ಮತದಾರರೇ, ಅಭ್ಯರ್ಥಿ ತಿರಸ್ಕರಿಸುವ ಹಕ್ಕು ಸಿಕ್ತು

ನವದೆಹಲಿ, ಸೆ. 27: ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು ಎಂಬ ಅವಕಾಶವನ್ನು ಮತದಾರರಿಗೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ (ಸೆ.27) ಸೂಚಿಸಿದೆ.

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಮತಯಂತ್ರಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊಸ ವಿನ್ಯಾಸದೊಂದಿಗೆ ಮತಯಂತ್ರ ನೀಡುವ ಸಾಧ್ಯತೆಯಿದೆ.

ಮತದಾನದ ವೇಳೆಯಲ್ಲಿ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ಕೋರಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಸಂಸ್ಥೆ(PUCL) ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮತಯಂತ್ರ (ಇವಿಎಮ್) ನಲ್ಲಿಯೇ ನಕಾರಾತ್ಮಕ ಮತದಾನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವೇ ? ವಿವರಣೆ ನೀಡಿ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಆಯೋಗ ನೀಡಿದ ಮಾಹಿತಿ ಆಧಾರಿಸಿ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಮುಖ್ಯನಾಯಮೂರ್ತಿ ಪಿ.ಸದಾಶಿವಂ ಹಾಗೂ ನ್ಯಾಯಮೂರ್ತಿ ರಂಜನ್ ಪ್ರಕಾಶ್ ದೇಶಾಯಿ ಮತ್ತು ನ್ಯಾ.ರಂಜನ್ ಗೋಗೊಯಿ ಅವರನ್ನೊಳಗೊಂಡ ಸುಪ್ರೀಂ ಪೀಠ ಈ ಮಹತ್ವದ ಆದೇಶ ನೀಡಿದ್ದಾರೆ.

Supreme Court gives voters right to reject all candidates in a poll

ಕುತೂಹಲದ ಸಂಗತಿ ಎಂದರೆ ಕರ್ನಾಟಕದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ 49 ಒ ನಿಯಮ ಬಳಕೆ ಮಾಡಲು ಮತದಾರರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿ ನಮೂನೆ ಗೊಂದಲದ ಕಾರಣ ಅನೇಕ ಮತದಾರರು ಇಷ್ಟವಿಲ್ಲದಿದ್ದರೂ ಕಡ್ಡಾಯ ಮತದಾನ ಮಾಡಬೇಕಾಯಿತು.

ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತದೆ. ಒಂದು ವೇಳೆ ಫಾರ್ಮ್ 49 ಬಳಸಿ ಶೇ.40ಕ್ಕಿಂತ ಅಧಿಕ ಮತ ಬಿದ್ದರೆ ಮರು ಚುನಾವಣೆ ಮಾಡಬೇಕಾಗುತ್ತದೆ. ಆದರೆ, ಈ ರೀತಿ ಹಾಕಿದ ಮತವನ್ನು ಮತದಾನ ತಿರಸ್ಕಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತಿಲ್ಲ. ಮತವನ್ನು ಪರಿಗಣಿಸಬೇಕಾಗುತ್ತದೆ.

2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿತ್ತು. ಅದರೆ, ಸುಪ್ರೀಂಕೋರ್ಟ್ ನೀಡಿರುವ ಮೇಲ್ಕಂಡ ಆದೇಶದಿಂದ ಗೊಂದಲ ನಿವಾರಣೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+