'ತ್ರಿವಳಿ ತಲಾಖ್' ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಪ್ರತಿದಿನವೂ ವಾದ ಮಂಡಿಸಲು ಅವಕಾಶ ನೀಡಿದ್ದ ಕೋರ್ಟ್ ಇಂದು ಅಂತಿಮ ವಿಚಾರಣೆ ನಡೆಸಿತು. ಇಂದಿನ ವಿಚಾರಣೆಯಲ್ಲಿ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಅಮಿತ್ ಚದ್ಧಾ ತ್ರಿವಳಿ ತಲಾಖ್ ಒಂದು ಪಾಪ ಎಂದು ಪ್ರತಿಪಾದಿಸಿದರು.
ನವದೆಹಲಿ, ಮೇ 18: ತ್ರಿವಳಿ ತಲಾಖ್ ನ ಸಾಂವಿಧಾನಿಕ ಮಾನ್ಯತೆಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಂತ್ಯಗೊಳಿಸಿದ್ದು ತೀರ್ಪು ಕಾಯ್ದಿರಿಸಿದೆ.
ಪ್ರತಿದಿನವೂ ವಾದ ಮಂಡಿಸಲು ಅವಕಾಶ ನೀಡಿದ್ದ ಕೋರ್ಟ್ ಇಂದು ಅಂತಿಮ ವಿಚಾರಣೆ ನಡೆಸಿತು. ಇಂದಿನ ವಿಚಾರಣೆಯಲ್ಲಿ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಅಮಿತ್ ಚದ್ಧಾ ತ್ರಿವಳಿ ತಲಾಖ್ ಒಂದು ಪಾಪ ಎಂದು ಪ್ರತಿಪಾದಿಸಿದರು. ಮಾತ್ರವಲ್ಲ ಇದು ಸಂವಿಧಾನ ಬಾಹಿರ ಎಂದು ವಾದಿಸಿದರು.[ಐವರು ನ್ಯಾಯಮೂರ್ತಿಗಳ ಕೈಯಲ್ಲಿ ಮೂರು ತಲಾಖ್ ಹಣೆಬರಹ]

ನಾಳೆ ಅಂತಿಮವಾಗಿ ಎರಡೂ ಕಡೆಯವರಿಗೆ ತಮ್ಮ ವಾದ ಮಂಡಿಸಲು 20 ನಿಮಿಷಗಳ ಗರಿಷ್ಠ ಕಾಲಾವಕಾಶ ನೀಡಲಾಗಿದೆ. ಇದಾದ ನಂತರ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಲಿದೆ.












Click it and Unblock the Notifications