Sabarimala: ಶಬರಿಮಲೆದಲ್ಲಿ ಕುಸಿದು ಬಿದ್ದು ಸಹಾಯಕ ಅರ್ಚಕ ಸಾವು: ದೇವಸ್ಥಾನದಲ್ಲಿ ನೂಕುನುಗ್ಗಲು!

ಪತ್ತನಂತಿಟ್ಟ ಡಿಸೆಂಬರ್ 7: ಶಬರಿಮಲೆಯದಲ್ಲಿ ಸಹಾಯಕ ಅರ್ಚಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ತಮಿಳುನಾಡಿನ ಕುಂಭಕೋಣಂನ ರಾಮ್ ಕುಮಾರ್ (43) ಎಂದು ಗುರಿತಿಸಲಾಗಿದೆ.

ಇವರು ಗುರುವಾರ ಬೆಳಗ್ಗೆ ಕೋಣೆಯಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಇವರನ್ನು ಸನ್ನಿಧಾನಂ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಘಟನೆ ಹಿನ್ನೆಲೆಯಲ್ಲಿ ಇಂದು 20 ನಿಮಿಷ ತಡವಾಗಿ ದೇವಸ್ಥಾನ ತೆರೆಯಲಾಗಿದೆ. ಶುದ್ಧೀಕರಣದ ನಂತರ ದೇವಾಲಯವನ್ನು ತೆರೆಯಲಾಗಿದೆ. ದೇವಸ್ಥಾನ ತೆರೆಯಲು ವಿಳಂಬವಾದ ಕಾರಣ ಯಾತ್ರಾರ್ಥಿಗಳು ಬಹಳ ಹೊತ್ತು ಕಾಯಬೇಕಾಯಿತು.

Sabarimala: Assistant priest dies after collapsing in Sabarimala!

ಈ ನಡುವೆ ಸನ್ನಿಧಾನಂನಲ್ಲಿ ನೂಕುನುಗ್ಗಲು ಉಂಟಾಗಿದೆ. ಭಾರೀ ಜನದಟ್ಟಣೆಯನ್ನು ನಿಯಂತ್ರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಹೈಕೋರ್ಟ್ ನಿನ್ನೆ ಸೂಚಿಸಿತ್ತು. ಕಳೆದ ಕೆಲ ದಿನಗಳಿಂದ ದರ್ಶನಕ್ಕೆ 10 ಗಂಟೆಗೂ ಹೆಚ್ಚು ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನ್ಯಾಯಾಲಯದ ಈ ಕ್ರಮವನ್ನು ತೆಗೆದುಕೊಂಡಿತ್ತು.

ಪುರಷರಷ್ಟೇ ಅಲ್ಲದೇ ಈ ಬಾರಿ ಶಬರಿಮಲೆಗೆ ಬರುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಶಬರಿಮಲೆಯಕ್ಕೆ ಬರುವ ಮಹಿಳೆಯರ ಸಂಖ್ಯೆ ಶೇಕಡ 20ರಷ್ಟು ಹೆಚ್ಚಾಗಿದೆ ಎಂದು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.

ಶಬರಿಮಲೆಯ ದೇವಸ್ತಾನದ ಬಗ್ಗೆ:-

ಶಬರಿಮಲೆ ಭಾರತದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ. ವಿಶ್ವದ ಅತಿದೊಡ್ಡ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ಇಲ್ಲಿಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ವಿಶೇಷವಾಗಿ ಶಬರಿಮಲೆ ಸೀಸನ್‌ನಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ. 18 ಬೆಟ್ಟಗಳ ನಡುವೆ ಇರುವ ಈ ದೇವಾಲಯವು ಭಾರತದ ಕೇರಳದ ಸಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಾಲಯವಾಗಿದೆ. ಈ ದೇವಾಲಯವು ಕೋಟ್ಯಾಂತರ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಪ್ರಸ್ತುತ ಈ ದೇವಾಲಯವು ಮಹಿಳೆಯರ ಪ್ರವೇಶದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದೆ.

ಶಬರಿಮಲೆ ದೇವಸ್ಥಾನದ ಯಾತ್ರೆಯು ನವೆಂಬರ್‌ನಲ್ಲಿ ಪ್ರಾರಂಭವಾಗಿ ಜನವರಿಯಲ್ಲಿ ಕೊನೆಗೊಳ್ಳುತ್ತದೆ. ದಕ್ಷಿಣ ಭಾರತದಿಂದ ಮಾತ್ರವಲ್ಲದೆ ಭಾರತದ ಇತರ ಭಾಗಗಳಿಂದ ಮತ್ತು ವಿದೇಶಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಏಪ್ರಿಲ್ ಹೊರತುಪಡಿಸಿ ವರ್ಷದ ಉಳಿದ ಭಾಗಗಳಲ್ಲಿ ದೇವಸ್ಥಾನವು ಮುಚ್ಚಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+