ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಗುರುಗ್ರಾಮ್‌ನಲ್ಲಿ ಭಜನಾ ಮಾಂತ್ರಿಕ ಸೊಪೋರಿ ವಿಧಿವಶ

|
Google Oneindia Kannada News

ಗುರುಗ್ರಾಮ್, ಜೂನ್ 2: ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 74 ವರ್ಷದ ಸಂತೂರ್ ಮಾಂತ್ರಿಕ ಭಜನ್ ಸೊಪೋರಿ ಗುರುಗ್ರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರಾದ ಸೊರಭ್ ಮತ್ತು ಅಭಯ್ ಅನ್ನು ಸೊಪೋರಿ ಅಗಲಿದ್ದಾರೆ.

"ಕಳೆದ ವರ್ಷ ಜೂನ್‌ನಲ್ಲಿ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ನಾವು ಅವರನ್ನು ಮೂರು ವಾರಗಳ ಹಿಂದೆ ಇಮ್ಯುನೊಥೆರಪಿ ಚಿಕಿತ್ಸೆಗಾಗಿ ಗುರುಗ್ರಾಮ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಚಿಕಿತ್ಸೆಯು ಅವರಿಗೆ ಫಲ ನೀಡಲಿಲ್ಲ, ಬದಲಿಗೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು" ಎಂದು ಅವರ ಮಗ ಅಭಯ್ ತಿಳಿಸಿದ್ದಾರೆ.

Breaking: ಕರ್ನಾಟಕದಲ್ಲಿ ಶಾಲೆಗಳು ಓಪನ್; ಬೆಂಗಳೂರಲ್ಲಿ ಜ.29ರವರೆಗೆ ಬಂದ್ Breaking: ಕರ್ನಾಟಕದಲ್ಲಿ ಶಾಲೆಗಳು ಓಪನ್; ಬೆಂಗಳೂರಲ್ಲಿ ಜ.29ರವರೆಗೆ ಬಂದ್

ಗುರುಗ್ರಾಮ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವೇಳೆಗೆ ಭಜನ್ ಸೊಪೋರಿ ವಿಧಿವಶರಾಗಿದ್ದು, ಶುಕ್ರವಾರ ಇಲ್ಲಿನ ಲೋಧಿ ರಸ್ತೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

Santoor Maestro Bhajan Sopori Passes Away at 74 in Gurugram Hospital

ಸೊಪೋರಿ ತಮ್ಮ ವೃತ್ತಿಜೀವನದ ಮೂಲಕ 2004ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. 1992 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸೊಪೋರಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಮತ್ತು ಅವರ ತಂದೆ ಮತ್ತು ತಾತನಿಂದ ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದರು.

English summary
Santoor maestro Bhajan Sopori died on Thursday at a Gurugram hospital following a battle with colon cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X