿದೆ. ಈ ರಜೆಗಳನ್ನು ಸರಿದೂಗಿಸಲು ಕೂಡ ಕ್ರಮ ತೆಗೆದುಕೊಳ್ಳಲಾಗಿದೆ.
ಉಜ್ಜಯಿನಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಜುಲೈ 14ರಿಂದ ಆಗಸ್ಟ್ 11ರ ವರೆಗೆ ಪ್ರತಿ ಸೋಮವಾರ ರಜೆ ಘೋಷಿಸಿ ಉಜ್ಜಯಿನಿ ಜಿಲ್ಲಾಧಿಕಾರಿ ರೌಶನ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಈ ರಜೆಗಳನ್ನು ಸರಿದೂಗಿಸಲು ಭಾನುವಾರಗಳಂದು ಶಾಲೆಗಳನ್ನು ತೆರೆದು ತರಗತಿ ನಡುಸುವಂತೆ ಸೂಚಿಸಲಾಗಿದೆ. ಉಜ್ಜಯಿನಿಯಲ್ಲಿ ಶ್ರಾವಣದ ಸಮಯದಲ್ಲಿ ಪ್ರತಿ ಸೋಮವಾರದಂದು ಸಾಂಪ್ರದಾಯಿಕ ಮಹಾಕಾಲ್ ಮೆರವಣಿಗೆಯನ್ನು ಮಾಡಲಾಗುತ್ತದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭುಗಿಲೆದ್ದ ಆಕ್ರೋಶ: ಪವಿತ್ರ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಶಾಲೆಗಳನ್ನು ಮುಚ್ಚುವ ಉಜ್ಜಯಿನಿ ಜಿಲ್ಲಾಡಳಿತದ ನಿರ್ಧಾರದ ಬಗ್ಗೆ ಮಧ್ಯಪ್ರದೇಶದ ರಾಜ್ಯದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದ್ದು, ಮುಖ್ಯಮಂತ್ರಿ ವಿರುದ್ಧ ಸಮಾಧಾನ ವ್ಯಕ್ತಪಡಿಸಿದೆ. ಆದರೆ, ಬಿಜೆಪಿ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸು ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದೆ.
ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಈ ಆದೇಶವನ್ನು ಟೀಕಿಸಿದ್ದು, ಇದು ಅನಗತ್ಯ ಮತ್ತು ರಾಜಕೀಯ ಪ್ರೇರಿತ ನಿರ್ಧಾರವಾಗಿದೆ. ಮಹಾಕಲ್ ಸವಾರಿ ಆಚರಣೆಯನ್ನು ಎಲ್ಲಾ ಸಮುದಾಯಗಳ ಜನರು ಸ್ವಾಗತಿಸುತ್ತಾರೆ. ಆದರೆ ಈ ದಿನ ಅಂದರೆ, ಸೋಮವಾರದಂದು ಶಾಲೆಗಳನ್ನು ಮುಚ್ಚುವುದು ಹಾಗೂ ಇದನ್ನು ಸರಿದೂಗಿಸಲು ಭಾನುವಾರದಂದು ಶಾಲೆಗಳನ್ನು ನಡೆಸುವುದು ಸರಿಯಲ್ಲ. ಇದು ಮುಖ್ಯಮಂತ್ರಿಯನ್ನು ಮೆಚ್ಚಿಸುವ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರು ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿಯ ನಿರ್ಧಾರ ಶ್ಲಾಘಿನೀಯವಾಗಿದೆ ಎಂದು ಹೇಳಿದರು. ಅಲ್ಲದೆ, ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಅಗೌರವದಿಂದ ಕಾಣುತ್ತಿದೆ ಎಂದು ಆರೋಪಿಸಿದರು. ಇನ್ನು ಸೋಮವಾರ ಶಾಲೆಗಳಿಗೆ ರಜೆ ಇರುವುದರಿಂದ ಉಜ್ಜಯಿನಿಯಲ್ಲಿ ವಿದ್ಯಾರ್ಥಿಗಳ ಪೋಷಕರು ಮಹಾಕಾಲ್ ಸವಾರಿಯಲ್ಲಿ ತಮ್ಮ ಕುಟುಬಂದೊಂದಿದೆ ಸಂತೋಷದಿಂದ ಭಾಗವಹಿಸಲು ಅನುಕೂಲವಾದಂತಾಗಲಿದೆ ಎಂದು ಹೇಳಿದರು.
ಸ್ಥಳೀಯ ಹಬ್ಬಗಳು, ಮಳೆಯಂತಯ ಸಂದರ್ಭಗಳಲ್ಲಿ ರಜಾದಿನಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಘೋಷಣೆ ಮಾಡಲು ಅನುಮತಿ ಇದೆ ಅಂತಲೂ ಹೇಳಿದರು. ಒಟ್ಟಿನಲ್ಲಿ ಸೋಮವಾರ ರಜೆ ನೀಡಿ, ಈ ರಜೆಯನ್ನು ಸರಿದೂಗಿಸಲು ಭಾನುವಾರ ತರಗತಿಗಳನ್ನು ನಡೆಸುವ ನಿರ್ಧಾರ ಉತ್ತಮವಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬಹುದು ಅಂತಲೂ ಹೇಳಿದ್ದಾರೆ.












Click it and Unblock the Notifications