Rupee Vs Dollar: ಏಷ್ಯಾದಲ್ಲೇ ಕಳಪೆ ಕರೆನ್ಸಿ ನಮ್ಮದೇ! ಡಾಲರ್ ಮುಂದೆ ಮಂಡಿಯೂರಿದ ರೂಪಾಯಿ..
Rupee Vs Dollar: ದೇಶ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಇಡೀ ಏಷ್ಯಾದಲ್ಲೇ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಈ ರೀತಿ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತ ಕಂಡಿರುವುದು ಇದೇ ಮೊದಲು. ದೇಶದ ರೂಪಾಯಿ ಮೌಲ್ಯವು ಇಡೀ ಏಷ್ಯಾದಲ್ಲಿ ಈ ಪರಿ ಕುಸಿತ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆ ಇದೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೇರಿಕಾದ ಡಾಲರ್ ಎದುರು ಬುಧವಾರ (ಡಿಸೆಂಬರ್ 03)ರಂದು ಸರ್ವಕಾಲಿಕ ಕುಸಿತ ಕಂಡಿದೆ. ರೂಪಾಯಿ ಮೌಲ್ಯವು ₹90.15ಕ್ಕೆ ಕುಸಿದಿದೆ. ರೂಪಾಯಿಯ ಮೌಲ್ಯವು ಬುಧವಾರದಂದು ವಹಿವಾಟಿನ ಅಂತ್ಯಕ್ಕೆ 90ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಕೆ ಕಂಡಿದೆ. ಈ ರೀತಿ ಆಗಿರುವುದು ಇದೇ ಮೊದಲು. ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗುತ್ತಿರುವುದು, ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದು ಸೇರಿದಂತೆ ಹಲವು ಕಾರಣಗಳಿಗೆ ರೂಪಾಯಿ ಮೌಲ್ಯವು ಭಾರೀ ಕುಸಿತ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿಯುತ್ತಿದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಿಡಿಪಿ ಮುಂದಿದ್ದೇವೆ.

ಡಿಸೆಂಬರ್ 03ರಂದು ರೂಪಾಯಿ ಮೌಲ್ಯವು ಡಾಲರ್ ಎದುರು 89.96ರಷ್ಟು ಇತ್ತು. ಇದು ಸಹ ಹೆಚ್ಚು ವ್ಯತ್ಯಾಸವೇ ಆಗಿದೆ. ಮಧ್ಯಾಹ್ನದ ವೇಳೆಗೆ 90.30ರವರೆಗೆ ಇಳಿಕೆ ಕಂಡಿತ್ತು. ಷೇರುಮಾರುಕಟ್ಟೆಯ ವಹಿವಾಟಿನ ಕೊನೆಯಲ್ಲಿ ಮೌಲ್ಯವು 90.15 ರೂಪಾಯಿ ಆಗಿದೆ. ಮಂಗಳವಾರದ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ ಬುಧವಾರ ರೂಪಾಯಿ ಮೌಲ್ಯವು ಬರೋಬ್ಬರಿ 19 ಪೈಸೆಯಷ್ಟು ಕುಸಿತ ಕಂಡಿದೆ.
ಆರ್ಥಿಕವಾಗಿ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತಿದೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಆದರೆ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತವನ್ನು ಕಂಡಿದೆ. ರೂಪಾಯಿ ಮೌಲ್ಯವು ಕಳೆದ 5 ವರ್ಷಗಳ ಅವಧಿಯಲ್ಲಿ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿದೆ. ಇದಕ್ಕೆ ಪರೋಕ್ಷವಾಗಿ ಅಮೇರಿಕಾವೂ ಕಾರಣವಾಗಿದೆ. ಅಮೇರಿಕಾದ ಆರ್ಥಿಕ ನೀತಿಗಳು ನಿರಂತರವಾಗಿ ಭಾರತದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಸುಂಕ ಹೆಚ್ಚಳದ ನಂತರ ವಿದೇಶಿ ಹೂಡಿಕೆಯ ಮೇಲೆ ಪರಿಣಾಮ ಬೀರಿದೆ.
ಇನ್ನು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೆಚ್ಚಿನ ಯತ್ನ ನಡೆಸುತ್ತಿಲ್ಲ ಎನ್ನುವ ವಾದವೂ ಕೇಳಿ ಬಂದಿದೆ.
ಅಮೇರಿಕಾ - ಭಾರತ ಬಾಂಧವ್ಯ ಬಿರುಕು ಕಾರಣ!
ಇನ್ನು ಡಾಲರ್‌ನ ಮುಂದೆ ರೂಪಾಯಿಯ ಮೌಲ್ಯವು ಭಾರೀ ಕುಸಿತ ಕಾಣುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಅಮೇರಿಕಾ ಹಾಗೂ ಭಾರತದ ನಡುವಿನ ಬಾಂಧವ್ಯ ಕುಸಿತ ಕಂಡಿರುವುದು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾದ ನಡುವೆ ಉತ್ತಮ ಸಂಬಂಧ ಇಲ್ಲ. ಅಮೇರಿಕಾ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದದಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿದೆ. ಅಲ್ಲದೇ ವಿದೇಶಿ ಹೂಡಿಕೆದಾರರು ಷೇರುಮಾರುಕಟ್ಟೆಯಲ್ಲಿ ಷೇರು ಹಿಂಪಡೆಯುತ್ತಿರುವುದು ಸಹ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.












Click it and Unblock the Notifications