ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿ

Recommended Video

      ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸಾಮಾನ್ಯವೆಂದ ಅರುಣ್ ಜೇಟ್ಲಿ | Oneindia Kannada

      ನವದೆಹಲಿ, ಸೆಪ್ಟೆಂಬರ್ 06: ಡಾಲರ್ ಎದುರು ರೂಪಾಯಿ ಬೆಲೆ ದಿನೇ ದಿನೇ ಪಾತಾಳಕ್ಕೆ ಹೋಗುತ್ತಿರುವುದು ಆತಂಕ ಮೂಡಿಸಿದೆ ಆದರೆ ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ಅವರು ಹೇಳುವುದೇ ಬೇರೆ.

      ಡಾಲರ್ ಎದುರು ರೂಪಾಯಿ ಕುಸಿದಿರುವುದಕ್ಕೆ ಕೇಂದ್ರದ ವಿತ್ತ ನೀತಿಯಾಗಲಿ, ದೇಶದ ಸಮಸ್ಯೆಯಾಗಲಿ ಕಾರಣವಲ್ಲ ಎಂದಿರುವ ಡಾಲರ್ ಎದುರು ಹಣದ ಮೌಲ್ಯ ಕುಸಿಯುವುದು ಸಾಮಾನ್ಯ ಎಂಬರ್ಥದ ಮಾತುಗಳನ್ನಾಡಿದ್ದಾರೆ.

      ರೂಪಾಯಿ ಮೌಲ್ಯ ಕುಸಿಯಲು ಬಲವಾದ ಕಾರಣವಿಲ್ಲ, ಡಾಲರ್ ಎದುರು ವಿವಿದ ದೇಶಗಳ ಹಣ ಕುಸಿದಿವೆ ನಿಯತಕಾಲಿಕವಾಗಿ ಈ ರೀತಿ ಆಗುತ್ತಲೇ ಇರುತ್ತದೆ. ರೂಪಾಯಿ ಮೌಲ್ಯ ಕುಸಿದಿರುವುದಕ್ಕೆ ನಿರ್ದಿಷ್ಟ ಕಾರಣವಿಲ್ಲ ಎಂದಿದ್ದಾರೆ.

      Rupee value down against dollar is normal: Arun Jaitley

      ಬೇರೆ ದೇಶಗಳಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಉತ್ತಮವಾಗಿಯೇ ಇದೆ ಎಂದ ಅರುಣ್ ಜೇಟ್ಲಿ. ಇತರೆ ರಾಷ್ಟ್ರಗಳ ಹಣದ ಮೌಲ್ಯ ನಾಲ್ಕೈದು ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ ಹಾಗೆ ನೋಡಿದರೆ ರೂಪಾಯಿ ಮೌಲ್ಯ ಉತ್ತಮಗೊಂಡಿದೆ ಎಂದಿದ್ದಾರೆ.

      ರೂಪಾಯಿ ದುರ್ಬಲಗೊಂಡಿಲ್ಲ ಸ್ಥಿರವಾಗಿದೆ. ಅದು ತನ್ನ ಬಲದ ವ್ಯಾಪ್ತಿಯಲ್ಲಿಯೇ ಇದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನಿನ್ನೆ ಕೂಡ ಡಾಲರ್ ಎದುರು 17 ಪೈಸೆ ಕುಸಿದಿರುವ ರೂಪಾಯಿ ಮೌಲ್ಯ 71.75 ತಲುಪಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+