ಸಮಸ್ಯೆಯಲ್ಲಿ ಸಲ್ಮಾನ್: ಅಕ್ರಮ ಶಸ್ತ್ರಾಸ್ತ್ರ ಕೇಸು ಏಪ್ರಿಲ್ 04ಕ್ಕೆ

Posted By:
Subscribe to Oneindia Kannada

ಜೈಪುರ, ಮಾರ್ಚ್ 10: ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಆರೋಪಿಯಾಗಿರುವ ಕೃಷ್ಣಮೃಗ ಬೇಟೆ ಪ್ರಕರಣ ಮತ್ತೆ ವಿಚಾರಣೆಗೆ ಬಂದಿದೆ. ಸುಮಾರು 17 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರ ಬರಬೇಕಿತ್ತು. ಆದರೆ, ಹೆಚ್ಚಿನ ವಿಚಾರಣೆಗಾಗಿ ತೀರ್ಪು ಮುಂದೂಡುತ್ತಾ ಬರಲಾಗಿದೆ. ಗುರುವಾರ ಕೋರ್ಟಿಗೆ ಹಾಜರಾದ ಸಲ್ಮಾನ್ ಅವರು ತಮ್ಮ ಹೇಳಿಕೆ ದಾಖಲಿಸಿದ್ದಾರೆ

ಸಲ್ಮಾನ್ ಪರವಾಗಿ ಮಾತನಾಡಿದ ಅವರ ವಕೀಲರು, ಸಲ್ಮಾನ್ ಅವರನ್ನು ಸುಮ್ಮನೆ ಈ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದಿದ್ದಾರೆ. ಮುಂದಿನ ವಿಚಾರಣೆ ಏಪ್ರಿಲ್ 04ಕ್ಕೆ ಮುಂದೂಡಲಾಗಿದೆ. [ಗುದ್ದೋಡು ಪ್ರಕರಣ: ಸಲ್ಮಾನ್ ಗೆ ಮತ್ತೆ ಸಂಕಟ, ಸುಪ್ರೀಂನಿಂದ ನೋಟಿಸ್]

ಜಿಲ್ಲಾ ಮ್ಯಾಜಿಸ್ಟ್ರೇಟ್ ರಜತ್ ಕುಮಾರ್ ಮಿಶ್ರಾ ಅವರು ಆರೋಪಿಗಳು ಖುದ್ದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದರು.ಅದರಂತೆ ಮಾರ್ಚ್ 10ರಂದು ಜೋಧ್ ಪುರದ ನ್ಯಾಯಾಲಯಕ್ಕೆ ಸಲ್ಮಾನ್ ಹಾಜರಾಗುತ್ತಿದ್ದಾರೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ದಿನೇಶ್ ತಿವಾರಿ ಹೇಳಿದ್ದಾರೆ. ಆರೋಪಿಗಳ ಖುದ್ದು ಹಾಜರಾತಿಗೆ ವಿನಾಯತಿ ಕೋರಿದ್ದ ಸಲ್ಮಾನ್ ಪರ ವಕೀಲರಿಗೆ ಹಿನ್ನಡೆಯಾಗಿದೆ.

Salman Khan's legal trouble: Actor to record statement in Arms Act case

1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. [ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]

ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಕೆಳ ಹಂತದ ನ್ಯಾಯಲಯದಲ್ಲಿ ಆರೋಪಿಗಳ ಆರೋಪ ಸಾಬೀತಾಗಿತ್ತು ಆದರೆ, ಮರು ವರ್ಷವೇ ಹೈಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ಈಗ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ಅಂತಿಮ ಹಂತ ತಲುಪಿತ್ತು. ನಂತರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಫೆ.5ರಂದು ವಿಚಾರಣೆ ಮುಗಿಸಿದ ರಾಜಸ್ಥಾನ ಕೋರ್ಟ್ ಅಂತಿಮ ತೀರ್ಪು ಫೆಬ್ರವತರಿ 25, 2015ರಂದು ನೀಡಲು ಮುಂದಾಗಿತ್ತು. ಆದರೆ, 5 ಪ್ರಮುಖ ಸಾಕ್ಷಿಗಳ ಮರು ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಮತ್ತೊಮ್ಮೆ ಸಲ್ಮಾನ್ ಸೇರಿದಂತೆ ಎಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bollywood actor Salman Khan recorded his statement on Thursday, Mar 10 in Arms Act case here in Jodhpur.Khan's lawyer speaking to media persons said: "Salman Khan said in the court that he was falsely implicated." The next hearing has been scheduled for April 4.
Please Wait while comments are loading...