ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆತ ಯತ್ನ: "ಸನಾತನ ಧರ್ಮ" ಘೋಷಣೆ!
ದೇಶದ ಜನ ಆಘಾತಕ್ಕೆ ಒಳಗಾಗುವ ಘಟನೆಯೊಂದು ಸೋಮವಾರ (ಅಕ್ಟೋಬರ್ 06)ದಂದು ನಡೆದಿದೆ. ಸುಪ್ರೀಂ ಕೋರ್ಟ್‌ನ (ಸಿಜಿಐ)ಮುಖ್ಯನ್ಯಾಯ ಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯುವ ಪ್ರಯತ್ನ ಮಾಡಲಾಗಿದೆ. ಈ ಘಟನೆಯು ಭಾರೀ ಆಕ್ರೋಶ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ದೇಶದ ಸರ್ವೋಚ್ಛ ನ್ಯಾಯಲದಯ ನ್ಯಾಯಪೀಠದಲ್ಲೇ ಈ ಘಟನೆ ನಡೆದ್ದಿದ್ದು, ಈ ದುರ್ಷ್ಕೃತ್ಯವನ್ನು ಸುಪ್ರೀಂ ಕೋರ್ಟ್‌ನ ವಕೀಲರೇ ಮಾಡಿರುವುದು ಇನ್ನಷ್ಟು ಆತಂಕವನ್ನುಂಟು ಮಾಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ದೇಶದಲ್ಲಿ ಸರ್ವೋಚ್ಛ ನ್ಯಾಯಲಯದ ಇತಿಹಾಸದಲ್ಲೇ ಈ ಹಿಂದೆ ಎಂದೂ ನಡೆಯದಂತಹ ಘಟನೆಯೊಂದು ಸೋಮವಾರ ಸಂಭವಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯ ಮೂರ್ತಿ ಬಿ.ಆರ್ ಗವಾಯಿ ಅವರನ್ನು ಗುರಿಯಾಗಿಸಿಕೊಂಡು ಹಿರಿಯ ವಕೀಲ ಕಿಶೋರ್ ಅವರು ಶೂ ಎಸೆದಿದ್ದು, ಈ ಶೂ ಪೀಠದ ಮುಂದೆಯೇ ಬಿದ್ದಿದೆ. ಈ ಘಟನೆ ನಡೆದ ಬೆನ್ನಲ್ಲೇ ಹಿರಿಯ ವಕೀಲನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಸನಾತನ ಧರ್ಮಕ್ಕೆ ಆಗುವ ಅವಮಾನವನ್ನು ಭಾರತ ಎಂದೂ ಸಹಿಸುವುದಿಲ್ಲ ಎಂದು ಘೋಷಣೆ ಕೂಗಿದ ಹಿರಿಯ ವಕೀಲರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಶೂ ಎಸೆದಿದ್ದಾರೆ. ಆದರೆ ಈ ಶೂ ಪೀಠದ ಮುಂಭಾಗದಲ್ಲಿ ಬಿದ್ದಿದೆ.
ಸಿಜೆಐ ರಿಯಾಕ್ಷನ್: ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಗವಾಯಿ ಅವರು ರಿಯಾಕ್ಟ್ ಮಾಡಿದ್ದಾರೆ. ಈ ರೀತಿಯ ಕೃತ್ಯಗಳಿಗೆ ನಾವು ಯಾವುದೇ ಕಾರಣಕ್ಕೆ ವಿಚಲಿತರಾಗುವುದಿಲ್ಲ. ಉಳಿದ ವಕೀಲರಿಗೆ ವಿಚಾರಣೆ ಮುಂದುವರಿಸುವಂತೆ ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ ಏನು: ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಕಲಾಪ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ವಕೀಲರು ಶೂ ಕಳಚಿ, ಮುಖ್ಯನ್ಯಾಯಾಧೀರ ಮೇಲೆ ಎಸೆಯಲು ಮುಂದಾದರು ಆದರೆ, ಅಲ್ಲಿನ ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ವಕೀಲರನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ 'ಸನಾತನ ಕಾ ಅಪಮಾನ್ ನಹೀ ಸಹೇಂಗೆ' (ಸನಾತನ ಧರ್ಮಕ್ಕೆ ಅಪಮಾನವಾಗುವುದನ್ನು ನಾವು ಸಹಿಸುವುದಿಲ್ಲ) ಎಂದು ಹಿಂದಿಯಲ್ಲಿ ವಕೀಲ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಖಜುರಾಹೊದಲ್ಲಿನ ವಿರೂಪಗೊಂಡಿರುವ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮಾತನಾಡಿದ್ದ ವಿಚಾರ ಈ ಘಟನೆಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
ಆ ಪ್ರಕರಣವನ್ನು ವಜಾ ಮಾಡುವ ಸಂದರ್ಭದಲ್ಲಿ "ನೀವು ವಿಷ್ಣುವಿನ ಪರಮ ಭಕ್ತರು ಎನ್ನುತ್ತೀರಿ, ಹಾಗಾದರೆ ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ" ಎಂದು ಅರ್ಜಿದಾರರಿಗೆ ಮೌಖಿಕವಾಗಿ ಹೇಳಿದ್ದರು ಎಂದು ವರದಿಯಾಗಿತ್ತು. ಇದು ಸಹ ಈ ಘಟನೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಆದರೆ ವಿಚಾರಣೆಯ ನಂತರವೇ ಸತ್ಯಾಂಶ ಹೊರ ಬರಬೇಕಿದೆ.












Click it and Unblock the Notifications