'ಸನಾತನ ಧರ್ಮವೊಂದೇ ಧರ್ಮ ಉಳಿದೆಲ್ಲವೂ...', ಉದಯನಿಧಿ ಬಳಿಕ ಸಿಎಂ ಯೋಗಿ ಹೇಳಿಕೆ
ಲಕ್ನೋ ಅಕ್ಟೋಬರ್ 3: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸನಾತನ ಧರ್ಮ ವಿವಾದದ ಬಗ್ಗೆ ನೀಡಿದ ಹೇಳಿಕೆ ಕೆಂಗಣ್ಣಿಗೆ ಗುರಿಯಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, 'ಸನಾತನ ಧರ್ಮವೊಂದೇ ಧರ್ಮ, ಉಳಿದೆಲ್ಲವು ಪಂಗಡಗಳು ಮತ್ತು ಪೂಜಾ ವಿಧಾನಗಳಿಗೆ ಮಾತ್ರ' ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಗೋರಖನಾಥ ದೇಗುಲದಲ್ಲಿ ಆಯೋಜಿಸಿದ ಏಳು ದಿನಗಳ 'ಶ್ರೀಮದ್ ಭಾಗವತ್ ಕಥಾ ಜ್ಞಾನ ಯಾಗ'ದ ಸಮಾರೋಪ ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಸನಾತನ ಧರ್ಮವೊಂದೇ ಧರ್ಮ, ಉಳಿದೆಲ್ಲ ಪಂಗಡಗಳು ಮತ್ತು ಆರಾಧನಾ ವಿಧಾನಗಳು, ಸನಾತನವು ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆಸಿದರೆ ಅದು ಜಗತ್ತಿನಾದ್ಯಂತ ಮಾನವೀಯತೆಗೆ ಬಿಕ್ಕಟ್ಟು ಸೃಷ್ಟಿಸುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸನಾತನ ಧರ್ಮವನ್ನು ಡೆಂಗ್ಯೂಗೆ ಹೋಲಿಸಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಸಿಎಂ ಯೋಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ...
ಸಣ್ಣ ಮನಸ್ಸಿನವರಿಗೆ ಇದರ ಅಗಾಧತೆ ಅರ್ಥವಾಗುವುದಿಲ್ಲ ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಾರೆ ಎಂದು ಸಿಎಂ ಯೋಗಿ ಹೇಳಿದ್ದಾರೆ. ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಭಾರತದಲ್ಲಿ ಹುಟ್ಟುವುದು ಅಪರೂಪ ಮತ್ತು ಮನುಷ್ಯನಾಗಿ ಹುಟ್ಟುವುದು ಅದಕ್ಕಿಂತ ಅಪರೂಪ ಎಂದು ಅವರು ಹೇಳಿದರು.
ಕಳೆದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಸನಾತನ ಧರ್ಮ ವಿವಾದದ ಕುರಿತು ಈ ಹೇಳಿಕೆ ನೀಡಿದ್ದರು. ಮಹಂತ್ ದಿಗ್ವಿಜಯ್ ನಾಥ್ ಅವರ 54 ನೇ ಪುಣ್ಯತಿಥಿ ಮತ್ತು ರಾಷ್ಟ್ರೀಯ ಸಂತ ಮಹಂತ್ ಅವೈದ್ಯನಾಥ್ ಅವರ 9 ನೇ ಪುಣ್ಯತಿಥಿಯ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಶ್ರೀಮದ್ ಭಾಗವತ್ ಮಹತ್ವವನ್ನು ವಿವರಿಸಿದರು. ಸಂಕುಚಿತ ದೃಷ್ಟಿಕೋನ ಹೊಂದಿರುವ ಜನರು ಶ್ರೀಮದ್ ಭಾಗವತ್‌ನ ಅಗಾಧತೆಯನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಮುಕ್ತ ಮನಸ್ಥಿತಿಯನ್ನು ಹೊಂದಿರಬೇಕು ಎಂದು ವಾಗ್ದಾಳಿ ಮಾಡಿದರು. ಭಾಗವತ್ ಕಥೆಯು ಅಪರಿಮಿತವಾಗಿದೆ ಮತ್ತು ನಿರ್ದಿಷ್ಟ ದಿನಗಳು ಅಥವಾ ಗಂಟೆಗಳಿಗೆ ಸೀಮಿತವಾಗಿರಲು ಸಾಧ್ಯವಿಲ್ಲ. ಇದು ಅಂತ್ಯವಿಲ್ಲದೆ ಹರಿಯುತ್ತದೆ ಮತ್ತು ಭಕ್ತರು ತಮ್ಮ ಜೀವನದಲ್ಲಿ ಅದರ ಸಾರವನ್ನು ನಿರಂತರವಾಗಿ ಅಳವಡಿಸಿಕೊಳ್ಳುತ್ತಾರೆ ಎಂದು ಸಿಎಂ ಹೇಳಿದರು.
ಬಾಪು ಬಗ್ಗೆ ಸಿಎಂ ಯೋಗಿ ಹೇಳಿದ ಮಾತು
ಗಾಂಧಿ ಆಶ್ರಮದಲ್ಲಿ ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ಸಂದೇಶವನ್ನು ಸ್ಮರಿಸಿದ ಸಿಎಂ ಯೋಗಿ, ರಾಷ್ಟ್ರಪಿತನ ನಾಯಕತ್ವದಲ್ಲಿ ಅಹಿಂಸೆಯ ಶಕ್ತಿಗೆ ಜಗತ್ತು ಸಾಕ್ಷಿಯಾಗಿದೆ. ಇದು ಪ್ರಜಾಪ್ರಭುತ್ವದ ಬಹುದೊಡ್ಡ ಶಕ್ತಿ. ಮಹಾನ್ ನಾಯಕ ಮಹಾತ್ಮ ಗಾಂಧಿ ಅವರ 154 ನೇ ಜನ್ಮದಿನದಂದು ಇಡೀ ದೇಶವು ಅವರಿಗೆ ಗೌರವ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
ಬಾಪು ಜಗತ್ತಿಗೆ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು, ಪ್ರಜಾಪ್ರಭುತ್ವದ ತತ್ವಗಳನ್ನು ಅನುಸರಿಸುವ ಮೂಲಕ ನಾವು ವಿಶ್ವದ ದೊಡ್ಡ ಶಕ್ತಿಗಳನ್ನು ಗೆಲ್ಲಬಹುದು. ಸ್ವದೇಶಿ, ಸತ್ಯ ಮತ್ತು ಅಹಿಂಸೆಯನ್ನು ಅನುಸರಿಸಿ, ಮಹಾತ್ಮ ಗಾಂಧಿಯವರು ವಾಸಹತುಶಾಹಿ ಬ್ರಿಟೀಷ್ ಆಡಳಿತವನ್ನು ದೇಶದಿಂದ ಹೊರಹಾಕುವಂತೆ ಮಾಡಿದರು.












Click it and Unblock the Notifications