3,000 ಕೋಟಿ ಮೌಲ್ಯದ ಮಾದಕ ವಸ್ತು ವಶ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ರಾಜಸ್ತಾನ, ನವೆಂಬರ್ 2: ಇಲ್ಲಿನ ಉದಯಪುರ್ ನಲ್ಲಿ 23.5 ಟನ್ ನಿಷೇಧಿತ ಮ್ಯಾನ್ ಡ್ರಾಕ್ಸ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯನ್ನು ಆಧರಿಸಿ, ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಮರುಧರ್ ಡ್ರಿಂಕ್ಸ್ ಅವರಣದ ಮೇಲೆ ದಾಳಿ ಮಾಡಿದ ವೇಳೆ ರಹಸ್ಯ ಕೋಣೆವೊಂದರಲ್ಲಿ ಎರಡು ಕೋಟಿ ಮ್ಯಾನ್ ಡ್ರಾಕ್ಸ್ ಮಾತ್ರೆಗಳು ಪತ್ತೆಯಾಗಿದೆ.

ಅಧಿಕಾರಿ ನಜೀಬ್ ಷಾ ಈ ಬಗ್ಗೆ ಮಾಹಿತಿ ನೀಡಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ 3 ಸಾವಿರ ಕೋಟಿ ರುಪಾಯಿ. ಇವುಗಳನ್ನು ಮೊಜಾಂಬಿಕ್ ಹಾಗೂ ದಕ್ಷಿಣ ಆಫ್ರಿಕಾಗೆ ರಫ್ತು ಮಾಡಲು ಸಂಗ್ರಹಿಸಿಡಲಾಗಿತ್ತು ಎಂದು ತಿಳಿಸಿದ್ದಾರೆ. ಈ ಮಾತ್ರೆಯನ್ನು ಖಿನ್ನತೆಗೆ ಔಷಧಿಯಾಗಿ ಬಳಸುತ್ತಾರೆ.[45 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ: ಸಿಕ್ಕಿಬಿದ್ದವನು ವಿಜ್ಞಾನಿ!]

Rs. 3,000 crore worth narcotic Mandrax tablets seized

ಆದರೆ, ಇದನ್ನು ಹೆಚ್ಚಾಗಿ ಸೇವಿಸಿದರೆ ಕೋಮಾಗೆ ಹೋಗುವ ಸಾಧ್ಯತೆ ಇರುತ್ತದೆ. ಕಡೆಗೆ ಸಾವು ಕೂಡ ಸಂಭವಿಸಬಹುದು. ಆಫ್ರಿಕಾ ಹಾಗೂ ಏಷ್ಯಾದಲ್ಲಿ ಮನರಂಜನೆಗಾಗಿ ಈ ಮಾತ್ರೆ ಬಳಸುತ್ತಾರೆ ಎಂದು ಷಾ ಹೇಳಿದ್ದಾರೆ. ಈ ಜಾಲದ ಸೂತ್ರಧಾರ ಮ್ಯಾನ್ ಡ್ರಾಕ್ಸ್ ತಯಾರಿಕೆಯಲ್ಲಿ ಮುಖ್ಯವಾಗಿ ಬಳಸುವ ಅಸೆಟಿಕ್ ಆನ್ ಹೈಡ್ರೈಡ್ ಮತ್ತಿತರ ಕಚ್ಚಾ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದವನನ್ನು ಬಂಧಿಸಲಾಗಿದೆ.[ಮಾದಕವಸ್ತು ಜಾಲದಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಅಂದರ್]

ಈ ಜಾಲದಲ್ಲಿದ್ದ ಇತರರ ಬಂಧನಕ್ಕೆ ಕಾರ್ಯಾಚರಣೆಯೂ ಮುಂದುವರಿದಿದ್ದು, ಮೂರು ಸಾವಿರ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಅಚ್ಚರಿ ಹಾಗೂ ಗಾಬರಿಗೆ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A team of Revenue Intelligence officers raided the premises of M/s Marudhar Drinks in Udaipur, Rajasthan and detected a hidden room full of cartons of Mandrax tablets. It is estimated that it contained about 2 crore tablets.
Please Wait while comments are loading...