ಮೋದಿ ಕ್ಯಾಬಿನೆಟ್ : ಸಾಂಖ್ಯಿಕ ಸಚಿವ ಸದಾನಂದ ಅತಿ ಶ್ರೀಮಂತ ಸಚಿವ!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 12: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಸಚಿವರುಗಳು ಒಬ್ಬೊಬ್ಬರಾಗಿ ತಮ್ಮ ಆಸ್ತಿ ವಿವರಗಳನ್ನು ಆನ್ ಲೈನ್ ನಲ್ಲಿ ಪ್ರಕಟಿಸುತ್ತಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನಂತರ ಸಾಂಖಿಕ್ಯ ಖಾತೆ ಸಚಿವ ಡಿವಿ ಸದಾನಂದ ಗೌಡ ಸೇರಿದಂತೆ 6 ಮಂದಿ ಸಚಿವರುಗಳು ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸಿದ್ದಾರೆ.

ಕೇಂದ್ರದ ಆರು ಸಚಿವರ ಪೈಕಿ ಸಾಂಖ್ಯಿಕ ಖಾತೆ ಸಚಿವ ದೇವರಗುಂಡದ ಸದಾನಂದ ಗೌಡ ಅವರು ಅತಿ ಶ್ರೀಮಂತ ಸಚಿವರೆನಿಸಿದ್ದಾರೆ. ಡಿವಿ ಕನ್ನಡಿಗ ಸದಾನಂದ ಗೌಡರ ಆಸ್ತಿ 17.1 ಕೋಟಿ ರು. ಮೌಲ್ಯ ಮೀರುತ್ತದೆ. [2015: ಡಿವಿಎಸ್‌ ಆಸ್ತಿ ಹೆಚ್ಚಳ, ಸಚಿವರ ಸ್ಪಷ್ಟನೆಗಳು]

ಸುಷ್ಮಾ ಸ್ವರಾಜ್, ತಾವರ್ ಚಂದ್ ಗೆಹ್ಲೋಟ್, ಪ್ರಕಾಶ್ ಜಾವಡೇಕರ್, ವೆಂಕಯ್ಯ ನಾಯ್ಡು ಮತ್ತು ರಾಮ್​ಲಾಸ್ ಪಾಸ್ವಾನ್ ಅವರು ಕೂಡ ಆಸ್ತಿ ವಿವರ ಪ್ರಕಟಿಸಿದ್ದಾರೆ.

ಈ ಪೈಕಿ ನಾಯ್ಡು, ಸದಾನಂದ ಗೌಡ, ಗೆಹ್ಲೋಟ್ ಅವರ ಆಸ್ತಿ ದಕ್ಷಿಣದ ಕಡೆ ಮುಖ ಮಾಡಿದರೆ, ಸ್ವರಾಜ್, ಪಾಸ್ಮಾನ್ ಹಾಗೂ ಜಾವೇಡ್ಕರ್ ವಾರ್ಷಿಕ ಆದಾಯ ಉತ್ತರ ಮುಖಿಯಾಗಿದೆ. ಸದಾನಂದ ಗೌಡ ಒಂದು ರಿವಾಲ್ವರ್ ಮತ್ತು ಗನ್​ಗಾಗಿ 63,500 ರೂ. ವೆಚ್ಚ ಮಾಡಿದ್ದಾರೆ. ಜತೆಗೆ ಇವರ ಬಳಿ 64 ಲಕ್ಷ ರೂ. ಮೌಲ್ಯದ ಲ್ಯಾಂಡ್​ ಕ್ರೂಸರ್ ವಾಹನವಿದೆ.

