ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರಾಗಿ ಅತ್ಯಂತ ಕಳಪೆ ರೆಕಾರ್ಡ್ ನಿರ್ಮಿಸಿದ ಸಚಿನ್

ರಾಜ್ಯಸಭಾ ಸಂಸದರಾಗಿರುವ ಸಚಿನ್ ತೆಂಡೂಲ್ಕರ್ ಅವರು ಸಂಸತ್ತಿನ ಹಾಜರಾತಿ ವಿಷಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ನಟಿ ರೇಖಾ ಅವರು ಅತ್ಯಂತ ಕಳಪೆ ರೆಕಾರ್ಡ್ ಹೊಂದಿದ್ದಾರೆ.

By ಅನುಷಾ ರವಿ
|
Google Oneindia Kannada News

ನವದೆಹಲಿ, ಏಪ್ರಿಲ್ 06: ರಾಜ್ಯಸಭಾ ಸಂಸದರಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸತ್ತಿನ ಹಾಜರಾತಿ ವಿಷಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ನಟಿ ರೇಖಾ ಅವರು ಅತ್ಯಂತ ಕಳಪೆ ರೆಕಾರ್ಡ್ ಹೊಂದಿದ್ದಾರೆ.

ಮೇಲ್ಮನೆಗೆ ನಾಮಾಂಕಿತರಾಗಿರುವ 12 ಮಂದಿ ಸದಸ್ಯರ ಪೈಕಿ ತೆಂಡೂಲ್ಕರ್ ಅವರು ಶೇ 6.6ರಷ್ಟು ಮಾತ್ರ ಹಾಜರಾತಿ ಹೊಂದಿದ್ದಾರೆ. ಮಾರ್ಚ್ 31, 2017ರ ಗಣತಿಯಂತೆ ಸಚಿನ್ ಅವರು348 ಸೆಷನ್ ಗಳ ಪೈಕಿ ಕೇವಲ 23 ಕಲಾಪಗಳಲ್ಲಿ ಕಾಣಿಸಿಕೊಂಡಿದ್ದಾರೆ.

Sachin Tendulkar scores 2nd lowest attendance in Rajya Sabha; Rekha worse


2012ರಲ್ಲಿ ನಾಮಾಂಕಿತರಾಗಿರುವ ಸಚಿನ್ ಅವರು ಇಲ್ಲಿ ತನಕ 22 ಪ್ರಶ್ನೆಗಳನ್ನು ಮಾತ್ರ ಕೇಳಿದ್ದು, ಯಾವುದೇ ಘನಚರ್ಚೆಗಳಲ್ಲಿ
ಪಾಲ್ಗೊಳ್ಳದ ಸಂಸದರೆನಿಸಿಕೊಂಡಿದ್ದಾರೆ.

ಆದರೆ, ಸಚಿನ್ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿ ಎಂದರೆ, ಸಚಿನ್ ಗಿಂತ ಕಡಿಮೆ ಹಾಜಾರಾತಿ ಹಾಗೂ ಪ್ರಶ್ನೆಗಳನ್ನು ಕೇಳಿದವರ ಪೈಕಿ ನಟಿ ರೇಖಾ ಮುಂಚೂಣಿಯಲ್ಲಿದ್ದಾರೆ. ಬಾಲಿವುಡ್ ನ ಹಿರಿಯ ನಟಿ ರೇಖಾ ಅವರಿಗಿಂತ ಸಚಿನ್ ಅವರು ಹೆಚ್ಚುವರಿ ಐದು ದಿನಗಳ ಕಾಲ ಸಂಸತ್ತಿಗೆ ಹಾಜರಾಗಿದ್ದಾರೆ.

ರೇಖಾ ಅವರು ಕೂಡಾ 2012ರಿಂದಲೂ ರಾಜ್ಯಸಭಾ ಸದಸ್ಯರಾಗಿದ್ದು 348 ದಿನಗಳ ಕಲಾಪದ ಪೈಕಿ ಕೇವಲ 18 ದಿನಗಳು ಮಾತ್ರ ಸಂಸತ್ತಿಗೆ ಬಂದಿದ್ದಾರೆ. ಶೇ 5.17ರಷ್ಟು ಮಾತ್ರ ಹಾಜರಾತಿ ಹೊಂದಿರುವ ರೇಖಾ ಅವರು ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ, ಯಾವುದೇ ಚರ್ಚೆಯಲ್ಲೂ ಪಾಲ್ಗೊಂಡಿಲ್ಲ.

ಇನ್ನು ಸಂಸದರ ನಿಧಿ ಬಳಕೆ ವಿಷಯಕ್ಕೆ ಬಂದರೆ ಸಚಿನ್ ಅವರು 21.19 ಕೋಟಿ ರು ವೆಚ್ಚದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದಾರೆ. ರೇಖಾ ಅವರು ಕೇವಲ 9.28 ಕೋಟಿ ರು ವೆಚ್ಚದ ಕಾಮಗಾರಿಗೆ MPLADS ವತಿಯಿಂದ ಹಣ ಮಂಜೂರು ಮಾಡಿಸಿದ್ದಾರೆ.

ದಿನವೊಂದಕ್ಕೆ ರೇಖಾ ಅವರ ಖರ್ಚು ವೆಚ್ಚ 3.6 ಲಕ್ಷರು ನಷ್ಟಿದ್ದರೆ, ಸಚಿನ್ ಅವರ ಖರ್ಚು ವೆಚ್ಚ್ಅ 2.56 ಲಕ್ಷ ರು ನಷ್ಟಿದೆ. ಇಬ್ಬರು ಕಡಿಮೆ ಹಾಜರಾತಿ ಹೊಂದಿರುವುದರಿಂದ ಖರ್ಚು ವೆಚ್ಚ ಸಂಖ್ಯೆ ಕಡಿಮೆಯಿದೆ.

English summary
Sachin Tendulkar scores 2nd lowest attendance in Rajya Sabha; Rekha worse. Tendulkar's attendance is a mere 6.6 per cent making it the second lowest among all members. As on March 31, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X