ಸಲ್ಮಾನ್ ಗೆ ಜಾಮೀನು: ಅಂಧಾಭಿಮಾನಕ್ಕೆ ಟ್ವಿಟ್ಟಿಗರ ಧಿಕ್ಕಾರ..!

Posted By:
Subscribe to Oneindia Kannada

ಜೋಧಪುರ, ಏಪ್ರಿಲ್ 07: ಎರಡು ರಾತ್ರಿ ಜೈಲಿನಲ್ಲಿ ಕಳೆದ ನಂತರ ಸಲ್ಮಾನ್ ಖಾನ್ ಗೆ ಕೊನೆಗೂ ಜಾಮೀನು ಸಿಕ್ಕಿದೆ! ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ರಾಜಸ್ಥಾನದ ಜೋಧಪುರ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಏ.5 ರಂದು ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ(ಏ.6) ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಜೋಧಪುರ ಸೆಶೆನ್ಸ್ ನ್ಯಾಯಾಲಯ, ಅವರ ಜಾಮೀನು ಅರ್ಜಿ ತೀರ್ಪನ್ನು ಇವತ್ತಿಗೆ ಮುಂದೂಡಿತ್ತು. ಈಗ ತನ್ನ ತೀರ್ಪನ್ನು ಹೊರಹಾಕಿದ್ದು ಸಲ್ಲೂಗೆ ಜಾಮೀನು ಸಿಕ್ಕಿದೆ.

ಸಲ್ಮಾನ್‌ಗೆ ಜಾಮೀನು ಮಂಜೂರು: ನಿಟ್ಟುಸಿರು ಬಿಟ್ಟ ಬಾಲಿವುಡ್

ಇಂದು ರಾತ್ರಿಯೊಳಗೆ ಅವರು ಜೈಲಿನಿಂದ ವಾಪಸ್ ಹೊರಡುವ ನಿರೀಕ್ಷೆಯಿದೆ. 1998 ರಲ್ಲಿ ನಡೆದ ಪ್ರಕರಣಕ್ಕೆ 20 ವರ್ಷದ ನಂತರ ಅಂತೂ ನ್ಯಾಯ ಸಿಕ್ಕಿತು ಎಂದು ನಿಟ್ಟುಸಿರುಬಿಟ್ಟು, ಉಸಿರನ್ನು ಮತ್ತೆ ಒಳಕ್ಕೆ ಎಳೆದುಕೊಳ್ಳುವ ಹೊತ್ತಿಗೆ ಜಾಮೀನು ಸಿಕ್ಕಿಬಿಟ್ಟಿದೆ!

ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಘಟನಾವಳಿಗಳು

ಸಲ್ಲೂ ಬಾಯ್ ಗೆ ಜಾಮೀನು ಸಿಗುತ್ತಿದ್ದಂತೆಯೇ ಅವರ ಲಕ್ಷಾಂತರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಾಗೆಯೇ ಟ್ವಿಟ್ಟರ್ ನಲ್ಲಿ ಜಾಮೀನು ಸಿಕ್ಕಿದ್ದೇ ಒಳ್ಳೆಯದಾಯ್ತು ಎಂದು ಹಲವರು ಬಾಲಿವುಡ್ ಬ್ಯಾಡ್ ಬಾಯ್ ಗೆ ಅಭಿನಂದನೆ ಸಲ್ಲಿಸಿದ್ದರೆ, ಮತ್ತೆ ಕೆಲವರು ಇದೆಂಥ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸೆಲೆಬ್ರಿಟಿಗಳು ಏನು ಮಾಡಿದರೂ ತಪ್ಪಲ್ಲ' ಎನ್ನುವ ಕುರುಡು ಅಭಿಮಾನಿಗಳಿಗೆ ಟ್ವಿಟ್ಟಿಗರು ಧಿಕ್ಕಾರ ಕೂಗಿದ್ದಾರೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood actor Salman Khan has been granted bail by Jodhpur Court in connection with the Black buck poaching case.The bail plea was heard in a Jodhpur court on Saturday regarding the actor's conviction for five years in the endangered species' poaching case. Here are twitter reactions.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