Rush in Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನೂಕುನುಗ್ಗಲು: ತಿರುಮಲಕ್ಕೆ ಹೋಗುವ ಭಕ್ತರಿಗೆ ಮಹತ್ವದ ಸೂಚನೆ..
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ನಿತ್ಯ ಹೆಚ್ಚಾಗುತ್ತಿದೆ. ಹೀಗಾಗಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ನಿತ್ಯ ಸುಮಾರು 20 ಗಂಟೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ದರ್ಶನ ಸುಲಭವಾಗದೆ ನೂಕುನುಗ್ಗಲು ಕೂಡ ಕಂಡುಬರುತ್ತಿದೆ. ಕಣ್ಣಾಯಿಸಿದಲೆಲ್ಲಾ ಭಕ್ತರ ಸರದಿ ಸಾಲು ಕಾಣಸಿಗುತ್ತಿದೆ.
ಹೌದು... ಉಚಿತ ದರ್ಶನಕ್ಕಾಗಿ ಭಕ್ತರು ಹೊರಗಡೆ ಸರತಿ ಸಾಲಿನಲ್ಲಿ ಕಾಯಬೇಕು. ಹೀಗೆ 20 ಗಂಟೆಗಳ ನಂತರ ಬುಧವಾರ 80,048 ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ. 35,403 ಮಂದಿ ಭಕ್ತರು ಹರಕೆ ತೀರಿಸಿ ಪೂಜೆ ಸಲ್ಲಿಸಿದ್ದಾರೆ. ಟಿಟಿಡಿ ಪ್ರಕಾರ ಶ್ರೀವಾರಿ ಹುಂಡಿಯ ಆದಾಯ ಬುಧವಾರ ಒಂದೇ ದಿನ 4.17 ಕೋಟಿ ರೂಪಾಯಿ ತಲುಪಿದೆ.

ಇನ್ನೂ 300 ರೂಪಾಯಿಗೆ ಟಿಕೆಟ್ ಪಡೆಯುವ ಮೂಲಕ ದರ್ಶನಕ್ಕೆ ತೆರಳುವ ಭಕ್ತರು 3 ಗಂಟೆ ಕಾಯಲೇಬೇಕು. ಇನ್ನೇನು ರಜೆ ದಿನಗಳು ಮುಗಿರುತ್ತಿದ್ದರಿಂದ ತಿರುಮಲಕ್ಕೆ ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ನೀವೇನಾದರೂ ಈ ಸಮಯದಲ್ಲಿ ತಿರುಪತಿಗೆ ಹೋಗಬೇಕು ಅಂದುಕೊಂಡಿದ್ದರೆ ಅದನ್ನು ಮುಂದೂಡುವುದು ಉತ್ತಮ.
ತಿರುಮಲಕ್ಕೆ ಹೋಗುವ ಮುನ್ನ ಇದನ್ನು ಓದಿ
ಹೌದು... ನೀವು ತಿರುಮಲಕ್ಕೆ ಹೋಗುವುದಾದರೆ ಸ್ವಲ್ಪ ಯೋಚಿಸಿ. ರಜಾದಿನಗಳ ಹಿನ್ನೆಲೆಯಲ್ಲಿ ತಿರುಮಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದರಿಂದಾಗಿ ಭಕ್ತರ ದಟ್ಟಣೆ ಉಂಟಾಗಿದ್ದು, ಶ್ರೀ ತಿಮ್ಮಪ್ಪ ನ ದರ್ಶನಕ್ಕೆ ಉದ್ದನೆಯ ಸಾಲುಗಳು ಏರ್ಪಟ್ಟಿದೆ.
ತಿರುಮಲ ಬೆಟ್ಟದಲ್ಲಿ ಶನಿವಾರ ಜನಜಂಗುಳಿ ತುಂಬಿ ತುಳುಕುತ್ತಿದ್ದು, ಭಾನುವಾರವೂ ಭಕ್ತರ ದಂಡೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನಕ್ಕೆ 24 ಗಂಟೆ ಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀ ವೆಂಕಟೇಶ್ವರ ಸ್ವಾಮೀಯ ದರ್ಶನಕ್ಕೆ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ, ತಮಿಳುನಾಡಿನಿಂದ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರಂತೆ. ಪರಿಣಾಮ ತಿರುಮಲ ಶ್ರೀಗಳ ದರ್ಶನಕ್ಕೆ ಆಗಮಿಸಿದ ಭಕ್ತರಿಂದ ತುಂಬಿ ತುಳುಕುತ್ತಿದೆ. ಭಾನುವಾರವೂ ಈ ಭಕ್ತರ ಆಗಮನ ಸಂಖ್ಯೆ ಹೆಚ್ಚಾಗಿದೆ. ವೈಕುಂಠಂ ಸರದಿ ಸಂಕೀರ್ಣ ಮತ್ತು ನಾರಾಯಣಗಿರಿ ಕ್ಯೂ ಕಾಂಪ್ಲೆಕ್ಸ್ಗಳು ಭಕ್ತರಿಂದ ತುಂಬಿವೆ.
ಅಲ್ಲದೇ ರಿಂಗ್ ರಸ್ತೆಯಿಂದ ಅಕ್ಟೋಪಸ್ ಬಿಲ್ಡಿಂಗ್ ವರೆಗೆ ತಿಮ್ಮಪ್ಪನ ಭಕ್ತರು ಸುಮಾರು 3 ಕಿ.ಮೀ ದೂರ ಕಾದು ನಿಂತಿದ್ದ ದೃಶ್ಯಗಳು ಕಂಡು ಬಂದಿದೆ. ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ ದೇವರ ದರ್ಶನಕ್ಕೆ 24 ಗಂಟೆ ಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ ಪ್ರಕಟಿಸಿದೆ.

