ನೋಟು ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಕೇಂದ್ರದಿಂದ ಕೇವಿಯಟ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವ ದೆಹಲಿ, ನವೆಂಬರ್ 10: 500, 1000 ರುಪಾಯಿಯ ನೋಟು ರದ್ದು ಪ್ರಶ್ನಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸಿದೆ. ಈ ವಿಚಾರವಾಗಿ ಕೇಂದ್ರ ಸರಕಾರ ಕೇವಿಯಟ್ ಸಲ್ಲಿಸಿದೆ. ಆದ್ದರಿಂದ ಕೇಂದ್ರದ ವಾದವನ್ನು ಕೇಳದೆ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ.

ವಕೀಲರೊಬ್ಬರು ಬುಧವಾರ 500, 1000 ರುಪಾಯಿಯ ನೋಟು ರದ್ದು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸರಕಾರದ ಕ್ರಮದ ವಿರುದ್ಧ ಸಂಗಮ್ ಲಾಲ್ ಪಾಂಡೆ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಹಾಕಿದ್ದಾರೆ. ಈ ತೀರ್ಮಾನದಿಂದ ಸಾರ್ವಜನಿಕರಿಗೆ ತುಂಬ ತೊಂದರೆ ಆಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.[FAQ: 500, 1000 ನೋಟು ಬದಲಾವಣೆ ಬ್ಯಾಂಕ್ ನಿಯಮಗಳು]

SC to hear plea challenging ban on Rs 500, 1,000 notes

ಈ ವಿಚಾರ ತುರ್ತಾಗಿದ್ದು, ಶೀಘ್ರದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಅರ್ಜಿದಾರರು ಗುರುವಾರ ಮನವಿ ಮಾಡಲಿದ್ದಾರೆ. ಇದೇ ರೀತಿಯ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್ ನಲ್ಲೂ ಹಾಕಲಾಗಿದೆ. ಮಂಗಳವಾರ ರಾತ್ರಿ, ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಸರಕಾರವು ತಕ್ಷಣದಿಂದಲೇ ಚಾಲ್ತಿಯಲ್ಲಿರುವ 500, 1000 ಮುಖಬೆಲೆ ನೋಟುಗಳನ್ನು ರದ್ದು ಪಡಿಸುತ್ತಿದೆ ಎಂದಿದ್ದರು.[ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ]

ಕಪ್ಪುಹಣದ ನಿಯಂತ್ರಣಕ್ಕೆ, ಭ್ರಷ್ಟಾಚಾರ ದಮನಕ್ಕೆ ಹಾಗೂ ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ನೆರವು ದೊರೆಯದಂತೆ ತಡೆಯಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the Supreme Court gets ready to hear a petition that challenged the ban on Rs 500 and 1,000 notes, the centre filed a caveat seeking to be heard in the matter. A caveat is filed in a case so that an interim order is not passed without hearing the other party.
Please Wait while comments are loading...