ಮುಂಬೈ ಡ್ರಗ್ ಕೇಸ್‌ಗೆ ಮತ್ತೆ ಜೀವ: ಸಮೀರ್ ವಾಂಖೆಡೆಗೆ ಪ್ರಾಣ ಬೆದರಿಕೆ ಕರೆ
ಮುಂಬೈ ಮೇ 22: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಮತ್ತೆ ಜೀವ ಕಳೆ ಬಂದಂತಾಗಿದೆ. ಆದರೆ ಇದು ಡ್ರಗ್ ಪ್ರಕರಣದ ಬಗೆಗಿನ ವಿಚಾರಗಳನ್ನು ಬಯಲಿಗೆಳಿಯುವ ವಿಚಾರವಲ್ಲ, ಬದಲಿಗೆ ಡ್ರಗ್ ಪ್ರಕರಣವನ್ನು ಬಯಲಿಗೆಳೆದವರ ವಿಚಾರ.
ಮುಂಬೈ ಕ್ರೂಸ್ ಡ್ರಗ್ ಕೇಸ್ ಸಂಬಂಧಿಸಿದಂತೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಈ ದಿನಗಳಲ್ಲಿ ಸಿಬಿಐ ತನಿಖೆಯ ಮುಖ್ಯಾಂಶದಲ್ಲಿದ್ದಾರೆ. ಈ ವೇಳೆ ಸಮೀರ್ ವಾಂಖೆಡೆ, ಉತ್ತರ ಪ್ರದೇಶದ ಮಾಫಿಯಾ ಲೀಡರ್ ಅತೀಕ್ ಅಹ್ಮದ್ ನಂತೆ ನನ್ನ ಮೇಲೂ ದಾಳಿ ನಡೆಯಬಹುದು ಎಂದು ಭಯಾನಕ ಹೇಳಿಕೆ ನೀಡಿದ್ದಾರೆ.

ಮುಂಬೈ ಎನ್‌ಸಿಬಿಯ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಸುದ್ದಿಗಾರರೊಂದಿಗೆ ಮಾತನಾಡಿ, 'ನನ್ನ ಪತ್ನಿ ಕ್ರಾಂತಿ ರೆಡ್ಕರ್ ಅವರಿಗೆ ಕಳೆದ 04 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳು ಬರುತ್ತಿವೆ. ಈ ಕುರಿತು ಇಂದು (ಮೇ 22) ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ವಿಶೇಷ ರಕ್ಷಣೆಗೆ ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
ಲೋಕಮತ್ ಮರಾಠಿಯ ವರದಿಯ ಪ್ರಕಾರ, ಸಮೀರ್ ವಾಂಖೆಡೆ ಅವರು, "ಅತೀಕ್ ಅಹ್ಮದ್ ಅವರಂತೆ ನನ್ನ ಮೇಲೂ ದಾಳಿ ನಡೆಯಬಹುದು. ನನಗೆ ಭದ್ರತಾ ಸಮಸ್ಯೆ ಇದೆ. ಹಾಗಾಗಿ ಮುಂಬೈ ಪೊಲೀಸರಿಂದ ಭದ್ರತೆ ಕೇಳಲಿದ್ದೇನೆ. ನನಗೆ ಮತ್ತು ನನ್ನ ಹೆಂಡತಿಗೆ ಸಾಮಾಜಿಕ ಜಾಲತಾಣಗಳು, ಇನ್‌ಸ್ಟಾಗ್ರಾಮ್, ಟ್ವಿಟರ್‌ಗಳಲ್ಲಿ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ'' ಎಂದು ಹೇಳಿಕೊಂಡಿದ್ದಾರೆ.
My wife Kranti Redkar & I are receiving threats for the last 4 days and obscene messages coming on social media. I will write to Mumbai Police Commissioner today about it and demand special security: Sameer Wankhede, Former Zonal Director of Mumbai NCB
— ANI (@ANI) May 22, 2023
(File Pic) pic.twitter.com/Djf2uYtwpt
ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು 15 ಏಪ್ರಿಲ್ 2023 ರಂದು ಪ್ರಯಾಗರಾಜ್‌ನಲ್ಲಿ ಕೆಲವು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ಇವರನ್ನು ಪೊಲೀಸ್ ಭದ್ರತೆಯ ನಡುವೆ ಗುಂಡಿಕ್ಕಿ ಕೊಲ್ಲಲಾಯಿತು. ಇವರ ಮೇಲೆ ಗುಂಡಿನ ದಾಳಿಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾದ್ಯಮದವರ ಮುಂದೆಯೇ ಅವರ ಅತೀಕ್ ಅಹ್ಮದ್ ಮೇಲೆ ದಾಳಿ ನಡೆದಿದೆ. ಇದೇ ರೀತಿ ಸಮೀರ್ ವಾಂಖೆಡೆ ಕೊಲ್ಲುವುದಾಗಿ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗುತ್ತಿದೆ.

ಮುಂಬೈ ಕ್ರೂಸ್ ಡ್ರಗ್ ಕೇಸ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ಆಗಿನ ಎನ್‌ಸಿಬಿ ನಿರ್ದೇಶಕ ಆಗಿದ್ದ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಆರ್ಯನ್ ಖಾನ್ ಪ್ರಕರಣವನ್ನು ಮುಚ್ಚಿ ಹಾಕಲು ಸಮೀರ್ ವಾಂಖೆಡೆ ಸಾಕಷ್ಟು ಹಣವನ್ನು ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಿಬಿಐ ವಿಚಾರಣೆ ನಡೆಯುತ್ತಿದೆ.
ಸಿಬಿಐ ತನಿಖೆಗೆ ನಾನು ಸಹಕರಿಸುತ್ತಿದ್ದೇನೆ ಎಂದು ಸಮೀರ್ ವಾಂಖೆಡೆ ಕೂಡ ಹೇಳಿದ್ದಾರೆ. ಆದರೆ ಸಮೀರ್ ವಾಂಖೆಡೆ ಹಾಗೂ ಅವರ ಕುಂಟಬಕ್ಕೆ ಬೆದರಿಕೆ ಕರೆಗಳು ಬರುತ್ತಿರುವುದು ಸದ್ಯ ಅವರಿಗೆ ಆಂತಕ ತಂದಿದೆ. ಇದರ ಬಗ್ಗೆ ಪ್ರಸ್ತಾಪಿಸಿದ ಸಮೀರ್ ಅವರು, ನನ್ನ ಸುರಕ್ಷತೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರಿಗೆ ಪತ್ರ ಬರೆಯಲಿದ್ದೇನೆ. ನನಗೆ ಸೂಕ್ತ ಭದ್ರತೆ ನೀಡುತ್ತಿಲ್ಲ. ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಕೋರ್ಟ್ ಮುಂದೂಡಿಕೆಯಾದಾಗ ಈ ವಿಷಯ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಿಡುಗಡೆಗೆ ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಪ್ರಕರಣದಲ್ಲಿ ಮೇ 21ರ ಭಾನುವಾರ ಸಿಬಿಐ ಸಮೀರ್ ವಾಂಖೆಡೆಯನ್ನು ಸುಮಾರು 3 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ಸಮೀರ್ ವಾಂಖೆಡೆ ಕೂಡ ತಾನು ನಿರಪರಾಧಿ ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಅವರು ಶಾರುಖ್ ಖಾನ್ ಅವರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications