Sabarimala: ಶಬರಿಮಲೆ ಯಾತ್ರೆ: ಇಂದಿನಿಂದ ಸ್ಪಾಟ್ ಬುಕ್ಕಿಂಗ್ ಇಲ್ಲ
ಪತ್ತನಂತಿಟ್ಟ ಜನವರಿ 10: ಶಬರಿಮಲೆಯಲ್ಲಿ ಮಕರ ಜ್ಯೋತಿ ಉತ್ಸವಕ್ಕೆ ಇನ್ನು ಐದು ದಿನಗಳು ಬಾಕಿ ಉಳಿದಿವೆ. ಇದರಿಂದಾಗಿ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಯಾತ್ರಾರ್ಥಿಗಳ ದಂಡೇ ಹರಿದು ಬರುತ್ತಿದೆ. ಜನಸಂದಣಿಯನ್ನು ನಿರ್ವಹಿಸುವ ಸಲುವಾಗಿ ದೇವಸ್ಥಾನವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಬುಧವಾರದಿಂದ ಸ್ಪಾಟ್ ಬುಕ್ಕಿಂಗ್ ಅನ್ನು ನಿಲ್ಲಿಸಿದೆ.
ಜನವರಿ 15ರಂದು ಮಕರವಿಳಕ್ಕು ಉತ್ಸವ (ಮಕರ ಜ್ಯೋತಿ ದರ್ಶನ) ನಡೆಯಲಿದೆ. ಶಬರಿಮಲೆ ಕಳೆದ ಕೆಲವು ದಿನಗಳಿಂದ ದಿನಕ್ಕೆ ಸರಾಸರಿ 90,000 ಪಾದಯಾತ್ರೆಗೆ ಸಾಕ್ಷಿಯಾಗುತ್ತಿದೆ. ಭಕ್ತರು ದರ್ಶನಕ್ಕೆ 10-18 ಗಂಟೆ ಕಾಯಬೇಕಾಗಿದೆ ಎಂದು ದೂರುತ್ತಿದ್ದಾರೆ. ಪುಟ್ಟ ಮಕ್ಕಳು ವಯಸ್ಸಾದವರು ಕಣ್ಣೀರಿನಲ್ಲೇ ದರ್ಶನ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ಮಧ್ಯಾಹ್ನ ಗರ್ಭಗುಡಿಯ ಬಳಿಯ ಮೇಲ್ಸೇತುವೆಯ ಸರತಿ ಸಾಲಿನಲ್ಲಿ ಬಳಸಲಾಗಿದ್ದ ಬ್ಯಾರಿಕೇಡ್ ಬಿದ್ದು ಅದೃಷ್ಟವಶಾತ್ ಯಾತ್ರಾರ್ಥಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಮಕರವಿಳಕ್ಕು ಪೂರ್ವಭಾವಿಯಾಗಿ ಗುರುವಾರ ಎರುಮೇಲಿಯಲ್ಲಿ ಚಂದನಕುಡಂ ಉತ್ಸವ ನಡೆಯಲಿದೆ. ಧಾರ್ಮಿಕ ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಹಬ್ಬ ಇದಾಗಿದೆ. ಚಂದನಕುಡಂ ಮೆರವಣಿಗೆಯು ಎರುಮೇಲಿ ಪಟ್ಟಣದಲ್ಲಿ ನಡೆಯಲಿದೆ.
ಮಕರ ಪೂಜಾ ಬುಕ್ಕಿಂಗ್ ಪ್ರಾರಂಭ
ಜನವರಿ 16 ರಿಂದ 20 ರವರೆಗೆ ಶಬರಿಮಲೆ ದೇವಸ್ಥಾನದಲ್ಲಿ ಮಕರ ಪೂಜೆಗಾಗಿ TDB ವರ್ಚುವಲ್ ಬುಕಿಂಗ್ ಅನ್ನು ತೆರೆದಿದೆ. TDB ಪ್ರಕಾರ ಜನವರಿ 16 ರಂದು ದಿನಕ್ಕೆ 50,000 ಭಕ್ತರು ಮತ್ತು ಜನವರಿ 17 ರಿಂದ 20 ರವರೆಗೆ ದಿನಕ್ಕೆ 60000 ಭಕ್ತರಿಗೆ ದರ್ಶನವನ್ನು ನೀಡಲಾಗುತ್ತದೆ. ಈ ದಿನಗಳಲ್ಲಿ ಕೇವಲ ಮೂರು ಸ್ಥಳಗಳಲ್ಲಿ ಅಂದರೆ ಪಂಬಾ, ನಿಲಕ್ಕಲ್ ಮತ್ತು ವಂಡಿಪೆರಿಯಾರ್ ನಲ್ಲಿ ಜನವರಿ 16ರಿಂದ ಸ್ಪಾಟ್ ಬುಕಿಂಗ್ ಅನ್ನು ಅನುಮತಿಸಲಾಗುತ್ತದೆ.