1994ರಿಂದ ಮನೆಗೆ ಹೊಸ ಫ್ರಿಡ್ಜ್ ಖರೀದಿಸಿಲ್ಲ

1994ರಿಂದ ಮನೆಗೆ ಹೊಸ ಫ್ರಿಡ್ಜ್ ಖರೀದಿಸಿಲ್ಲ

1994ರಿಂದ ಮನೆಗೆ ಹೊಸ ಫ್ರಿಡ್ಜ್ ಖರೀದಿಸಿಲ್ಲ, 1993ರಿಂದ ಹೊಸ ಟಿವಿ ಸೆಟ್ ಖರೀದಿಸಿಲ್ಲ ಎಂದು ಘೋಷಿಸಿದ್ದಾರೆ. ಹಳೆ ಎಲೆಕ್ಟ್ರಾನಿಕ್ ವಸ್ತುಗಳಿದ್ದರೂ ಸ್ಥಿರಾಸ್ತಿ ಮೌಲ್ಯ ಹೆಚ್ಚಿರುವುದರಿಂದ ಆಸ್ತಿ ಮೊತ್ತ 17 ಕೋಟಿ ರೂ. ದಾಟುತ್ತದೆ. ಅಂದ ಹಾಗೆ, ಐಟಿ ಸಿಟಿಯನ್ನು ಆಳಿದ ಕರ್ನಾಟಕದ ಮಾಜಿ ಸಿಎಂ ಬಳಿ ಇನ್ನೂ ಕೇವಲ 3,500 ರು. ಬೆಲೆಯ ಮೊಬೈಲ್ ಹ್ಯಾಂಡ್​ಸೆಟ್ ಇದೆಯಂತೆ.

ಸ್ಥಿರಾಸ್ತಿ ಮೌಲ್ಯವೇ ಅಧಿಕ

ಸ್ಥಿರಾಸ್ತಿ ಮೌಲ್ಯವೇ ಅಧಿಕ

ಬೆಂಗಳೂರಿನ ಮತ್ತಿಕೆರೆ, ಮಂಗಳೂರಿನ ಪುತ್ತೂರು, ಕದ್ರಿ, ಮಂಡೆಕೋಲು, ಗುಂಟೆ, ಬಾಂಗ್ರಾ ಕುಳೂರು, ಪುತ್ತೂರು ಕಸಬದಲ್ಲಿ ಇವರು ಸ್ಥಿರಾಸ್ತಿ ಹೊಂದಿದ್ದಾರೆ. ಈ ಪೈಕಿ ಪುತ್ತೂರಿನಲ್ಲಿ ಸರ್ಕಾರ ಮಂಜೂರು ಮಾಡಿದ ಮನೆ, ಮಂಡೆಕೋಲಿನಲ್ಲಿ ಪಿತ್ರಾರ್ಜಿತ ಆಸ್ತಿಯಿದೆ. ಉಳಿದ ಆಸ್ತಿಯನ್ನು ಖರೀದಿಸಿರುವುದಾಗಿ ನಮೂದಿಸಲಾಗಿದೆ.

ಒಟ್ಟು ಆಸ್ತಿ ಮೌಲ್ಯ 17.1 ಕೋಟಿ ರು

ಒಟ್ಟು ಆಸ್ತಿ ಮೌಲ್ಯ 17.1 ಕೋಟಿ ರು

ಸ್ಥಿರ ದೂರವಾಣಿ: 2,000 ರು
ಮೊಬೈಲ್ ಫೋನ್(ನೋಕಿಯಾ) : 3,500 ರು
ರಿವಾಲ್ವರ್ : 55,000 ರು
ಗನ್ : 8,500 ರು
ಫ್ರಿಡ್ಜ್ : 5,000 ರು
ಸಿಡಿ ಪ್ಲೇಯರ್: 4,000 ರು
ಟಿವಿ 1993 ಮಾಡೆಲ್: 8,000 ರು
ಸಾಲ : 1,75,00,000 ರು

ಸುಷ್ಮಾ ಸ್ವರಾಜ್ 5.2 ಕೋಟಿ

ಸುಷ್ಮಾ ಸ್ವರಾಜ್ 5.2 ಕೋಟಿ

ಗೃಹೋಪಯೋಗಿ ವಸ್ತುಗಳು : 7,50,000 ರು
ಸೆಕ್ಯುರಿಟಿ ಮೊತ್ತ ಹಿಂತಿರುಗಿಸಿದ್ದು 25,00,000 ರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sadananda Gowda’s statement also suggests that he has not bought a new fridge since 1994 and a television set since 1993. Although his total assets are over Rs 17 crore, he uses a handset that costs Rs 3,500.
Please Wait while comments are loading...