ಕಾನ್ಪುರ ಬಳಿ ಹಳಿ ತಪ್ಪಿದ ರೈಲಿನ 15 ಬೋಗಿಗಳು, ಹಲವರಿಗೆ ಗಾಯ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕಾನ್ಪುರ, ಡಿಸೆಂಬರ್ 28 : ಕಾನ್ಪುರದ ಬಳಿ ಸೆಲ್ಡಾ - ಅಜ್ಮೇರ್ ಎಕ್ಸ್ ಪ್ರೆಸ್ ರೈಲಿನ 15 ಬೋಗಿಗಳು ಬುಧವಾರ ಬೆಳಗಿನ ಜಾವ 5.20ರ ಸುಮಾರಿಗೆ ಹಳಿ ತಪ್ಪಿದ್ದು, ಗಾರ್ಡ್ ಸೇರಿದಂತೆ 24 ಜನರು ಗಾಯಗೊಂಡಿದ್ದಾರೆ.

ಅಪಘಾತ ಹೇಗೆ ನಡೆಯಿತೆಂದು ಇನ್ನೂ ತಿಳಿದುಬರಬೇಕಿದೆ. ಬೋಗಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿದ ವರದಿ ಬಂದಿಲ್ಲ. [IN PICS: ಕಾನ್ಪುರ ರೈಲು ದುರಂತದ ಮನಸ್ಸು ಕಲಕುವ ಚಿತ್ರ]

Saeldah-Ajmer Express derails near Kanpur: Several injured

ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ರೂರಾ ಬಳಿ 12988 ಸಂಖ್ಯೆಯ ಅಜ್ಮೇರ್-ಸೆಲ್ಡಾ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೀಡಾಗಿದೆ. ಪ್ರಥಮ ಮಾಹಿತಿ ಪ್ರಕಾರ 16 ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದುರ್ಘಟನೆ ದುರಾದೃಷ್ಟಕರವಾಗಿದ್ದು, ಹಿರಿಯ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಕೂಡಲೆ ಚಿಕಿತ್ಸೆ ಲಭಿಸುವಂತೆ ಆದೇಶಿಸಿದ್ದೇನೆ. ಈ ಘಟನೆ ಕುರಿತು ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

2016ರ ನವೆಂಬರ್ 20ರಂದು ಕಾನ್ಪುರದ ಬಳಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲಿನ 14 ಬೋಗಿಗಳು ಹಳಿತಪ್ಪಿ 140 ಜನರು ಅಸುನೀಗಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. [ಈ ಫೋಟೋ ನೋಡಪ್ಪಾ ಮಗು, ಇವರು ನಿನ್ನ ತಂದೆಯಾ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Saeldah-Ajmer express has derailed at the Rura station in Kanpur's Dehat district on Wednesday morning. 14 bogies of train number 12987 have derailed, reports suggest. 12 persons including a guard has been injured, preliminary reports also state.
Please Wait while comments are loading...