ಸ್ವಾಮಿಯ ದರ್ಶನಕ್ಕೆ ಸರತಿ ಸಾಲು
ಸ್ವಾಮಿಯ ದರ್ಶನಕ್ಕೆ ಸಾಕಷ್ಟು ಸಮಯ ಹಿಡಿಯುವುದರಿಂದ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಎಲ್ಲ ರೀತಿಯ ಸೌಲಭ್ಯ ಕಲ್ಪಿಸುತ್ತಿದೆ.
ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ಕುಡಿಯುವ ನೀರು, ಅನ್ನ ನೈವೇದ್ಯ, ಹಾಲು ನೀಡಲಾಗುತ್ತಿದೆ. ತಿರುಮಲ ತಿರುಪತಿ ದೇವಸ್ಥಾನದ ಜೆಇಒ ವೀರಬ್ರಹ್ಮ, ಉಪ ಇಒ ಹರೀಂದ್ರನಾಥ್ ಹಾಗೂ ಭದ್ರತಾ ಅಧಿಕಾರಿಗಳು ದರ್ಶನಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಚುನಾವಣೆ ಮುಗಿದು, ಬೇಸಿಗೆ ರಜೆ, ವಾರಾಂತ್ಯ ಇರುವುದರಿಂದ ಭಕ್ತರ ದಂಡೇ ಇದೆ. ಆದರೆ ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.
ಕಂಪಾರ್ಟ್‌ಮೆಂಟ್‌ಗಳು ಮತ್ತು ನಾರಾಯಣಗಿರಿ ಶೆಡ್‌ಗಳು ಭರ್ತಿಯಾಗಿದ್ದು, ಶಿಲಾತೋರಣಂ ವೃತ್ತದವರೆಗೆ ಸರತಿ ಸಾಲು ವಿಸ್ತರಿಸಿದೆ. ಸ್ಲಾಟ್ ಹೊಂದಿರುವ ಭಕ್ತರಿಗೆ ವಿವಿಧ ಕಂತುಗಳಲ್ಲಿ ಸರತಿ ಸಾಲಿನಲ್ಲಿ ಪ್ರವೇಶಿಸಲು ಅವಕಾಶ ನೀಡಿರುವುದರಿಂದ ಶನಿವಾರ ಸಂಜೆ 6 ಗಂಟೆಯಿಂದ ಸರತಿ ಸಾಲು ನಿಧಾನವಾಗಿ ಕಡಿಮೆಯಾಗುತ್ತಿದೆ. ಮತ್ತು ಸ್ವಾಮಿಗೆ ಮುಡಿ ಅರ್ಪಿಸುವ ಕಲ್ಯಾಣಕಟ್ಟೆಗಳಲ್ಲಿಯೂ ಜನಸಂದಣಿ ಹೆಚ್ಚಾಗಿದೆ.












Click it and Unblock the Notifications