Mohan Bhagwat: ಸಂಘಪರಿವಾರ ಮೀಸಲಾತಿಯನ್ನು ಎಂದಿಗೂ ವಿರೋಧಿಸಿಲ್ಲ;ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಹೈದರಾಬಾದ್, ಏಪ್ರಿಲ್. 28: ಕೆಲವು ಗುಂಪುಗಳಿಗೆ ಮೀಸಲಾತಿಯನ್ನು ಸಂಘ ಪರಿವಾರ ಎಂದಿಗೂ ವಿರೋಧಿಸಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ ಬಿಜೆಪಿ. ಸದ್ಯ ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಡೆದರೆ ಸರ್ಕಾರವು ಭಾರತದ ಸಂವಿಧಾನವನ್ನು 'ಬದಲಾಯಿಸುತ್ತದೆ' ಮತ್ತು ಮೀಸಲಾತಿ ನೀತಿಯನ್ನು ತೆಗೆದುಹಾಕುತ್ತದೆ ಎಂದು ವಿರೋಧ ಪಕ್ಷಗಳು ತಮ್ಮ ಹೇಳಿಕೆಯನ್ನು ನೀಡುತ್ತಿವೆ. ಇದಕ್ಕೆ ಮೋಹನ್ ಭಾಗವತ್ ಅವರು ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, "ಮೀಸಲಾತಿಗಳನ್ನು ಎಲ್ಲಿಯವರೆಗೆ ಅಗತ್ಯವಿದೆಯೋ ಅಲ್ಲಿಯವರೆಗೆ ವಿಸ್ತರಿಸಬೇಕು ಎಂದು ಸಂಘ ಪರಿವಾರವು ಅಭಿಪ್ರಾಯಪಟ್ಟಿದೆ" ಎಂದು ಹೇಳಿದ್ದಾರೆ.
ಆರೆಸ್ಸೆಸ್ ಬಿಜೆಪಿಯ ಸೈದ್ಧಾಂತಿಕ ಗುರುವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಕ್ರಮವಾಗಿ 282 ಸ್ಥಾನಗಳು ಮತ್ತು 303 ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಹುಮತದ ಹ್ಯಾಟ್ರಿಕ್ ಗುರಿಯನ್ನು ಹೊಂದಿದೆ. ಈ ಬಾರಿ, 543 ಸದಸ್ಯರ ಸಂಸತ್ತಿನ ಕೆಳಮನೆಯಲ್ಲಿ ಬಿಜೆಪಿಗೆ ಬರೋಬ್ಬರಿ 370 ಕ್ಕೂ ಹೆಚ್ಚು ಸ್ಥಾನಗಳನ್ನು ಮತ್ತು ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಗುರಿ ಹೊಂದಿದೆ.

"400 ಪಾರ್" (400 ಕ್ಕೂ ಹೆಚ್ಚು ಸ್ಥಾನಗಳು) ಎಂಬುದು ಬಿಜೆಪಿಯ ಈ ಬಾರಿ ಘೋಷಣೆಯಾಗಿದೆ. ಇನ್ನು, ಹಲವು ಬಿಜೆಪಿ ನಾಯಕರ ಹೇಳಿಕೆಗಳು ಸಂವಿಧಾನವನ್ನು ಬದಲಾಯಿಸುವ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದಾರೆ. ಇದು ಬಿಜೆಪಿಯ ವಿರುದ್ಧ ಕಿಡಿಕಾರಲು ಪ್ರತಿಕ್ಷಗಳಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ಮತ್ತು ಮೀಸಲಾತಿ ಎರಡನ್ನೂ ಅಂತ್ಯಗೊಳಿಸಲಾಗುವುದು ಎಂದು ಪ್ರತಿಪಕ್ಷಗಳು ಹೇಳಿವೆ.












Click it and Unblock the Notifications