ಎರಡು ಪ್ರದೇಶಗಳ 'ಅಶುದ್ಧ' ಹೆಸರು ಬದಲಾವಣೆಗೆ ಸಾಧ್ವಿ ಪ್ರಜ್ಞಾ ಮನವಿ
ಭೋಪಾಲ್ ನವೆಂಬರ್ 3: ಮಧ್ಯಪ್ರದೇಶದ ರಾಜಧಾನಿ ನಗರದಲ್ಲಿನ ಎರಡು ಪ್ರದೇಶಗಳ "ಅಶುದ್ಧ" ಹೆಸರುಗಳನ್ನು ಬದಲಾಯಿಸಲು ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಧರಿಸಿದೆ. ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಬೇಡಿಕೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಾಗರಿಕ ಮಂಡಳಿಯ ನಿರ್ಧಾರದ ಪ್ರಕಾರ, ಹಲಾಲ್‌ಪುರ ಬಸ್ ನಿಲ್ದಾಣವನ್ನು ಹನುಮಾನ್ ಗರ್ಹಿ ಬಸ್ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗುತ್ತದೆ. ಲಾಲ್ ಘಾಟಿಯನ್ನು ಮಹೇಂದ್ರ ನಾರಾಯಣ ದಾಸ್ ಜಿ ಮಹಾರಾಜ್ ಸರ್ವೇಶ್ವರ್ ಚೌರಾಹಾ ಎಂದು ಮರುನಾಮಕರಣ ಮಾಡಲಾಗುತ್ತದೆ. ಶುಕ್ರವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಹೆಸರು ಬದಲಾವಣೆ ಪ್ರಸ್ತಾವಕ್ಕೆ ಅಂಗೀಕಾರ ನೀಡಲಾಗಿದೆ.
ಸಾಧ್ವಿ ಪ್ರಜ್ಞಾ ಮಾತನಾಡಿ ಹಲಾಲ್‌ಪುರದಲ್ಲಿರುವ 'ಹಲಾಲ್' ಪದ ಅಶುದ್ಧವಾಗಿದೆ. ಗುಲಾಮಗಿರಿಯ ಸಂಕೇತವನ್ನು ತೆಗೆದುಹಾಕುವ ಮೂಲಕ ನಾವು ಮತ್ತೆ ಭಾರತದ ಇತಿಹಾಸವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದೇವೆ. ಭೋಪಾಲ್ ಇತಿಹಾಸವನ್ನು ಬದಲಾಯಿಸಲು ಮತ್ತು ಅದನ್ನು ಪುನರ್ನಿರ್ಮಿಸಲು ಸಹ ಮುಂದಾಗಿದ್ದೇವೆ ಎಂದು ಅವರು ಹೇಳಿದರು.

'ಲಾಲ್ಘಾಟಿ' ಕ್ರಾಸ್‌ರೋಡ್‌ನಲ್ಲಿ ಹಲವು ಕೊಲೆಗಳು ನಡೆದಿವೆ. ಅನೇಕ ವೀರ ವೀರರು ಹುತಾತ್ಮರಾಗಿದ್ದಾರೆ. ಆದ್ದರಿಂದ ನಾವು ರಕ್ತಸಿಕ್ತ ಗತವನ್ನು ಮರೆತು ಗೌರವ ಸಲ್ಲಿಸಬೇಕು ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ. ಸಂಸದರ ಪ್ರಸ್ತಾವನೆಯನ್ನು ಬೆಂಬಲಿಸಿದ ನಗರಸಭೆ ಅಧ್ಯಕ್ಷ ಕಿಶನ್ ಸೂರ್ಯವಂಶಿ ಎರಡೂ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.












Click it and Unblock the Notifications