ಆರ್.ಎಸ್.ಎಸ್ ಸುನಿಲ್ ಜೋಶಿ ಕೊಲೆ ಪ್ರಕರಣ: ಸಾಧ್ವಿಗೆ ಬಿಗ್ ರಿಲೀಫ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 1: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ನಿರ್ದೋಷಿ ಎಂದು ಕೋರ್ಟ್ ಹೇಳಿದೆ. ಆರ್.ಎಸ್.ಎಸ್ ಪ್ರಚಾರಕ ಸುನಿಲ್ ಜೋಶಿ ಡಿಸೆಂಬರ್ 29, 2007ರಂದು ಮಧ್ಯಪ್ರದೇಶದ ದೆವಾಸ್ ನಲ್ಲಿ ಕೊಲೆಯಾಗಿದ್ದರು.

ಈ ಹಿಂದೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ವಸುದೇವ್ ಪರ್ಮಾರ್, ಆನಂದ್ ರಾಜ್ ಕಟಾರಿಯಾ ಮತ್ತು ರಾಮಚರಣ್ ಪಾಟೀಲ್ ರನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು. ಆದರೆ ತನಿಖೆ ವೇಳೆ ಆರೋಪಿಗಳಿಗೂ ಕೊಲೆಗೂ ಸಂಬಂಧವಿಲ್ಲ ಎಂಬುದು ಸಾಬೀತಾಗಿತ್ತು.[ಮಾಲೆಗಾಂವ್ ಸ್ಫೋಟ : ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಿಲೀಫ್]

 Sadhvi Pragya acquitted in Sunil Joshi murder case

ವಿಚಾರಣೆ ವೇಳೆ ಎನ್ಐಎ, ಸಾಧ್ವಿ ಕೊಲೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳಿತ್ತು. ದೆವಾಸ್ ನ್ಯಾಯಾಲಯಕ್ಕೂ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನಲೆಯಲ್ಲಿ ಸಾಧ್ವಿಯನ್ನು ಈ ಪ್ರಕರಣದಿಂದ ಕೈಬಿಡಲಾಗಿದೆ.[ಸಾಧ್ವಿ ಮನೆಯಲ್ಲಿ ಸಿಕ್ಕಿದ್ದು 24 ಗೋಲ್ಡ್ ಬಿಸ್ಕೆಟ್, ಕೋಟಿ ನಗದು]

ಈ ಹಿಂದೆ 2008ರ ಮಲೆಗಾಂವ್ ಬಾಂಬ್ ಸ್ಪೋಟದಲ್ಲೂ ಸಾಧ್ವಿ ಮೇಲಿನ ಆರೋಪಗಳನ್ನು ಎನ್ಐಎ ಕೈಬಿಟ್ಟಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sadhvi Pragya Singh has been acquitted in Sunil Joshi murder case. Joshi a pracharak of the RSS was murdered on December 29 2007 at Dewas in Madhya Pradesh.
Please Wait while comments are loading...