ದೇಶದ ರಸ್ತೆಗಳು ಜೈಂಟ್ ಕಿಲ್ಲರುಗಳು- ಸುಪ್ರೀಂಕೋರ್ಟ್

Posted By:
Subscribe to Oneindia Kannada

ನವದೆಹಲಿ, ಏ.24-ನಮ್ಮ ದೇಶದ ರಸ್ತೆಗಳನ್ನು ಕಂಡು ಸುಪ್ರೀಂಕೋರ್ಟಿಗೂ ರೋಸಿ ಹೋಗಿದೆ. 'ನಮ್ಮೀ ರಸ್ತೆಗಳು ಜೈಂಟ್ ಕಿಲ್ಲರುಗಳು' ಎಂದು ತಡವಾಗಿಯಾದರೂ ಸುಪ್ರೀಂ ಕೋರ್ಟ್ ಹೇಳಿದೆ.

ಭಾರತದಲ್ಲಿ 2004ರಲ್ಲಿ 92,618 ರಸ್ತೆ ಅಪಘಾತಗಳು ಸಂಭವಿಸಿದ್ದರೆ 2009 ವೇಳೆಗೆ ಆತಂಕಕಾರಿ ಪ್ರಮಾಣದಲ್ಲಿ 1.25 ಲಕ್ಷ ಅಪಘಾತಗಳು ಸಂಭವಿಸಿವೆ. ಅದೇ ನೆರೆಯ ಚೀನಾದಲ್ಲಿ ಈ ಐದು ವರ್ಷಗಳ ಅವಧಿಯಲ್ಲಿ ಅಪಘಾತಗಳ ಸಂಖ್ಯೆ 1.25 ಲಕ್ಷ ಇದ್ದದ್ದು ಗಣನೀಯ ಪ್ರಮಾಣದಲ್ಲಿ 67,759ಕ್ಕೆ ಕುಸಿದಿದೆ.

ಅಂದಹಾಗೆ ಮುಖ್ಯಮಂತ್ರಿಯಾದ ಹೊಸದರಲ್ಲಿ ಚೀನಾ ಪ್ರವಾಸಕ್ಕೆ ತೆರಳಿದ್ದ ನಮ್ಮ ಸಿದ್ದರಾಮಯ್ಯನವರು ಅಲ್ಲಿನ ರಸ್ತೆ ಸಂಚಾರವನ್ನು ಹಾಡಿ ಹೊಗಳಿದ್ದರು. ನಮ್ಮ ರಸ್ತೆಗಳನ್ನು ಹಾಗೆಯೇ ಮಾಡುತ್ತೇನೆ ಎಂದು ಎಧೇಯುಬ್ಬಿಸಿ ಹೇಳಿದ್ದರು. ಅದರಂತೆ ಚುನಾವಣೆ ಬಂತೆಂದು ನಾಮ್ ಕಾ ವಸ್ತೆ ಒಂದಷ್ಟು ರಸ್ತೆಗಳನ್ನು ಶೃಂಗಾರ ಮಾಡಿದರು. ಆದರೆ ಅದಕ್ಕಿಂತ ಹೆಚ್ಚುನದೇನೂ ಆಗಲಿಲ್ಲ. ಇದು ದೇಶದ ಕಥೆ-ವ್ಯಥೆ!

Supreme Court tells Indian roads giant killers need immediate action

ಅದರೆ ದೇಶದಲ್ಲಿ ರಸ್ತೆ ಅಪಘಾತಗಳು ಆತಂಕಕಾರಿ ಪ್ರಮಾಣದಲ್ಲಿ ಸಂಭವಿಸುತ್ತಿರುವುದನ್ನು ಕಂಡು ಹೌಹಾರಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ. ಮೋಟಾರು ವಾಹನ ಕಾಯಿದೆ ಮತ್ತು ರಸ್ತೆ ಸುರಕ್ಷತೆ ಅನುಸಾರ ರಸ್ತೆಗಳ ಸ್ವರೂಪ ಮತ್ತು ರಚನೆಗಳ ಬಗ್ಗೆ ಕೂಲಂಕಶ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ.

ಮುಖ್ಯನ್ಯಾಯಮೂರ್ತಿ ಪಿ ಸದಾಶಿವಂ ಮತ್ತು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಮತ್ತು ಎನ್ ವಿ ರಮಣ ಅವರ ನ್ಯಾಯಪೀಠವು ಅಪಘಾತಗಳ ಪ್ರಮಾಣ ಒಂದೇ ಸಮನೆ ಏರುತ್ತಿರುವುದನ್ನು ನೋಡಿದರೆ ದೇಶದ ರಸ್ತೆಗಳು ಜೈಂಟ್ ಕಿಲ್ಲರುಗಳು ಎಂಬುದರಲ್ಲಿ ಯಾವುದೇ ಅನುಮಾನವುಳಿಯುವುದಿಲ್ಲ. ಇದರತ್ತ ತಕ್ಷಣ ಗಮನಹರಿಸಿ, ನ್ಯೂನತೆಗಳನ್ನು ಸರಿಪಡಿಸುವ ಕಾಲ ಬಂದಿದೆ ಅನಿಸುತ್ತಿದೆ. ಹಾಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ವ್ಯಾಖ್ಯಾನಿಸಿದೆ.

ನಿಯಮಗಳ ಜಾರಿ, ಇಂಜಿನಿಯರಿಂಗ್, ಶಿಕ್ಷಣ ಮತ್ತು ತುರ್ತು ಚಿಕಿತ್ಸೆ - ಹೀಗೆ ನಾಲ್ಕೂ ಕ್ಷೇತ್ರಗಳನ್ನು ಒಟ್ಟುಗೂಡಿಸಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಗಮನಹರಿಸಬೇಕಿದೆ ಎಂದು ಪೀಠ ಗಮನ ಸೆಳೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Supreme Court tells Indian roads giant killers need immediate action. The Supreme Court on Tuesday set up a committee headed by an apex court judge to monitor implementation of motor vehicle laws and road safety designs after it found that Indian roads were "giant killers", with accidents increasing from 92,618 in 2004 to over 1.25 lakh in 2009. Compared to this, road accident deaths in China reduced from 1.07 lakh to 67,759 in the five-year period.
Please Wait while comments are loading...