ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?

Posted By:
Subscribe to Oneindia Kannada

ಬೆಂಗಳೂರು, ಸೆ. 20: ಸುಪ್ರೀಂಕೋರ್ಟಿನಿಂದ ಎರಡು ಬಾರಿ ಮಧ್ಯಂತರ ತೀರ್ಪು ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಒಮ್ಮೆ ಬಂದಿರುವ ತೀರ್ಪಿನಿಂದ ಮತ್ತೊಮ್ಮೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಇದರ ಜೊತೆಗೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ತೀರ್ಪಿನ ಅನ್ವಯ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕ ರಾಜ್ಯಕ್ಕೆ ಮರಣ ಶಾಸನವಾಗಲಿದೆ.

ನ್ಯಾ. ದೀಪಕ್ ಮಿಶ್ರಾ, ನ್ಯಾ. ಲಲಿತ್ ಅವರಿರುವ ವಿಭಾಗೀಯ ಪೀಠ ಉಭಯ ರಾಜ್ಯಗಳ ವಕೀಲರ ವಾದ ಪ್ರತಿ ವಾದವನ್ನು ಆಲಿಸಿ, ಸೆಪ್ಟೆಂಬರ್ 21 ರಿಂದ 27ರ ವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.[ಸೆ.21 ರಿಂದ 27ರ ವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸಿ]

ಈಗಾಗಲೇ ತಮಿಳುನಾಡಿಗೆ 1.60 ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ. ಕುಡಿಯಲು ನೀರು ಇಲ್ಲದಿದ್ದರೂ ತಮಿಳುನಾಡಿನ ಭತ್ತದ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದು ಕರ್ನಾಟಕದ ಪರ ಫಾಲಿ ನಾರಿಮನ್ ವಾದಿಸಿದರೂ ನ್ಯಾಯಪೀಠಕ್ಕೆ ವಾದ ಸಮ್ಮತವಾಗಲಿಲ್ಲ.

ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ

ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ

ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 48 ನಗರ ಪ್ರದೇಶ, 635 ಗ್ರಾಮೀಣ ಭಾಗಗಳು ಕಾವೇರಿ ಜಲಾನಯನ ಪ್ರದೇಶದ ಮೇಲೆ ಅವಲಂಬಿತವಾಗಿವೆ. ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ.

ಮಂಗಳವಾರ ಮೆಟ್ಟೂರಿನ ಅಣೆಕಟ್ಟಿನ ಪ್ರಮಾಣ

ಮಂಗಳವಾರ ಮೆಟ್ಟೂರಿನ ಅಣೆಕಟ್ಟಿನ ಪ್ರಮಾಣ

ಮಂಗಳವಾರ ಅಣೆಕಟ್ಟಿನಲ್ಲಿ 87.88 ಅಡಿ ನೀರಿನ ಮಟ್ಟವಿತ್ತು. 120 ಅಡಿ ಗರಿಷ್ಠ ಮಟ್ಟ ಹೊಂದಿದೆ. ಸ್ಟೋರೆಜ್ ಪ್ರಮಾಣ 50.39 ಟಿಎಂಸಿ(ಪೂರ್ತಿ ಪ್ರಮಾಣ 93.47 ಟಿಎಂಸಿ). ಒಳ ಹರಿವು 10,092 ಕ್ಯೂಸೆಕ್ಸ್ ನಷ್ಟಿದೆ.

ಕಾವೇರಿ ನಿರ್ವಹಣಾ ಮಂಡಳಿ

ಕಾವೇರಿ ನಿರ್ವಹಣಾ ಮಂಡಳಿ

ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಸದಸ್ಯರು, ಕೃಷಿ ಮತ್ತು ನೀರಾವರಿ ತಜ್ಞರು, ಜಲ ಆಯೋಗದ ಅಧಿಕಾರಿಗಳು ಇರಲಿದ್ದಾರೆ ಎಲ್ಲರನ್ನು ಕೇಂದ್ರ ಸರ್ಕಾರ ನೇಮಿಸಲಿದೆ. ಮಂಡಳಿ ರಚನೆ ಮಾಡಲು ಅಟಾರ್ನಿ ಜನರಲ್ ಅವರ ಸಲಹೆ ಕೇಳುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನಾಲ್ಕು ವಾರಗಳಲ್ಲಿ ಮಂಡಳಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ನಿರ್ವಹಣಾ ಮಂಡಳಿ ಏನು ಪರಿಣಾಮ

ನಿರ್ವಹಣಾ ಮಂಡಳಿ ಏನು ಪರಿಣಾಮ

ಒಮ್ಮೆ ಈ ಮಂಡಳಿ ರಚನೆಯಾದರೆ ಕಾವೇರಿ ಮೇಲುಸ್ತುವಾರಿ ಸಮಿತಿ ಬೆಲೆ ಕಳೆದುಕೊಳ್ಳಲಿದೆ. ಕಾವೇರಿ ನೀರು ಇರುವ ಕೆಆರ್ ಎಸ್, ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟಿನ ಮೇಲೆ ಕರ್ನಾಟಕ ಸರ್ಕಾರ ನಿಯಂತ್ರಣ ಕಳೆದುಕೊಳ್ಳಲಿದೆ. ತಮಿಳುನಾಡಿಗೆ ಯಾವಾಗ ನೀರು ಬಿಡಬೇಕು? ಎಷ್ಟು ನೀರು ಬಿಡಬೇಕು ಎಂಬುದನ್ನು ಮಂಡಳಿ ನಿರ್ಧರಿಸಲಿದೆ.

ಐತೀರ್ಪಿನ ಅಂತಿಮ ಆದೇಶ

ಐತೀರ್ಪಿನ ಅಂತಿಮ ಆದೇಶ

ಈ ಹಿಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ತಮಿಳುನಾಡು ಪ್ರತಿ ದಿನ 20,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ, ಪ್ರತಿನಿತ್ಯ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಪ್ರತಿ ದಿನ(10 ದಿನದ ಮಟ್ಟಿಗೆ) 3,000ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಲಾಗಿದೆ. ಐತೀರ್ಪಿನ ಅಂತಿಮ ಆದೇಶ ಅಕ್ಟೋಬರ್ 18ರಂದು ಬರಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Supreme Court said no AG view is required after Salve's further submissions. It is a direct order to form the Cauvery Management Board in 4 weeks
Please Wait while comments are loading...