ಹೊಸ ಪೊಲೀಸ್ ಬ್ಯಾಚ್
ಶಬರಿಮಲೆಯಲ್ಲಿ ಹೊಸ ಬ್ಯಾಚ್ ಪೊಲೀಸರು ಅಧಿಕಾರ ವಹಿಸಿಕೊಂಡರು. ಈ ತಂಡದ ನೇತೃತ್ವವನ್ನು ನಕ್ಸಲ್ ನಿಗ್ರಹ ದಳದ ಮುಖ್ಯಸ್ಥ ಎಸ್ ಸುಜಿತ್ ದಾಸ್ ವಹಿಸಲಿದ್ದಾರೆ. ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಸುಮಾರು 2500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈ ಪೈಕಿ 10 ಉಪ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 950 ಪೊಲೀಸ್ ಅಧಿಕಾರಿಗಳ ಮೊದಲ ಬ್ಯಾಚ್ ಅಧಿಕಾರ ವಹಿಸಿಕೊಂಡರೆ, ಉಳಿದವರು ಗುರುವಾರ ಕರ್ತವ್ಯಕ್ಕೆ ಸೇರಲಿದ್ದಾರೆ. ಜನವರಿ 13 ರಂದು ಆರು ಉಪ ಅಧೀಕ್ಷಕರ ನೇತೃತ್ವದಲ್ಲಿ 350 ಪೊಲೀಸ್ ಅಧಿಕಾರಿಗಳ ಹೆಚ್ಚುವರಿ ಬ್ಯಾಚ್ ಕರ್ತವ್ಯಕ್ಕೆ ಸೇರ್ಪಡೆಗೊಳ್ಳಲಿದೆ.

ಜನವರಿ 13ರಿಂದ 15ರವರೆಗೆ ಪಂದಳಂ ಅರಮನೆಯಿಂದ ಸನ್ನಿಧಾನದವರೆಗೆ ತಿರುವಾಭರಣ ಮೆರವಣಿಗೆ ನಡೆಯಲಿದ್ದು, ರನ್ನಿ ತಹಶೀಲ್ದಾರ್ ಎಂ.ಕೆ.ಅಜಿಕುಮಾರ್ ನೇತೃತ್ವದಲ್ಲಿ 10 ಮಂದಿ ಅಧಿಕಾರಿಗಳ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.
ಶಬರಿಮಲೆಯಕ್ಕೆ ಭಕ್ತರ ದಂಡು
ಅಧಿಕೃತ ಅಂದಾಜಿನ ಪ್ರಕಾರ, ಡಿಸೆಂಬರ್ 30ರಂದು ದೇವಾಲಯವು ಪುನರಾರಂಭಗೊಂಡಾಗಿನಿಂದ ಪ್ರತಿದಿನ ಸರಾಸರಿ ಒಂದು ಲಕ್ಷ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಕರವಿಳಕ್ಕು ಉತ್ಸವದ ನೂಕುನುಗ್ಗಲು ಕಡಿಮೆ ಮಾಡಲು ಅಧಿಕಾರಿಗಳು ವರ್ಚುವಲ್ ಸರದಿ ಬುಕಿಂಗ್‌ನ ಮಿತಿಯನ್ನು ಕಡಿಮೆ ಮಾಡಿದ್ದಾರೆ. ಜನವರಿ 14 ಮತ್ತು 15 ರಿಂದ ಕ್ರಮವಾಗಿ 50,000 ಮತ್ತು 40,000 ಜನರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ದಿನಗಳ ಶೋಭಾಯಾತ್ರೆ ಜನವರಿ 13ರಿಂದ ಆರಂಭವಾಗಲಿದೆ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications