ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂವಿಧಾನಿಕ ಪೀಠದಿಂದ 'ಆಧಾರ್' ಪ್ರಕರಣಗಳ ವಿಚಾರಣೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 12: 'ಆಧಾರ್ ವೈಯಕ್ತಿಕ ಹಕ್ಕುಗಳಿಗೆ ಅಡ್ಡಿಯಾಗಲಿದೆ' ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರಿಂ ಕೋರ್ಟ್ ಐವರು ಸದಸ್ಯರ ಪೀಠ ರಚಿಸಲು ನಿರ್ಧಸಿದೆ.

ಆಧಾರ್ ಕಾರ್ಡ್ ಕಡ್ಡಾಯ ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇದು ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವ ಮೂಲಕ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ನಡೆದಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

SC sets up 5 judge Bench to decide if Aadhaar violated right to privacy

ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಈ ವಿಚಾರವನ್ನು 9 ನ್ಯಾಯಾಧೀಶರ ನ್ಯಾಯಪೀಠದಿಂದ ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡರು. ಈ ಹಿಂದೆ 8 ಸದಸ್ಯರ ನ್ಯಾಯಪೀಠ ವೈಯಕ್ತಿಕ ಹಕ್ಕುಗಳು ಮೂಲಭೂತ ಹಕ್ಕುಗಳಲ್ಲ ಎಂದು ತೀರ್ಪು ನೀಡಿದೆ. ಹಾಗಾಗಿ 9 ಸದಸ್ಯರ ನ್ಯಾಯಪೀಠ ರಚಿಸುವಂತೆ ಕೇಳಿಕೊಂಡರು.

ಆದರೆ ಸುಪ್ರಿಂ ಕೋರ್ಟ್ ಈ ಅರ್ಜಿಯ ವಿಚಾರಣೆಗೆ 5 ಜನರ ಪಂಚ ನ್ಯಾಯಾಧೀಶರ ಪೀಠ ರಚಿಸಲು ಮುಂದಾಗಿದೆ. ಈ ಪೀಠದಲ್ಲಿ ವಿಚಾರಣೆ ಮಾಡಿ ನಂತರ 9 ನ್ಯಾಯಾಧೀಶರ ಪೀಠ ಻ಅಗತ್ಯವೋ ಎಂಬುದನ್ನು ಸುಪ್ರಿಂ ಕೋರ್ಟ್ ನಿರ್ಧರಿಸಲಿದೆ. ಪಂಚ ನ್ಯಯಾಧೀಶರ ಪೀಠ ಇದೇ ಜುಲೈ 18ರಿಂದ ವಿಚಾರಣೆಯನ್ನು ಆರಂಭಿಸಲಿದೆ.

English summary
The Supreme Court has decided to set up a 5 judge Bench to decide on whether Aadhaar violated right to privacy. A batch of petitions have been filed in the Supreme Court challenging the decision to make Aadhaar mandatory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X